ವಾಣಿಜ್ಯ

ಚಂದಾ ಕೊಚಾರ್ ಸಿಇಒ ಸ್ಥಾನದಲ್ಲಿ ಮುಂದುವರಿಕೆ ವಿಷಯದಲ್ಲಿ ಐಸಿಐಸಿಐ ಆಡಳಿತ ಮಂಡಳಿ ಇಬ್ಭಾಗ!

ಚಂದಾ ಕೊಚಾರ್ ಅವರನ್ನು ಸಿಇಒ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಆಡಳಿತ ಮಂಡಳಿಯಲ್ಲಿ ಬಿರುಕು ಮೂಡಿದ್ದು, ಸಿಇಒ ಸ್ಥಾನದಿಂದ ಕೆಳಗಿಳಿಸಬೇಕೇ ಬೇಡವೇ ಎಂಬ ಬಗ್ಗೆ ಆಡಳಿತ ಮಂಡಳಿಯಲ್ಲೇ ಗೊಂದಲ ಉಂಟಾಗಿದೆ.

ಚಂದಾ ಕೊಚಾರ್ ಸಿಇಒ ಸ್ಥಾನದಲ್ಲಿ ಮುಂದುವರಿಕೆ ವಿಷಯದಲ್ಲಿ ಐಸಿಐಸಿಐ ಆಡಳಿತ ಮಂಡಳಿ ಇಬ್ಭಾಗ!
ಚಂದಾ ಕೊಚಾರ್
Published On :
ಚಂದಾ ಕೊಚಾರ್ ಅವರನ್ನು ಸಿಇಒ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಆಡಳಿತ ಮಂಡಳಿಯಲ್ಲಿ ಬಿರುಕು ಮೂಡಿದ್ದು, ಸಿಇಒ ಸ್ಥಾನದಿಂದ ಕೆಳಗಿಳಿಸಬೇಕೇ ಬೇಡವೇ ಎಂಬ ಬಗ್ಗೆ ಆಡಳಿತ ಮಂಡಳಿಯಲ್ಲೇ ಗೊಂದಲ ಉಂಟಾಗಿದೆ. 
ವಿಡಿಯೊಕಾನ್ ಗ್ರೂಪ್ ಸಾಲ ಪ್ರಕರಣದಲ್ಲಿ ರಾಜೀವ್ ಕೊಚಾರ್ ಹಾಗೂ ಚಂದಾ ಕೊಚಾರ್ ಪತಿ ದೀಪಕ್ ಕೊಚಾರ್ ಅವರ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದಾ ಕೊಚಾರ್ ಅವರನ್ನೂ ವಿಚಾರಣೆಗೊಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ  ಐಸಿಐಸಿಐ ನ ಕೆಲವು  ನಿರ್ದೇಶಕರು ಕೊಚಾರ್ ಅವರನ್ನು ಸಿಇಒ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಪ್ರಕಟಿಸಿದೆ. 
ಸಿಇಒ ಆಗಿ ಚಂದಾ ಕೊಚಾರ್ ಅವರ ಅವಧಿ 2019 ರ ಮಾ.31 ಕ್ಕೆ ಮುಕ್ತಾಯಗೊಳ್ಳಲಿದ್ದು, ಇದಕ್ಕೂ ಮುನ್ನ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸಬೇಕೇ ಎಂಬುದರ ಬಗ್ಗೆ ಆಡಳಿತ ಮಂಡಳಿ ಈ ವಾರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.