ಗಗನಕ್ಕೇರಿದ ಟೊಮಾಟೋ ದರ: ಕೆಜಿಗೆ 80 ರಿಂದ 100 ರು.
ಚಿಲ್ಲರೆ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಟೊಮಾಟೋ ದರ ಮುಗಿಲು ಮುಟ್ಟಿದ್ದು, ಒಂದು ಕೆಜಿ ಟೊಮಾಟೋ ದರ ಬರೊಬ್ಬರಿ 80-100 ರು.ಗಳಿಗೇರಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಟೊಮಾಟೋ ದರ ಮುಗಿಲು ಮುಟ್ಟಿದ್ದು, ಒಂದು ಕೆಜಿ ಟೊಮಾಟೋ ದರ ಬರೊಬ್ಬರಿ 80-100 ರು.ಗಳಿಗೇರಿದೆ ಎಂದು ತಿಳಿದುಬಂದಿದೆ.
ದರ ಏರಿಕೆಗೆ ಪ್ರಮುಖವಾಗಿ ಪೂರೈಕೆ ಕೊರತೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಹವಮಾನ ಮತ್ತು ಬೆಳೆ ನಷ್ಟ ಕೂಡ ದರ ಏರಿಕೆಗೆ ಕಾರಣ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಟೊಮಾಟೋ ಮಾತ್ರವಲ್ಲದೇ ಈರುಳ್ಳಿ ಮತ್ತು ಆಲೂಗೆಡ್ಡೆ ದರಗಳಲ್ಲಿಯೂ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದು, ಮಹಾರಾಷ್ಟ್ರದಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಟೊಮಾಟೋ ಬೆಳೆ ನಷ್ಟವಾದ್ದರಿಂದ ಪೂರೈಕೆಯಲ್ಲಿ ಕೊರತೆಯುಟಾಗಿದೆ ಎಂದು ತಿಳಿದುಬಂದಿದೆ.
ಹೋಲ್ ಸೇಲ್ ಮಂಡಿಯಲ್ಲೇ ಪ್ರತೀ ಕೆಜಿಗೆ ಟೊಮ್ಯಾಟೋ ದರ 65-70 ರುಗಳಾಗಿದ್ದು, ಚಿಲ್ಲರೆ ಮಾರುಕಟ್ಟೆಗೆ ಬರುವಹೊತ್ತಿಗೆ ಅದರ ದರ 80-ರಿಂದ 100 ಗಳಿಗೇರಿದೆ. ಮೂಲಗಳ ಪ್ರಕಾರ ಪ್ರತಿನಿತ್ಯ ಎಪಿಎಂಸಿ ಯಾರ್ಡ್ ಗೆ ಸುಮಾರು 65 ರಿಂದ 70 ಟ್ರಕ್ ಗಳಲ್ಲಿ ಟೊಮ್ಯಾಟೋ ಬರುತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ನಿತ್ಯ 3 -5 ಟ್ರಕ್ ಗಳಲ್ಲಿ ಮಾತ್ರ ಟೊಮ್ಯಾಟೋ ಬೆಳೆ ಬರುತ್ತಿದೆ ಎಂದು ವರ್ತಕರೊಬ್ಬರು ಹೇಳಿದ್ದಾರೆ. ಇದೇ ಕೇವಲ ಕರ್ನಾಟಕ ಮಾತ್ರವಲ್ಲದೇ ನಾಸಿಕ್ ಮಾರುಕಟ್ಟೆ, ಚೆನ್ನೈ, ರಾಜಸ್ತಾನ, ಹಿಮಾಚಲ ಪ್ರದೇಶ, ಗುಂಟೂರು ಎಪಿಎಂಸಿ, ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿದೆ ಎಂದು ವರ್ತಕರು ಹೇಳಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲೇ ತರಕಾರಿ ಬೆಲೆಗಳು ಏರಿಕೆಯಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


