ವಾಣಿಜ್ಯ

ಜಿಯೋ ಕೊಡುಗೆ ಮತ್ತೆ ಒಂದು ತಿಂಗಳು ವಿಸ್ತರಣೆ

ಜಿಯೋಫೋನ್ ಕಳೆದ 3 ವಾರಗಳಲ್ಲಿ ಅಭೂತಪೂರ್ವ ದಾಖಲೆಯ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಜಿಯೋ ಫೋನ್ ಆಫರ್ ಅನ್ನು ಹೆಚ್ಚುವರಿ ಒಂದು ತಿಂಗಳು (ನವೆಂಬರ್) ಮುಂದುವರಿಸಲು ಜಿಯೋ ನಿರ್ಧರಿಸಿದೆ.

ಜಿಯೋ ಕೊಡುಗೆ ಮತ್ತೆ ಒಂದು ತಿಂಗಳು ವಿಸ್ತರಣೆ
ಜಿಯೋ ಕೊಡುಗೆ ಮತ್ತೆ ಒಂದು ತಿಂಗಳು ವಿಸ್ತರಣೆ
Published On :

ಬೆಂಗಳೂರು: ಜಿಯೋಫೋನ್ ದೀಪಾವಳಿ ಆಫರ್ ನೀಡಿದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದು, ಹಲವು ಮಂದಿ ಜಿಯೋ ಪೋನ್ ಕೊಳ್ಳಲು ಮುಗಿಬೀಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಯೋಫೋನ್ ಕಳೆದ 3 ವಾರಗಳಲ್ಲಿ ಅಭೂತಪೂರ್ವ ದಾಖಲೆಯ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಜಿಯೋ ಫೋನ್  ಆಫರ್ ಅನ್ನು ಹೆಚ್ಚುವರಿ ಒಂದು ತಿಂಗಳು (ನವೆಂಬರ್) ಮುಂದುವರಿಸಲು ಜಿಯೋ ನಿರ್ಧರಿಸಿದೆ.

ಜಿಯೋಪೋನ್ ದೀಪಾವಳಿ ಸಮಯದಲ್ಲಿ ಜಿಯೋ ಕುಟುಂಬವನ್ನು ಸೇರಲು ಸಾಧ್ಯವಾಗದ ಫೀಚರ್ ಫೋನ್ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿತ್ತು, ಈ ಸಂದರ್ಭದಲ್ಲಿ ಬಳಕೆದಾರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, ದೀಪಾವಳಿ ಹಬ್ಬದ ಕೊಡುಗೆಯ ಲಾಭಗಳನ್ನು ಪಡೆಯಲು ಮತ್ತು ಜಿಯೋ ಡಿಜಿಟಲ್ ಲೈಫ್ ಆರಂಭಿಸಲು ಮತ್ತೆ ಅವಕಾಶವನ್ನು ನೀಡಲಾಗಿದ್ದು, ಇನ್ನೂ ಒಂದು ತಿಂಗಳು ಈ ಆಫರ್ ಪಡೆದುಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.