ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ನಿರೀಕ್ಷೆ ಬ್ಯಾಂಕ್ ಷೇರು ಏರಿಕೆ
ಬ್ಯಾಂಕಿಂಗ್ ಕ್ಷೇತ್ರಕ್ಕೆ ಜ.18, ಶುಭ ಗುರುವಾರ! ಹೌದು, ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ.

Published On :
ಮುಂಬೈ: ಬ್ಯಾಂಕಿಂಗ್ ಕ್ಷೇತ್ರಕ್ಕೆ ಜ.18, ಶುಭ ಗುರುವಾರ! ಹೌದು, ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ.
ಎಸ್&ಪಿ ಬಿಎಸ್ಇ ಬ್ಯಾಂಕಿಂಗ್ ಇಂಡೆಕ್ಸ್ ನ ಷೇರುಗಳು ಶೇ.1.64 ರಷ್ಟು ಏರಿಕೆ ಕಂಡಿದ್ದು, ಅಂದರೆ 500 ಪಾಯಿಂಟ್ ಗಳಷ್ಟು ಏರಿಕೆ ಕಂಡಿದ್ದು, ಪ್ರಮುಖ ಖಾಸಗಿ ಬ್ಯಾಂಕ್ ಗಳ ಷೇರುಗಳು ಏರಿಕೆಯಾಗಿವೆ.
ಮಧ್ಯಾಹ್ನ 1:30 ರ ವೇಳೆಗೆ ಯೆಸ್ ಬ್ಯಾಂಕ್ ಷೇರುಗಳು ಶೇ.2.99 ರಷ್ಟು ಏರಿಕೆಯಾಗಿತ್ತು. ನಂತರದ ಸ್ಥಾನದಲ್ಲಿ ಹೆಚ್ ಡಿಎಫ್ ಸಿ ಷೇರುಗಳು (ಶೇ.2.79 ಏರಿಕೆ), ಇಂಡಸ್ ಲ್ಯಾಂಡ್ ಬ್ಯಾಂಕ್ (ಶೇ. 2.01 ರಷ್ಟು) ಐಸಿಐಸಿಐ ಬ್ಯಾಂಕ್ (ಶೇ.1.84 ರಷ್ಟು) ಕೋಟಕ್ ಬ್ಯಾಂಕ್ (ಶೇ.1.28 ರಷ್ಟು) ಆಕ್ಸಿಸ್ ಬ್ಯಾಂಕ್ ನ ಷೇರುಗಳು (ಶೇ.0.47 ರಷ್ಟು) ಏರಿಕೆಯಾಗಿವೆ.
ಇನ್ನು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳೂ ಸಹ ಶೇ.0.88 ರಷ್ಟು ಏರಿಕೆಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


