ಕರ್ನಾಟಕ ಬ್ಯಾಂಕ್ ಅಧ್ಯಕ್ಷರಾಗಿ ಪಿ.ಜಯರಾಮ್ ಭಟ್, ಸಿಇಒ ಆಗಿ ಎಂ.ಎಸ್.ಮಹಾಬಲೇಶ್ವರ್ ಪುನರ್ ನೇಮಕ
ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷರನ್ನಾಗಿ ಪಿ ಜಯರಾಮ್ ಭಟ್ ಮತ್ತು ಸಿಇಓ ಆಗಿ ಎಂಎಸ್ ಮಹಾಬಲೇಶ್ವರ ಅವರನ್ನು ಪುನರ್ ಆ್ಕೆ ಮಾಡಲಾಗಿದೆ. ಇವರ ನೇಮಕವನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಅನುಮೋದನೆ ನೀಡಿದೆ.

ಮಂಗಳೂರು: ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷರನ್ನಾಗಿ ಪಿ ಜಯರಾಮ್ ಭಟ್ ಮತ್ತು ಸಿಇಓ ಆಗಿ ಎಂಎಸ್ ಮಹಾಬಲೇಶ್ವರ ಅವರನ್ನು ಪುನರ್ ಆ್ಕೆ ಮಾಡಲಾಗಿದೆ. ಇವರ ನೇಮಕವನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಅನುಮೋದನೆ ನೀಡಿದೆ.
ಭಟ್ ಅವರ ಅವಧಿಯನ್ನು 2021 ರ ನವೆಂಬರ್ 13 ಕ್ಕೆ ವಿಸ್ತರಿಸಲಾಗಿದ್ದು, ಮಹಾಬಲೇಶ್ವರ ಅವರ ಅವಧಿಯನ್ನು ಏಪ್ರಿಲ್ 15 ರಿಂದ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಬ್ಯಾಂಕಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಏಕಾಏಕಿ ಮತ್ತೊಂದು ಜಾಗತಿಕ ಆರ್ಥಿಕ ಹಿಂಜರಿತದ ರೂಪದಲ್ಲಿ ಸವಾಲುಗಳನ್ನು ತೆಗೆದುಕೊಳ್ಳಲು ಬ್ಯಾಂಕ್ ಸಿದ್ಧವಾಗಿದೆ ಎಂದು ಮಹಾಬಲೇಶ್ವರ ಪತ್ರಿಕಾ ಹೇಳಿಕಯಲ್ಲಿ ಉಲ್ಲೇಖಿಸಿದ್ದಾರೆ.
ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪುನಃ ನೇಮಕಗೊಂಡಿದ್ದಕ್ಕಾಗಿ ಮತ್ತು ತಮ್ಮ ಮಾರ್ಗದರ್ಶಕ ಭಟ್ ಅವರ ಅವಧಿಯನ್ನು ಇನ್ನೂ ಒಂದೂವರೆ ವರ್ಷಗಳವರೆಗೆ
ವಿಸ್ತರಿಸಿದ್ದಕ್ಕಾಗಿ ಅವರು ನಿರ್ದೇಶಕರ ಮಂಡಳಿಗೆ ಧನ್ಯವಾದ ಅರ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


