ಭಾರತೀಯ ಷೇರುಮಾರುಕಟ್ಟೆ ದಾಖಲೆ; 36 ಸಾವಿರ ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ 11 ಸಾವಿರಕ್ಕೆ ಏರಿಕೆ
ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರ ಗಡಿ ಗಾಟಿದ್ದು, ನಿಫ್ಟಿ 11 ಸಾವಿರ ಅಂಕಗಳ ಗಡಿದಾಟಿದೆ.

Published On :
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರ ಗಡಿ ಗಾಟಿದ್ದು, ನಿಫ್ಟಿ 11 ಸಾವಿರ ಅಂಕಗಳ ಗಡಿದಾಟಿದೆ.
ಮಂಗಳವಾರ ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 238.53 ಅಂಕಗಳ ಏರಿಕೆಯೊಂದಿಗೆ 36,036.15 ಅಂಕಗಳಿಗೆ ಏರಿಕೆಯಾಗಿದ್ದು, ಅಂತೆಯೇ ನಿಫ್ಟಿ ಕೂಡ 72.50 ಅಂಕಗಳ ಏರಿಕೆಯೊಂದಿಗೆ 11, 040.25 ಅಂಕಗಳಿಗೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.68ರಷ್ಟು ಪ್ರಗತಿ ಸಾಧಿಸಿದ್ದು, ನಿಫ್ಟಿ ಕೂಡ ಶೇ0.68ರಷ್ಟು ಪ್ರಗತಿ ಸಾಧಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ನ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಆಕ್ಸಿಸ್ ಬ್ಯಾಂಕ್ ನ ಷೇರುಗಳ ಮೌಲ್ಯದಲ್ಲಿ ಶೇ.2.06ರಷ್ಚು ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.1.76ರಷ್ಟು ಏರಿಕೆ ಕಂಡುಬಂದಿದೆ. ಉಳಿದಂತೆ ಒಎನ್ ಜಿಸಿ, ಕೋಲ್ ಇಂಡಿಯಾ, ಟಾಟಾ ಸ್ಟೀಲ್ ಸಂಸ್ಥೆಯ ಷೇರುಗಳು ಶೇ.1.3ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Businessವಾಣಿಜ್ಯMumbaiಮುಂಬೈBSE SensexNSE Niftyಬಿಎಸ್ ಇ ಸೆನ್ಸೆಕ್ಸ್Indian Stock Exchangeಭಾರತೀಯ ಷೇರು ಮಾರುಕಟ್ಟೆಎನ್ ಎಸ್ ಇ ನಿಫ್ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


