ವಾಣಿಜ್ಯ

ಇನ್ಮುಂದೆ ಎಟಿಎಂಗಳಲ್ಲಿ ಸಿಗುತ್ತೆ 50 ರೂಪಾಯಿ ನೋಟು

ಎಟಿಎಂ ಯಂತ್ರಗಳಲ್ಲಿ 50 ರೂಪಾಯಿಗಳ ನೋಟುಗಳು ಗ್ರಾಹಕರಿಗೆ ಲಭಿಸುವಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್...

ಇನ್ಮುಂದೆ ಎಟಿಎಂಗಳಲ್ಲಿ ಸಿಗುತ್ತೆ 50 ರೂಪಾಯಿ ನೋಟು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಎಟಿಎಂ ಯಂತ್ರಗಳಲ್ಲಿ 50 ರೂಪಾಯಿಗಳ ನೋಟುಗಳು ಗ್ರಾಹಕರಿಗೆ ಲಭಿಸುವಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಪ್ರಸ್ತುತ ಗ್ರಾಹಕರಿಗೆ ಎಟಿಎಂ ಯಂತ್ರಗಳಲ್ಲಿ 1000, 500, 100 ರೂಪಾಯಿಗಳ ನೋಟುಗಳನ್ನು ಮಾತ್ರ ದೊರೆಯುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಇನ್ಮುಂದೆ ಗ್ರಾಹಕರು ಎಟಿಎಂನಲ್ಲಿ 50 ರೂಪಾಯಿಗಳನ್ನೂ ಪಡೆಯಬಹುದಾಗಿದೆ. ಈಗಾಗಲೇ ಕೆಲ ಬ್ಯಾಂಕ್‌ಗಳು ಆರ್‌ಬಿಐ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎನ್ನಲಾಗಿದೆ.
 
ಸದ್ಯಕ್ಕೆ ರಾಯ್‌ಪುರ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಎಟಿಎಂನಲ್ಲಿ 50 ರೂ. ತೆಗೆಯುವ ಸೌಲಭ್ಯ ಒದಗಿಸಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳ ಎಟಿಎಂಗಳಲ್ಲಿ 50 ರೂಪಾಯಿ ಪಡೆಯುವ ಅವಕಾಶ ಒದಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.