ವಾಣಿಜ್ಯ

ಕೇವಲ 18 ತಿಂಗಳಲ್ಲಿ 25 ಪೇಟೆಂಟ್; ಮೈಸೂರಿನ ಸ್ಟಾರ್ಟ್ ಅಪ್ ಕಂಪನಿಯ ಸಾಧನೆ

ಕೇವಲ 18 ತಿಂಗಳಲ್ಲಿ 25 ಪೇಟೆಂಟ್..ಇದು ಜಪಾನ್ ನ ಶುನ್ಪೈ ಯಮಾಝಾಕಿ ಅಥವಾ ಆಸ್ಟ್ರೇಲಿಯಾದ ಕಿಯಾ ಸಿಲ್ವರ್ ಬ್ರೂಕ್ ಸಂಸ್ಥೆಯ ಸಾಧನೆಯಲ್ಲ. ಬದಲಿಗೆ ನಮ್ಮದೇ ಮೈಸೂರು ಮೂಲದ ಒಂದು ಸ್ಟಾರ್ಟ್ ಅಪ್ ಸಂಸ್ಥೆಯ ಸಾಧನೆ.

ಕೇವಲ 18 ತಿಂಗಳಲ್ಲಿ 25 ಪೇಟೆಂಟ್; ಮೈಸೂರಿನ ಸ್ಟಾರ್ಟ್ ಅಪ್ ಕಂಪನಿಯ ಸಾಧನೆ
ಅಲ್ಲಿನೋವ್ ರೀಸರ್ಚ್ ಅಂಡ್ ಡೆವಲಪ್ ಮೆಂಟ್ ತಂಡ
Published On :

ಮೈಸೂರು: ಕೇವಲ 18 ತಿಂಗಳಲ್ಲಿ 25 ಪೇಟೆಂಟ್..ಇದು ಜಪಾನ್ ನ ಶುನ್ಪೈ ಯಮಾಝಾಕಿ ಅಥವಾ ಆಸ್ಟ್ರೇಲಿಯಾದ ಕಿಯಾ ಸಿಲ್ವರ್ ಬ್ರೂಕ್ ಸಂಸ್ಥೆಯ ಸಾಧನೆಯಲ್ಲ. ಬದಲಿಗೆ ನಮ್ಮದೇ ಮೈಸೂರು ಮೂಲದ ಒಂದು ಸ್ಟಾರ್ಟ್ ಅಪ್ ಸಂಸ್ಥೆಯ ಸಾಧನೆ.

ಜಪಾನ್ ನ ಶುನ್ಪೈ ಯಮಾಝಾಕಿ ಅಥವಾ ಆಸ್ಟ್ರೇಲಿಯಾದ ಕಿಯಾ ಸಿಲ್ವರ್ ಬ್ರೂಕ್ ಸಂಸ್ಥೆ ತಮ್ಮ ಪೇಟೆಂಟ್ ನಿಂದಾಗಿಯೇ ಖ್ಯಾತಿಗಳಿಸಿದ್ದು, ಈ ಸಂಸ್ಥೆಗಳು ತಲಾ 10 ಸಾವಿರ ಪೇಟೆಂಟ್ ಹೊಂದಿವೆ. ಇದೀಗ ಇದೇ ಹಾದಿಯಲ್ಲಿ  ನಮ್ಮ ಮೈಸೂರಿ ಸ್ಟಾರ್ಟ್ ವೊಂದು ಸಾಗಿದ್ದು, ಸಂಸ್ಥೆ ಆರಂಭವಾದ ಕೇವಲ 18 ತಿಂಗಳಲ್ಲಿ ಬರೊಬ್ಬರಿ 25 ಪೇಟೆಂಟ್ ಗಳನ್ನು ಸಾಧಿಸಿದೆ. "ಅಲ್ಲಿನೋವ್ ರೀಸರ್ಚ್ ಅಂಡ್ ಡೆವಲಪ್ ಮೆಂಟ್" ಎಂಬ ಸ್ಟಾರ್ಟ್ ಅಪ್ ಸಂಸ್ಥೆ ಈ ಸಾಧನೆ  ಮಾಡಿದ್ದು, ಭಾರತದಲ್ಲಿ ಈ ಸಾಧನೆಗೈದ ಮೊದಲ ಸ್ಟಾರ್ಟ್ ಎಂಬ ಖ್ಯಾತಿಗೂ ಸಂಸ್ಥೆ ಪಾತ್ರವಾಗಿದೆ.

ಅಲ್ಲಿನೋವ್ ರೀಸರ್ಚ್ ಅಂಡ್ ಡೆವಲಪ್ ಮೆಂಟ್ ಸ್ಟಾರ್ಟ್ ಅಪ್ ಅನ್ನು ಗೌತಮಿ ಎಂಬ ಮಹಿಳೆ ತಮ್ಮ ಹಲವು ಸ್ನೇಹಿತರೊಂದಿಗೆ ಸೇರಿ ಸ್ಥಾಪಿಸಿದ್ದು, ಈಗಾಗಲೇ ತನ್ನ ಹಲವು ವಿಶಿಷ್ಟ ವಸ್ತುಗಳಿಗೆ ಸಂಸ್ಥೆ ಪೇಟೆಂಟ್ ಪಡೆದಿದೆ.  ಟೂತ್ ಪೇಸ್ಟ್ ನೊಂದಿಗಿರುವ ಟೂತ್ ಬ್ರಷ್, ಸ್ವಯಂ ಚಾರ್ಜಿಂಗ್ ವ್ಯವಸ್ಥೆಯ ಮೊಬೈಲ್ ಫೋನ್, ಸ್ವಯಂ ಬಿಸಿಯಾಗುವ ಕಾಫಿ ಮಗ್, ನೀರು ಶುದ್ದೀಕರಣದ ಯಂತ್ರ, ಹೆಲ್ಮೆಟ್ ಲಾಕ್ ಸೇರಿದಂತೆ ಹಲವು ವಿನೂತನ ವಸ್ತುಗಳನ್ನು  ಸಂಸ್ಥೆ ತಯಾರಿಸಿದ್ದು, ಈ ಎಲ್ಲ ವಸ್ತುಗಳಿಗೂ ಪೇಟೆಂಟ್ ಮಾಡಿಸಿಕೊಂಡಿದೆ. ಈ 25 ಪೇಟೆಂಟ್ ಗಳ ಪೈಕಿ 20 ಪೇಟೆಂಟ್ ಗಳು ಸಂಸ್ಥೆಯಲ್ಲಿನ ಸಿಬ್ಬಂದಿಗಳ ಹೆಸರಿಲ್ಲದ್ದರೆ, ಉಳಿದ ಪೇಟೆಂಟ್ ಗಳು ಸಂಸ್ಥೆಯೊಂದಿಗೆ ಸಹಭಾಗಿತ್ವ  ಹೊಂದಿರುವ ಸಂಸ್ಥೆ ಅಥವಾ ವ್ಯಕ್ತಿಗಳ ಹೆಸರಿನಲ್ಲಿದೆ.

ಕೇವಲ ಈ 25 ಪೇಟೆಂಟ್ ಗಳು ಮಾತ್ರವಲ್ಲದೇ ತಾನು ತಯಾರಿಸಿರುವ ಮತ್ತಷ್ಟು ವಿನೂತನ ವಸ್ತುಗಳಿಗೆ ಸಂಸ್ಥೆ ಪೇಟೆಂಟ್ ಪಡೆಯಲು ನಿರ್ಧರಿಸಿದ್ದು, ಆ ಮೂಲಕ ಸಂಸ್ಥೆಯ ಪೇಟೆಂಟ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.  ಪ್ರಸ್ತುತ ಸಂಸ್ಥೆಯಲ್ಲಿ 200ಕ್ಕೂ ಅಧಿಕ ಪ್ರಮಾಣೀಕೃತ ಸಂಶೋಧಕರಿದ್ದು, ದೇಶ ವಿದೇಶಗಳ ಪ್ರತಿಷ್ಟಿತ ಸಂಸ್ಥೆಗಳಿಂದ ಕಲಿತವರಾಗಿದ್ದಾರೆ. ಇತ್ತೀಚೆಗಷ್ಟೇ ಅಂದರೆ 2017ರಲ್ಲಿ ದೆಹಲಿಯಲ್ಲಿ ಈ ಸಂಸ್ಥೆ ರಾಷ್ಟ್ರೀಯ ಬೌದ್ಧಿಕ ಆಸ್ತಿ ಪ್ರಶಸ್ತಿ  -20i7 (National Intellectual Property Award-20i7)ಗೆ ಭಾಜನವಾಗಿತ್ತು.

ಇನ್ನು ತಮ್ಮ ಸಂಸ್ಥೆ ಬಗ್ಗೆ ಮಾತನಾಡಿರುವ ಸಂಸ್ಥೆಯ ಸಂಸ್ಥಾಪಕಿ ಗೌತಮಿ ಅವರು ಗ್ರಾಹಕ ಸ್ನೇಹಿ ಮತ್ತು ಅಗ್ಗದ ವಿನೂತನ ವಸ್ತುಗಳನ್ನು ಸಂಶೋಧಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.