ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್
ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ.

Published On :
ನವದೆಹಲಿ: ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ.
ಯಾವುದೇ ಮೊಬೈಲ್ ನೆಟ್ವರ್ಕ್ ಗೆ ಅನಿಯಮಿತ ಕರೆ ಮಾಡಬಹುದಾಗಿದ್ದು, 6೦ ದಿನಗಳವರೆಗೆ ಡಾಟಾ ಸೇವೆಗಳನ್ನು ಪಡೆಯಬಹುದಾಗಿದೆ. ಸಿಕ್ಸರ್ ಆಫರ್ ನ ಹೊರತಾಗಿಯೂ ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗಾಗಿ ದಿಲ್ ಖೋಲ್ ಕೆ ಬೋಲ್-349, ತ್ರಿಪಲ್ ಎಸಿಇ-333 ಹಾಗೂ ಚೌಕಾ-444 ಆಫರ್ ಗಳನ್ನು ಒದಗಿಸಿದೆ.
ಕರೆ ಹಾಗೂ ಡಾಟಾ ಬಳಕೆಯ ಟ್ರೆಂಡ್ ಗೆ ಅನುಸಾರವಾಗಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಬಿಎಸ್ಎನ್ಎಲ್ ಬದ್ಧವಾಗಿದೆ ಎಂದು ಬಿಎಸ್ಎನ್ಎಲ್ ನ ನಿರ್ದೇಶಕರು ಹೇಳಿದ್ದಾರೆ. ಬಿಎಸ್ಎನ್ಎಲ್ ಇತ್ತೀಚೆಗಷ್ಟೇ ರಂಜಾನ್ ಹಬ್ಬದ ಅಂಗವಾಗಿ 786 ಹಾಗೂ 599 ರೂಪಾಯಿಗಳ ವಿಶೇಷ ಕಾಂಬೋ ವೊಚರ್ ಗಳನ್ನು ಪರಿಚಯಿಸಿತ್ತು. ಇದಕ್ಕೂ ಮುನ್ನ 444 ರೂಪಾಯಿಗಳಿಗೆ 90 ದಿನಗಳ ವರೆಗೆ ಪ್ರತಿ ದಿನ 4 ಜಿಬಿಯಂತೆ ಡಾಟಾ ಬಳಕೆ ಸೌಲಭ್ಯ ಒದಗಿಸಿತ್ತು. ಇದಕ್ಕೂ ಮುನ್ನ ತ್ರಿಪಲ್ ಎಸಿಇ-333 ಆಫರ್ ನ್ನು ಪರಿಚಯಿಸಿದ್ದ ಬಿಎಸ್ಎನ್ಎಲ್ ಪ್ರತಿ ದಿನಕ್ಕೆ 3 ಜಿಬಿಯಂತೆ 90 ದಿನಗಳ ವರೆಗೆ ಡಾಟಾ ಬಳಕೆ ಸೌಲಭ್ಯ ನೀಡಿತ್ತು.
ಜಿಯೋಗೆ ಪರ್ಯಾಯವಾಗಿ ಬಿಎಸ್ಎನ್ಎಲ್ ಸಹ ಆಕರ್ಷಕ ಆಫರ್ ಗಳನ್ನು ಪರಿಚಯಿಸುತ್ತಿದ್ದು, ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ ಸಿಗುವ ಬಿಎಸ್ಎನ್ಎಲ್ ಸಿಕ್ಸರ್ ಆಫರ್ ನ್ನು ಪರಿಚಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


