ವಾಣಿಜ್ಯ

ರು. 2 ಲಕ್ಷಕ್ಕಿಂತ ಹೆಚ್ಚು ಮೊತ್ತದ ನಗದು ವಹಿವಾಟು ನಡೆಸುವವರಿಗೆ ಐಟಿ ಎಚ್ಚರಿಕೆ

ಎರಡು ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೆ ಪ್ರಮಾಣದ ದಂಡ ಹಾಕುವುದಾಗಿ...

ರು. 2 ಲಕ್ಷಕ್ಕಿಂತ ಹೆಚ್ಚು ಮೊತ್ತದ ನಗದು ವಹಿವಾಟು ನಡೆಸುವವರಿಗೆ ಐಟಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಎರಡು ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೆ ಪ್ರಮಾಣದ ದಂಡ ಹಾಕುವುದಾಗಿ ಶುಕ್ರವಾರ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಇದೇ ವೇಳೆ ಅಕ್ರಮವಾಗಿ ಎರಡು ಲಕ್ಷ ರುಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ಇದ್ದರೆ ಆ ಕುರಿತು 'blackmoneyinfo@incometax.gov.in'. ಗೆ ಮೇಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಜನತೆಯನ್ನು ಕೋರಿದೆ.
ಕಪ್ಪು ಹಣ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಏಪ್ರಿಲ್ 1, 2017ರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟನ್ನು ನಿಷೇಧಿಸಿದೆ.
ಒಂದೇ ವಹಿವಾಟಿನಲ್ಲಿ ಅಥವಾ ಒಂದೇ ಸಂದರ್ಭ, ಈವೆಂಟ್ ಅಥವಾ ಓರ್ವ ವ್ಯಕ್ತಿಗೆ ಸಂಬಂಧಪಟ್ಟಂತೆ 2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರವನ್ನು ಯಾರೂ ನಡೆಸುವಂತಿಲ್ಲ. ಆದಾಯ ತೆರಿಗೆ ನೀತಿಯ ಸೆಕ್ಷನ್ 269ST ಅನ್ವಯ ಅಪರಾಧಿಗಳಿಗೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.