ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಇಳಿಕೆ
ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಕಡಿಮೆಯಾಗಿದ್ದು 83,346 ಕೋಟಿಗೆ ಇಳಿಕೆಯಾಗಿದೆ.

Published On :
ನವದೆಹಲಿ: ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಕಡಿಮೆಯಾಗಿದ್ದು 83,346 ಕೋಟಿಗೆ ಇಳಿಕೆಯಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ 92,000 ಕೋಟಿಯಷ್ಟು ಜಿಎಸ್ ಟಿ ಸಂಗ್ರಹವಾಗಿತ್ತು, ಆದರೆ ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಕುಸಿತ ಕಂಡಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಹಲವು ಸರಕುಗಳ ದರವನ್ನು ಕಡಿಮೆ ಮಾಡಲಾಗಿರುವುದು ಹಾಗೂ ತೆರಿಗೆ ಆಡಳಿತ ಆದಾಯಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಣೆ, ಇ-ವೇ ಬಿಲ್ ನ್ನು ಆಧರಿಸಿರುವುದು ಹಾಗೂ ರಿಸರ್ವ್ ಚಾರ್ಜಿಂಗ್ ಮುಂದೂಡಿರುವುದು ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಲು ಕಾರಣ ಎಂದು ಹಣಕಾಸು ಇಲಾಖೆ ಹೇಳಿದೆ.
ಜುಲೈ ಹಾಗೂ ಆಗಸ್ಟ್ ನಲ್ಲಿ 10 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಪರಿಹಾರ ಮೊತ್ತವಾಗಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದ್ದು, 13,695 ಕೋಟಿ ರೂಪಾಯಿಗಳನ್ನು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


