ವಾಣಿಜ್ಯ

ಅಮೇಜಾನ್ ಗೆ 4 ದಶಲಕ್ಷ ಯೂರೋ ದಂಡ ವಿಧಿಸಿದ ಫ್ರಾನ್ಸ್ ನ್ಯಾಯಾಲಯ

ಪಾಲುದಾರ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ನಿಂದನೀಯ ಷರತ್ತುಗಳನ್ನು ವಿಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೈತ್ಯ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಫ್ರಾನ್ಸ್ ನ ವಾಣಿಜ್ಯ ನ್ಯಾಯಾಲಯ 4 ದಶಲಕ್ಷ ಯುರೋ ದಂಡ ವಿಧಿಸಿದೆ.

ಅಮೇಜಾನ್ ಗೆ 4 ದಶಲಕ್ಷ ಯೂರೋ ದಂಡ ವಿಧಿಸಿದ ಫ್ರಾನ್ಸ್ ನ್ಯಾಯಾಲಯ
ಅಮೇಜಾನ್
Published On :

ಪ್ಯಾರಿಸ್:  ಪಾಲುದಾರ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ನಿಂದನೀಯ ಷರತ್ತುಗಳನ್ನು ವಿಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ  ದೈತ್ಯ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಫ್ರಾನ್ಸ್ ನ ವಾಣಿಜ್ಯ ನ್ಯಾಯಾಲಯ 4 ದಶಲಕ್ಷ ಯುರೋ ದಂಡ ವಿಧಿಸಿದೆ.

ಗ್ರಾಹಕರ ವಿಚಾರಣಾ ಸಮಿತಿಯಾದ ಡಿಜಿಸಿಸಿಆರ್ ಎಫ್ ಎರಡು ವರ್ಷಗಳ ಕಾಲ ತನಿಖೆ ನಡೆಸಿ ನೀಡಿದ ವರದಿ ಆಧರಿಸಿ ನ್ಯಾಯಾಲಯ, ಈ ಭಾರಿ ಮೊತ್ತದ ದಂಡ ವಿಧಿಸಿದೆ.

ಪಾಲುದಾರ ಸಂಸ್ಥೆಗೆ 12 ಕ್ಕೂ ಹೆಚ್ಚು ಅನವಶ್ಯಕ ಹಾಗೂ ಅಸಮಾತೋಲಿತ ಷರತ್ತುಗಳನ್ನು ವಿಧಿಸಿದ್ದರಿಂದ ಆ ಸಂಸ್ಥೆ ಅದನ್ನು ಫಾಲಿಸಿಲ್ಲ.  ಈ ಷರತ್ತುಗಳು ಯಾವುದೇ ವಾಣಿಜ್ಯ ಷರತ್ತುಗಳಿಗೆ ಬದ್ಧವಾಗಿರಲಿಲ್ಲ. ಯಾವುದೇ ವಿವರಣೆಗೂ ಕೂಡಾ ಯೋಗ್ಯವಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದು ಇಂತಹ ಪ್ರಕರಣದಲ್ಲಿ ವಿಧಿಸಿದ ಅತಿ ದೊಡ್ಡ ಮೊತ್ತದ ದಂಡವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.