ಟರ್ಕಿ ಆರ್ಥಿಕ ಬಿಕ್ಕಟ್ಟು ಎಫೆಕ್ಟ್, ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದ ರೂಪಾಯಿ!
ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ರೂಪಾಯಿ ಮೌಲ್ಯ 70 ರೂಗಳ ಗಡಿಯಲ್ಲಿದೆ.

Published On :
ಮುಂಬೈ: ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ರೂಪಾಯಿ ಮೌಲ್ಯ 70 ರೂಗಳ ಗಡಿಯಲ್ಲಿದೆ.
ಮೂಲಗಳ ಪ್ರಕಾರ ಟರ್ಕಿ ಆರ್ಥಿಕ ಬಿಕ್ಕಟ್ಟು ಭಾರತದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಇನ್ನು ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಆರ್ ಬಿಐ ಆಲೋಚನೆಯಲ್ಲಿದ್ದು, ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದರೆ ತಾನು ಮಧ್ಯ ಪ್ರವೇಶ ಮಾಡಿ ಆರ್ಥಿಕ ನಿಯಮಗಳಲ್ಲಿ ಬದಲಾವಣೆ ತಂದು ರೂಪಾಯಿ ಮೌಲ್ಯ ಕುಸಿತ ತಡೆಯಲು ಯತ್ನಿಸುವ ಸಾಧ್ಯತೆ ಇದೆ.
ಕಳೆದ ವಾರವಿಡೀ ಚೇತೋಹಾರಿ ವಹಿವಾಟು ಕಂಡಿದ್ದ ಷೇರು ಮಾರುಕಟ್ಟೆ ಇಂದು ಆರಂಭದಲ್ಲೇ ಕುಸಿತಕಂಡಿದೆ. ಪ್ರಮುಖವಾಗಿ ಸಂಸ್ಥೆಗಳ ತ್ರೈಮಾಸಿಕ ವರದಿಯಲ್ಲಿ ಸಾಕಷ್ಚು ಪ್ರಮುಖ ಸಂಸ್ಥೆಗಳೇ ನಷ್ಟ ಅನುಭವಿಸಿರುವುದು ಮಾರುಕಟ್ಟೆಯ ನಕಾರಾತ್ಮಕ ವಹಿವಾಟಿಗೆ ಕಾರಣ ಎನ್ನಲಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 280 ಅಂಕಗಳ ಕುಸಿತ ಕಂಡಿದ್ದು, ನಿಫ್ಟಿ 11350 ಅಂಕಗಳಿಗೆ ಕುಸಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈIndian Stock Exchangeಭಾರತೀಯ ಷೇರುಮಾರುಕಟ್ಟೆUS Dollarಅಮೆರಿಕ ಡಾಲರ್Turkey Crisisಟರ್ಕಿ ಬಿಕ್ಕಟ್ಟು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


