ರೈಲ್ವೆ ಸಚಿವಾಲಯ

ಬೆಂಗಳೂರು-ಮುಂಬೈ ನಡುವೆ ಎರಡು ವಾರಕ್ಕೊಮ್ಮೆ ನೂತನ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭ! ಎಲ್ಲೆಲ್ಲಿ ನಿಲುಗಡೆ?
ಪ್ರಯಾಣದ ಹಾದಿಯಲ್ಲಿ ಈ ರೈಲು ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಲೋನಾಂಡ್, ಪುಣೆ, ಲೋನಾವಾಲಾ, ಕರ್ಜತ್, ಕಲ್ಯಾಣ ಮತ್ತು ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ದೆಹಲಿ ಕಾಲ್ತುಳಿತ; ಘಟನೆಯ ವಿಡಿಯೋಗಳನ್ನು ತೆಗೆದುಹಾಕುವಂತೆ X ಗೆ ರೈಲ್ವೆ ಸಚಿವಾಲಯ ಸೂಚನೆ
ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿ ಕಾಲ್ತುಳಿತದಲ್ಲಿ ಒಂಬತ್ತು ಮಹಿಳೆಯರು, ನಾಲ್ಕು ಪುರುಷರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವಿಗೀಡಾಗಿದ್ದರು. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ನಳಿನ್ ಕುಮಾರ್ ಕಟೀಲ್
ಅಕ್ಟೋಬರ್ ಅಂತ್ಯದ ವೇಳೆಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ರೈಲ್ವೆ ಇಲಾಖೆಯಿಂದ ಹೊಸ ಪ್ರಸ್ತಾವನೆ
ರಾಷ್ಟ್ರೀಯ ವನ್ಯಜೀವಿ ಮಂಡಳಿ ರಚಿಸಿರುವ ಸಮಿತಿಯ ಶಿಫಾರಸಿನಂತೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವುದಾಗಿ ರೈಲ್ವೆ ಸಚಿವಾಲಯ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ರೈಲ್ವೆ ಸಚಿವಾಲಯದಿಂದ ನಾಲ್ಕು ಹೊಸ ಬುಲೆಟ್ ಟ್ರೈನ್ ಕಾರಿಡಾರ್ ಪ್ರಸ್ತಾಪ ಸಾಧ್ಯತೆ
ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಗುವಾಹಟಿ, ಜಮ್ಮು ಮತ್ತು ಪಾಟ್ನಾದಂತಹ ಹೆಚ್ಚಿನ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ರೈಲ್ವೆ ಸಚಿವಾಲಯ 2022ರಲ್ಲಿ ರಾಷ್ಟ್ರೀಯ ರೈಲು ಯೋಜನೆಯಡಿ...

ದೀರ್ಘಾವಧಿಯ ಮಾರ್ಗದ ರೈಲು ಪ್ರಯಾಣಿಕರಿಗೆ ಬೇಯಿಸಿದ ಆಹಾರ ಸೇವೆ ನೀಡಲು ರೈಲ್ವೆ ಸಚಿವಾಲಯ ನಿರ್ಧಾರ: ಐಆರ್ ಸಿಟಿಸಿಗೆ ಆದೇಶ
ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ದೀರ್ಘಾವಧಿಯ ನಂತರ ರೈಲ್ವೆ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿದೆ. ಹೀಗಿರುವಾಗ ದೀರ್ಘಾವಧಿಯ ಪ್ರಯಾಣದ ರೈಲುಗಳಲ್ಲಿ ಅಡುಗೆ ಮಾಡಿದ ಆಹಾರ ಸೇವೆಗಳನ್ನು ಕ್ಯಾಟರಿಂಗ್ ಸೇವೆಯಡಿ ಪ್ರಯಾಣಿಕರಿಗೆ ಒದಗಿಸಲು ನಿರ್ಧರಿಸಿದೆ.

ಐಆರ್ಸಿಟಿಸಿ ಯೊಂದಿಗೆ 50:50 ಆದಾಯ ಹಂಚಿಕೆ ಆದೇಶ ಹಿಂಪಡೆದ ಕೇಂದ್ರ
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಸಂಗ್ರಹಿಸಿದ ಕನ್ವಿನಿಯನ್ಸ್ ಶುಲ್ಕ ಗಳಿಸಿದ ಆದಾಯವನ್ನು ನವೆಂಬರ್ 1 ರಿಂದ 50:50 ಅನುಪಾತದಲ್ಲಿ ಹಂಚಿಕೊಳ್ಳುವ ನಿರ್ಧಾರವನ್ನು ರೈಲ್ವೆ ಸಚಿವಾಲಯ ಹಿಂಪಡೆದಿದೆ.

ರೈಲ್ವೆ ರಾಷ್ಟ್ರೀಯ ಪ್ರಶಸ್ತಿಗೆ ಇಬ್ಬರು ಮಹಿಳೆಯರು ಸೇರಿ ರಾಜ್ಯದ 6 ಮಂದಿ ಆಯ್ಕೆ
ರೈಲ್ವೆ ಸಚಿವಾಲಯದಿಂದ 65 ನೇ ವಾರ್ಷಿಕ ರೈಲ್ವೆ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲು ಕರ್ನಾಟಕದ ಆರು ರೈಲ್ವೆ ನೌಕರರನ್ನು ಆಯ್ಕೆ ಮಾಡಲಾಗಿದೆ, ಇದು 'ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ' ಸಿಕ್ಕುವ ಅವಕಾಶವೆಂದು ಪರಿಗಣಿಸಲ್ಪಟ್ಟಿದೆ. ಅವರು ಮಾರ್ಚ್ 2020 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ದೇಶಾದ್ಯಂತ 139 ಪ್ರಶಸ್ತಿ ಪುರಸ್ಕೃತರು ಇದರ ಭಾಗವಾಗಲಿದ್ದಾರೆ.

2023ರ ವೇಳೆ ದೇಶದಲ್ಲಿ ಮೊದಲ ಖಾಸಗಿ ರೈಲು ಸಂಚಾರ, 2027ಕ್ಕೆ ಪೂರ್ಣ ಯೋಜನೆ ಜಾರಿ: ರೈಲ್ವೆ ಇಲಾಖೆ
ದೇಶದ ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರಲ್ಲಿ ಪರಿಚಯಿಸಲಾಗುವುದು ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ಟೈಮ್‌ಲೈನ್ ಪ್ರಕಾರ ಈ ರೈಲುಗಳ ಸಂಚಾರ ನಡೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

