ವಾಣಿಜ್ಯ

ಜಿಯೋಗೆ ಸೆಡ್ಡು ಹೊಡೆದ ಏರ್ ಟೆಲ್: ಗ್ರಾಹಕರಿಗೆ ಬಂಪರ್ ಆಫರ್

ರಿಲಾಯನ್ಸ್ ಜಿಯೋಗೆ ಕೌಂಟರ್ ಕೊಡುವ ಸಲುವಾಗಿ ಭಾರ್ತಿ ಏರ್ ಟೆಲ್ ಬಂಪರ್'ನಲ್ಲೇ ಬಂಪರ್ ಆಫರ್ ಪ್ರಕಟಿಸಿದೆ....

ಜಿಯೋಗೆ ಸೆಡ್ಡು ಹೊಡೆದ ಏರ್ ಟೆಲ್: ಗ್ರಾಹಕರಿಗೆ ಬಂಪರ್ ಆಫರ್
ಏರ್ ಟೆಲ್
Published On :
ನವದೆಹಲಿ: ರಿಲಾಯನ್ಸ್ ಜಿಯೋಗೆ ಕೌಂಟರ್ ಕೊಡುವ ಸಲುವಾಗಿ  ಭಾರ್ತಿ ಏರ್ ಟೆಲ್ ಬಂಪರ್'ನಲ್ಲೇ ಬಂಪರ್ ಆಫರ್ ಪ್ರಕಟಿಸಿದೆ. 
ಎಕ್ಸ್ ಕ್ಲೂಸಿವ್  ವೆಬ್ ಆಫರ್ ಹೆಸರಿನಲ್ಲಿ ಈ ಆಫರ್'ಅನ್ನು ಪ್ರಕಟಿಸಿದ್ದು ಆಯ್ದ ಬ್ರಾಡ್'ಬ್ಯಾಂಡ್ ಬಳಕೆದಾರರಿಗೆ ಮಾತ್ರ ಪ್ರಸ್ತುತ ಯೋಜನೆ ಅನ್ವಯವಾಗಲಿದೆ.
750 ಹಾಗೂ 1000 ಜಿಬಿ ಬೋನಸ್ ಡಾಟಾ ಯೋಜನೆಯು ಒಂದು ವರ್ಷದ ಆಫರ್' ಆಗಿದ್ದು, ಬ್ರಾಡ್'ಬ್ಯಾಂಡ್ ಯೋಜನೆಗಳನ್ನು ಆನ್'ಲೈನ್'ನಲ್ಲಿ ಯಾರು ಪಡೆದುಕೊಳ್ಳುತ್ತಾರೋ ಅವರಿಗೆ ಇದು ಲಭ್ಯವಾಗಲಿದೆ. ಪ್ರಸ್ತುತ ಯೋಜನೆಯು ದೆಹಲಿ ವೃತ್ತಕ್ಕೆ ಅನ್ವಯವಾಗಲಿದ್ದು, ಶೀಘ್ರದಲ್ಲಿಯೇ ಬೆಂಗಳೂರು ಒಳಗೊಂಡಂತೆ ಎಲ್ಲ ನಗರಗಳಿಗೂ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.
899 ರೂ.ಗಳಿಂದ ಈ ಯೋಜನೆಗಳು ಆರಂಭವಾಗಲಿವೆ. ತಿಂಗಳ ಈ ಯೋಜನೆಯಲ್ಲಿ ಅನಿಯಮಿತ ಎಸ್'ಟಿಡಿ ಕರೆಗಳು ಉಚಿತವಾಗಿತ್ತವೆ. ಜೊತೆಗೆ 16 ಎಂಬಿಪಿಎಸ್ ವೇಗದೊಂದಿಗೆ 60 ಜಿಬಿ ಡಾಟಾ ದೊರೆಯಲಿದೆ. ಇದರೊಂದಿಗೆ ತಿಂಗಳಿಗೆ 65 ಜಿಬಿಯೊಂದಿಗೆ ವರ್ಷಕ್ಕೆ 750 ಜಿಬಿ ಬೋನಸ್ ಡಾಟಾ ದೊರೆಯಲಿದೆ.
1000 ಜಿಬಿ ಬೋನಸ್ ಡಾಟಾ ಯೋಜನೆಯನ್ನು ಪಡೆದುಕೊಳ್ಳಬೇಕಾದರೆ, 40 ಎಂಬಿಪಿಎಸ್ ವೇಗದ 90 ಜಿಬಿ ಡಾಟಾ ಹೊಂದಿರುವ ರೂ. 1099, 100 ಎಂಬಿಪಿಎಸ್ ವೇಗದ 125 ಜಿಬಿ ಡಾಟಾ ಯೋಜನೆಯ ರೂ.1299 ಹಾಗೂ ಅಷ್ಟೇ ವೇಗ ಹೊಂದಿರುವ 160 ಜಿಬಿಯ 1499, 220 ಜಿಬಿಯ ರೂ.1799 ಯೋಜನೆಯನ್ನು ಅಳವಡಿಸಿಕೊಳ್ಳಬೇಕು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.