ಜಿಯೋ ಧನ್ ಧನಾ ಧನ್ ಆಫರ್ ಗೆ ಪ್ರತಿಯಾಗಿ ಏರ್ ಟೆಲ್ ನಿಂದ ಹಾಲಿಡೇ ಸರ್ಪ್ರೈಸ್
ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ಗ್ರಾಹಕರಿಗೆ. ರಿಲಯನ್ಸ್ ಜಿಯೋ ಧನ್ ದನಾ ಧನ್ ಪ್ಯಾಕ್ ..

Published On :
ನವದೆಹಲಿ: ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ಗ್ರಾಹಕರಿಗೆ. ರಿಲಯನ್ಸ್ ಜಿಯೋ ಧನ್ ದನಾ ಧನ್ ಪ್ಯಾಕ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಬಂಪರ್ ಯೋಜನೆಯೊಂದನ್ನು ಹೊರಬಿಟ್ಟಿದೆ.
ಡಬಲ್ ಹಾಲಿಡೇ ಸರ್ಪ್ರೈಸ್ ಘೋಷಣೆ ಮಾಡಿರುವ ಏರ್ ಟೆಲ್, ಏಪ್ರಿಲ್ 13, 2017 ರವರೆಗೂ ಲಭ್ಯವಿದ್ದ 10 ಜಿಬಿ ಉಚಿತ ಇಂಟರ್' ನೆಟ್ ಆಫರ್' ಅನ್ನು ಮೂರು ತಿಂಗಳು ವಿಸ್ತರಿಸಿದೆ. ಪ್ರತಿ ತಿಂಗಳು 10 ಜಿಬಿ ಡಾಟಾದಂತೆ 3 ತಿಂಗಳು 30 ಜಿಬಿ ಡಾಟಾ ಬಳಸಿಕೊಳ್ಳಬಹುದಾಗಿದೆ.
ಮೊನ್ನೆಯಷ್ಟೇ ಜಿಯೋ 309 ರೂ.ಗಳ ಡಾಟಾ ಪ್ಯಾಕ್ ಬಿಡುಗಡೆ ಮಾಡಿತ್ತು. ಅದಕ್ಕೆ ಸಡ್ಡು ಹೊಡೆಯುವಂತೆ ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಕೇವಲ 244 ರೂ. ಬೆಲೆಯಲ್ಲಿ ಮಾಸಿಕ 70 ಜಿಬಿ 4 ಜಿ ಡಾಟಾ ಒದಗಿಸಲಿದೆ. ಇದರ ಜತೆಗೆ ಪ್ರತಿದಿನ 300 ನಿಮಿಷಗಳ ಏರ್ ಟೆಲ್ ಟು ಏರ್ ಟೆಲ್ ಎಸ್ ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಒದಗಿಸುತ್ತಿದೆ. ನಂತರದ ಕರೆಗಳಿಗೆ ಪ್ರತಿ ನಿಮಿಷಕ್ಕೆ 0.10 ಪೈಸೆ ದರವಿರುತ್ತದೆ. ಚಂದದಾರರು ಈ ಸೌಲಭ್ಯವನ್ನು ಏ.30 ರವರೆಗೂ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Offerಆಫರ್ಏರ್ ಟೆಲ್AirtelDouble Your Holiday Surprises10 GB Dataಡಬಲ್ ಯುವರ್ ಹಾಲಿಡೇ ಸರ್ ಪ್ರೈಸ್10 ಜಿಬಿ ಡಾಟಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


