ವಾಣಿಜ್ಯ

ಜಾಗತಿಕ ಇ ಕಾಮರ್ಸ್ ದೈತ್ಯ ಅಮೇಜಾನ್ ನಿಂದ ಫ್ಲಿಪ್ ಕಾರ್ಟ್ ಖರೀದಿಗೆ ಚಿಂತನೆ: ವರದಿ

ಜಾಗತಿಕ ಆನ್ ಲೈನ್ ಮಾರುಕಟ್ಟೆಯ ದೈತ್ಯ ಅಮೇಜಾನ್ ಡಾಟ್ ಕಾಂ, ಭಾರತೀಯ ಮೂಲದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಕರೀದಿಗೆ ಮುಂದಾಗ........

ಜಾಗತಿಕ ಇ ಕಾಮರ್ಸ್ ದೈತ್ಯ ಅಮೇಜಾನ್ ನಿಂದ ಫ್ಲಿಪ್ ಕಾರ್ಟ್ ಖರೀದಿಗೆ ಚಿಂತನೆ: ವರದಿ
ಅಮೆಜಾನ್
Published On :
ಮುಂಬೈ: ಜಾಗತಿಕ ಆನ್ ಲೈನ್ ಮಾರುಕಟ್ಟೆಯ ದೈತ್ಯ ಅಮೇಜಾನ್ ಡಾಟ್ ಕಾಂ, ಭಾರತೀಯ ಮೂಲದ ಇ-ಕಾಮರ್ಸ್  ಸಂಸ್ಥೆ ಫ್ಲಿಪ್ ಕಾರ್ಟ್ ನ ಕರೀದಿಗೆ ಮುಂದಾಗಬಹುದು ಎಂದು ಸ್ಥಳೀಯ ಮಾದ್ಯಮವೊಂದು ವರದಿ ಮಾಡಿದೆ.
ಆದರೆ ವಾಲ್ಮಾರ್ಟ್ ಇಂಕ್ ಜತೆಗೆ ಇದಾಗಲೇ ಫ್ಲಿಪ್ ಕಾರ್ಟ್ ಈ ಸಂಬಂಧ ಮಾತುಕತೆಗೆ ಮುಂದಾಗಿದೆ ಭಾರತದ ಏರುಗತಿಯ ಆನ್ ಲೈನ್ ವಹಿವಾಟಿನ ವಲಯದಲ್ಲಿ ಪ್ರಾಬಲ್ಯ ಸಾಧಿಸಲು ಅಮೆರಿಕಾ ಮೂಲದ ಈ ಎರಡೂ ಸಂಸ್ಥೆಗಳು ಪೈಪೋಟಿ ನಡೆಸಿದ್ದಾರೆ.
ತನ್ನ ಭಾರತೀಯ ಪ್ರತಿಸ್ಪರ್ಧಿ ಪ್ಲಿಪ್ ಕಾರ್ಟ್ ನ್ನು ಖರೀದಿಸಲು ಈ ಕೆಲವು ದಿನಗಳ ಹಿಂದೆಯೇ ಅಮೇಜಾನ್ ಮಾತುಕತೆಗೆ ಮುಂದಾಗಿತ್ತು. ಆದರೆ ಫ್ಲಿಪ್ ಕಾರ್ಟ್, ವಾಲ್ ಮಾರ್ಟ್ ಜತೆ ಮಾತುಕತೆ ನಡೆಸಲು ಹೆಚ್ಚು ಉತ್ಸುಕವಾಗಿದೆ ಎಂದು ಮಿಂಟ್ ದೈನಂದಿನ ಪತ್ರಿಕೆ ವರದಿ ಮಾಡಿದೆ.
ಫ್ಲಿಪ್ ಕಾರ್ಟ್ , ಅಮೇಜಾನ್ ನೊಡನೆ ಸೇರುವ ಸಾಧ್ಯತೆ ಕಡಿಮೆ ಇದೆ ಎಂದು ಈ ವಿಚಾರ ತಿಳಿದಿರುವ ಓರ್ವ ವ್ಯಕ್ತಿ ರಾಯ್ಟರ್ಸ್ ಗೆ ತಿಳಿಸಿದ್ದಾರೆ.ಪ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದಂತೆಯೇ ಅಂತಹ ವ್ಯವಹಾರವು ಏಕಸ್ವಾಮ್ಯವನ್ನುಂಟುಮಾಡುತ್ತದೆ ಎಂದು ಅವರು ಹೇಳಿದರು.
ಅಮೆಜಾನ್ ಹಾಗೂ ಫ್ಲಿಪ್ ಕಾರ್ಟವರನ್ನು ಈ ಸಂಬಂಧ ಪ್ರಶ್ನಿಸಲು ರಾಯ್ಟರ್ಸ್ ಯತ್ನಿಸಿದಾಗ ಅಮೆಜಾನ್ ಕಾಮೆಂಟ್ ಮಾಡಲು ನಿರಾಕರಿದೆ, ಹಾಗೆಯೇ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ಸಹ ಪ್ರತಿಕ್ರಿಯೆ ನೀಡಿರಲಿಲ್ಲ.
ಫ್ಲಿಪ್ ಕಾರ್ಟ್ ನ 40 ಶೇ. ಪಾಲುದಾರಿಕೆಯನ್ನು ಖರೀದಿಸಲು ವಾಲ್ ಮಾರ್ಟ್ ಮುಂದಾಗಿದೆ ಎಂದು ರಾಯ್ಟರ್ಸ್ ಫೆಬ್ರುವರಿಯಲ್ಲಿ ವರದಿ ಮಾಡಿತ್ತು. ಇದು ಜಾಗತಿಕವಾಗಿ ಅತಿ ದೊಡ್ಡ ಇ-ಕಾಮರ್ಸ್ ಮಾರುಕಟ್ಟೆಯ  ವ್ಯವಹಾರವಾಗಲಿದೆ. ಇದೊಮ್ಮೆ ಸಾಧ್ಯವಾದರೆ ಏಷ್ಯಾದ ಮೂರನೆಯ ಅತಿದೊಡ್ಡ ಆರ್ಥಿಕತೆಯಲ್ಲಿ ಅಮೆಜಾನ್ ಗೆ ನೇರ ಸವಾಲನ್ನು ಒಡ್ಡಲಿದೆ. ಅಮೇಜಾನ್ ಭಾರತದಲ್ಲಿ ಆನ್ ಲೈನ್ ಕಿರಾಣಿ ಸಾಮಾನು ವಿತರಣೆಗಾಗಿ  5 ಶತಕೋಟಿ ಡಾಲರ್  ಹೂಡಿಕೆ ಗೆ ಬದ್ದವಾಗಿದೆ.
ಫ್ಲಿಪ್ ಕಾರ್ಟ್ ನ ಬಹುತೇಕ ಪಾಲನ್ನು ವಾಲ್ ಮಾರ್ಟ್ ಖರೀದಿಸಲಿದೆ. ಒಪ್ಪಂದದ ಪ್ರಕಾರ ಪ್ರಾಥಮಿಕ ಮತ್ತು ದ್ವಿತೀಯ ಪಾಲು ಖರೀದಿಗಳ ಮೂಲಕ ಈ ವ್ಯವಹಾರ ನಡೆಯುತ್ತದೆ. ಭಾರತೀಯ ಸಂಸ್ಥೆಯನ್ನು 21 ಬಿಲಿಯನ್ ಡಾಲರ್ ಗಳಿಗೆ ವಾಲ್ ಮಾರ್ಟ್ ಖರೀದಿಸಲಿದೆ ಎಂದು ಮಿಂಟ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.