ಬೆಂಗಳೂರು ಮೂಲದ ನಿಂಜಾಕಾರ್ಟ್ ನಲ್ಲಿ ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹೂಡಿಕೆ
ಅಮೆರಿಕದ ರಿಟೇಲ್ ದಿಗ್ಗಜ ವಾಲ್‌ಮಾರ್ಟ್ ಹಾಗೂ ಪ್ಲಿಪ್ ಕಾರ್ಟ್ ಜಂಟಿಯಾಗಿ ಬೆಂಗಳೂರು ಮೂಲದ ಬಿಸಿನೆಸ್ 2 ಬಿಸಿನೆಸ್(ಬಿ 2 ಬಿ) ಪೂರೈಕೆ ಕಂಪನಿ ನಿಂಜಾಕಾರ್ಟ್ ನಲ್ಲಿ ಹೂಡಿಕೆ ಮಾಡುವುದಾಗಿ ಬುಧವಾರ ಹೇಳಿವೆ.

ಬೆಂಗಳೂರು: ಅಮೆರಿಕದ ರಿಟೇಲ್ ದಿಗ್ಗಜ ವಾಲ್‌ಮಾರ್ಟ್ ಹಾಗೂ ಪ್ಲಿಪ್ ಕಾರ್ಟ್ ಜಂಟಿಯಾಗಿ ಬೆಂಗಳೂರು ಮೂಲದ ಬಿಸಿನೆಸ್ 2 ಬಿಸಿನೆಸ್(ಬಿ 2 ಬಿ) ಪೂರೈಕೆ ಕಂಪನಿ ನಿಂಜಾಕಾರ್ಟ್ ನಲ್ಲಿ ಹೂಡಿಕೆ ಮಾಡುವುದಾಗಿ ಬುಧವಾರ ಹೇಳಿವೆ.
ದೇಶಾದ್ಯಂತ ಚಿಲ್ಲರೆ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ತಾಜಾ ಉತ್ಪನ್ನಗಳನ್ನು ಪೂರೈಸುವುದು ನಮ್ಮ ಗುರಿಯಾಗಿದೆ ಎಂದು ವಾಲ್ ಮಾರ್ಟ್ ಹಾಗೂ ಫ್ಲಿಪ್ ಕಾರ್ಟ್ ಪ್ರಕಟಣೆಯಲ್ಲಿ ತಿಳಿಸಿವೆ.
ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹಾಗೂ ನಿಂಜಾಕಾರ್ಟ್ ನಡುವಿನ ಹಣಕಾಸು ವಹಿವಾಟಿನ ಬಗ್ಗೆ ಮೂರು ಕಂಪನಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ ನಿಂಜಾಕಾರ್ಟ್ ಜೊತೆಗಿನ ಪಾಲುದಾರಿಕೆ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದೆ.
ನಮ್ಮ ಈ ಹೂಡಿಕೆಯಿಂದ ನಿಂಜಾ ಕಾರ್ಟ್ ವಹಿವಾಟನ್ನು ದೇಶದ ಇತರೆ ನಗರಗಳಿಗೂ ತಲುಪಿಸಲು ಮತ್ತು ಜಾಗತಿಕ ಮಾನ್ಯತೆ ಪಡೆಯಲು ಸಹಾಯಕವಾಗಲಿದೆ ಎಂದು ಹೇಳಿವೆ.
ಹೊಸ ರೀತಿಯ ಹೈಪರ್ ಲೋಕಲ್ ಗ್ರೋಸರಿ ಡೆಲಿವರಿ ಮಾಡೆಲ್ ಗಳನ್ನು ಅಳವಡಿಸಿಕೊಂಡಿರುವ ನಿಂಜಾ ಕಾರ್ಟ್ ಮೊಬೈಲ್ ಅಪ್ಲಿಕೇಷನ್ ಪ್ರಸ್ತುತ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ಸ್ಟೋರ್ ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ವೇಗ ಗುಣಮಟ್ಟದ ಸೇವೆ ನೀಡಲು ಯತ್ನಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


