ರಿಲಯನ್ಸ್ ಜಿಯೋ: ಉಚಿತ ವಾಯ್ಸ್ ಕಾಲಿಂಗ್; ಝೀರೊ ರೋಮಿಂಗ್ ಚಾರ್ಜಸ್; ಇದು ಡಾಟಾ-ಗಿರಿ!
ರಿಲಯನ್ಸ್ ಸಂಸ್ಥೆ ಈಗ ತನ್ನ ಜಿಯೋ ನೆಟ್ ವರ್ಕ್ ನಿಂದ ಮಾಡುವ ಎಲ್ಲಾ ಕರೆಗಳೂ ಉಚಿತವಾಗಿರಲಿದೆ ಎಂದು ಘೋಷಿಸಿದೆ.

ಮುಂಬೈ: ತೀರಾ ಅಗ್ಗದ 3ಜಿ ಮತ್ತು 4ಜಿ ಡಾಟಾ ಸೇವೆ ಒದಗಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಸಂಸ್ಥೆ ಈಗ ತನ್ನ ಜಿಯೋ ನೆಟ್ ವರ್ಕ್ ನಿಂದ ಮಾಡುವ ಎಲ್ಲಾ ಕರೆಗಳೂ ಉಚಿತವಾಗಿರಲಿದೆ ಎಂದು ಘೋಷಿಸಿದೆ.
ಮುಂಬೈ ನಲ್ಲಿ ನಡೆದ ರಿಲಯನ್ಸ್ ನ 42 ನೇ ಷೇರುದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖೇಶ್ ಅಂಬಾನಿ, ರಿಲಯನ್ಸ್ ಜಿಯೋ ನೆಟ್ವರ್ಕ್ ಮೂಲಕ ಯಾವುದೇ ನೆಟ್ವರ್ಕ್ ಗೆ ಮಾಡುವ ಕರೆಗಳು ಸಂಪೂರ್ಣ ಉಚಿತವಾಗಿರಲಿದ್ದು ರೋಮಿಂಗ್ ದರ ಇರುವುದಿಲ್ಲ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಈಗ ಬೇರೆ ನೆಟ್ವರ್ಕ್ ಗಳಂತೆ ದೀಪಾವಳಿ, ಹೊಸ ವರ್ಷದ ದಿನಗಳಂದು ಮೆಸೇಜ್ ಗಳಿಗೆ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಯೋ ನೆಟ್ವರ್ಕ್ ಮೂಲಕ ಮತ್ತಷ್ಟು ಜನಪ್ರಿಯ ಸೇವೆಗಳನ್ನು ಒದಗಿಸಿರುವ ಮುಖೇಶ್ ಅಂಬಾನಿ, ಈಗ ಭಾರತೀಯರು ಡಾಟಾಗಿರಿ ಮಾಡಬಹುದು ಎಂದಿದ್ದಾರೆ. ಜಿಯೋ ನೆಟ್ವರ್ಕ್ ಮೂಲಕ ಹೆಚ್ಚು ಡಾಟಾ ಬಳಸಿದಷ್ಟೂ ದರ ಕಡಿಮೆಯಾಗಲಿದೆ. ಡಾಟಾ ಕೊರತೆಯಿಂದ ಭಾರತವನ್ನು ಸಮೃದ್ಧ ಡಾಟಾ ಬಳಕೆಯತ್ತ ಕೊಂಡೊಯ್ಯುವುದು ರಿಲಯನ್ಸ್ ಜಿಯೋ ನೆಟ್ವರ್ಕ್ ನ ಪ್ರಮುಖ ಉದ್ದೇಶವಾಗಿದೆ. ಜಿಯೋ ನೆಟ್ವರ್ಕ್ ಭಾರತವನ್ನು ವಿಧ್ವದಲ್ಲೇ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಡಾಟಾ ಮಾರುಕಟ್ಟೆಯನ್ನಾಗಿ ಮಾಡಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾಗೆ ರಿಲಯನ್ಸ್ ಜಿಯೋ ನೆಟ್ವರ್ಕ್ ಸೇವೆಯನ್ನು ಅರ್ಪಿಸುತ್ತಿದ್ದೇವೆ, ಜಿಯೋ ಸೇವೆ ರಿಲಯನ್ಸ್ ನ ಅತಿ ದೊಡ್ಡ ಬಂಡವಾಳ ಹೂಡಿಕೆಯಾಗಿದೆ ಎಂದಿರುವ ಅಂಬಾನಿ ವಿಶ್ವವೇ ಹೊಸ ಯುಗದತ್ತ ಸಾಗುತ್ತಿರಬೇಕಾದರೆ ಭಾರತೀಯರು ಹಿಂದೆ ಉಳಿಯುವಂತಿಲ್ಲ, ಯುವಕರಿಗೆ ಸರಿಯಾದ ವಾತಾವರಣ ನೀಡಿ ಅವರು ನಮ್ಮನ್ನು ಬೆರಗುಗೊಳಿಸುತ್ತಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


