ಜಿಯೋಗೆ ಏರ್‌ಟೆಲ್ ಸೆಡ್ಡು; 4ಜಿ ಗ್ರಾಹಕರಿಗೆ ಪ್ರತಿ ತಿಂಗಳು 3ಜಿಬಿ ಹೆಚ್ಚುವರಿ ಫ್ರೀ ಡಾಟಾ
ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಜಿಯೋಗೆ ಸೆಡ್ಡು ಹೊಡೆಯಲು ದೇಶದ ಅತಿ ದೊಡ್ಡ ಮೊಬೈಲ್...

Published On :
ನವದೆಹಲಿ: ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಜಿಯೋಗೆ ಸೆಡ್ಡು ಹೊಡೆಯಲು ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್ ಇದೀಗ ತನ್ನ ಗ್ರಾಹಕರಿಗೆ ಪ್ರತಿ ತಿಂಗಳು 3ಜಿಬಿ ಹೆಚ್ಚುವರಿಯಾಗಿ ಡಾಟಾವನ್ನು ಘೋಷಿಸಿದೆ.
ಒಂದು ವರ್ಷ ಕಾಲ ತನ್ನ 4ಜಿ ಗ್ರಾಹಕರಿಗೆ ಏರ್‌ಟೆಲ್ ಉಚಿತ 3ಜಿಬಿ ಡಾಟಾವನ್ನು ನೀಡಲಿದೆ. ಈ ಉಚಿತ ಆಫರ್ ಇಂದಿನಿಂದಲೇ ಆರಂಭವಾಗಲಿದೆ. ಪ್ರತಿ ತಿಂಗಳ ಡಾಟಾ ಪ್ಲ್ಯಾನ್ ಹಾಕಿಸಿಕೊಂಡರೆ ಮಾತ್ರ ಈ ಉಚಿತ ಸೇವೆ ಸಿಗಲಿದೆ. ಗ್ರಾಹಕರು ತಿಂಗಳಿಗೆ 345 ರುಪಾಯಿ ರಿಚಾರ್ಚ್ ಮಾಡಿಸಿದರೆ 1 ಜಿಬಿ ಡಾಟಾ ಪಡೆಯುತ್ತಾರೆ. ಈ ಪ್ಲ್ಯಾನ್ ಹಾಕಿಸಿಕೊಂಡರೆ 1ಜಿಬಿ ಜತೆ 3ಜಿಬಿ ಡಾಟಾ ಉಚಿತವಾಗಿ ಸಿಗಲಿದೆ.
ಇದರ ಜತೆಗೆ ಸ್ಥಳೀಯ ಹಾಗೂ ಎಸ್‌ಟಿಡಿ ಉಚಿತ ಕರೆಗಳು ಸಿಗಲಿದ್ದು ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಈ ಪ್ಲ್ಯಾನ್ ಅನ್ನು ಮೊದಲ ಬಾರಿ ರಿಚಾರ್ಜ್ ಮಾಡಿಸಿಕೊಳ್ಳುವವರು myairtel App ಮೂಲಕವೇ ಮಾಡಿಸಿಕೊಳ್ಳಬೇಕು. ಈ ಉಚಿತ ಸೇವೆ ಡಿಸೆಂಬರ್ 31ರವರೆಗೆ ಇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


