ವಾಣಿಜ್ಯ

999 ರು.ಗೆ ವಿಮಾನ ಪ್ರಯಾಣ, 10 ಲಕ್ಷ ಗ್ರಾಹಕರಿಗೆ ಇಂಡಿಗೋ ಬಂಪರ್ ಆಫರ್

ಇಂಡಿಗೋ ವಿಮಾನಯಾನ ಕಂಪನಿ 10 ಲಕ್ಷ ಪ್ರಯಾಣಿಕರಿಗಾಗಿ ಬಂಪರ್​ ಆಫರ್​ ನೀಡಿದ್ದು, ಕೇವಲ 999 ರುಪಾಯಿಗೆ ವಿಮಾನ...

999 ರು.ಗೆ ವಿಮಾನ ಪ್ರಯಾಣ, 10 ಲಕ್ಷ ಗ್ರಾಹಕರಿಗೆ ಇಂಡಿಗೋ ಬಂಪರ್ ಆಫರ್
ಸಾಂದರ್ಭಿಕ ಚಿತ್ರ
Published On :
ಮುಂಬೈ: ಇಂಡಿಗೋ ವಿಮಾನಯಾನ ಕಂಪನಿ 10 ಲಕ್ಷ ಪ್ರಯಾಣಿಕರಿಗಾಗಿ ಬಂಪರ್​ ಆಫರ್​ ನೀಡಿದ್ದು, ಕೇವಲ 999 ರುಪಾಯಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ.
ಸೋಮವಾರದಿಂದ ಸೆಪ್ಟಂಬರ್‌ 6ರ ವರೆಗೆ ಇಂಡಿಗೋ ನಾಲ್ಕು ದಿನಗಳ ಭರ್ಜರಿ ಮೆಗಾ ಟಿಕೆಟ್‌ ಮಾರಾಟ ನಡೆಸುತ್ತಿದ್ದು, ದೇಶಿ ಪ್ರಯಾಣಕ್ಕೆ ಕೇವಲ 999 ರು. ಹಾಗೂ ವಿದೇಶಕ್ಕೆ ಪ್ರಯಾಣಕ್ಕೆ 3199 ರು.ಗೆ ಟಿಕೆಟ್‌ ಲಭ್ಯವಿದೆ. 
ಇಂಡಿಗೋ 'ಫೆಸ್ಟಿವಲ್​ ತಿಂಗಳು' ಮೂಲಕ ಈ ವಿಶೇಷ ಕೊಡುಗೆ ನೀಡಿದ್ದು, ಈ ಆಫರ್‌ನಡಿ ಬರೋಬ್ಬರಿ 10 ಲಕ್ಷ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟಿದೆ. ಆದರೆ ಒಂದು ಬದಿಯ ಪ್ರಯಾಣಕ್ಕೆ ಮಾತ್ರ ಈ ಆಫರ್‌ ಅನ್ವಯಿಸುತ್ತದೆ. 
ಇನ್ನು ಮೊಬೈಲ್​ ವ್ಯಾಲೆಟ್​ ಮೊಬಿಕ್ವಿಕ್​ನಿಂದ ವಿಮಾನ್​ ಟಿಕೆಟ್​ ಬುಕ್​ ಮಾಡುವ ಗ್ರಾಹಕರಿಗೆ ಶೇ.20ರಷ್ಟು ಕ್ಯಾಶ್​ಬ್ಯಾಕ್​ ಆಫರ್​ ಸಹ ಇಂಡಿಗೋ ಕಂಪನಿ ನೀಡಿದೆ. 
ವಿಮಾನಯಾನ ಸೆಪ್ಟಂಬರ್​ 18ರಿಂದ 30 ಮಾರ್ಚ 2019ರ ಮಧ್ಯದಲ್ಲಿ ಪ್ರಯಾಣಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.