ಅತಿಯಾದ ರಾಜಕೀಯ ದೃಷ್ಟಿಕೋನ ಪ್ರಗತಿಗೆ ಮಾರಕ: ರಾಜನ್
ಸ್ವೇಚ್ಛೆ ಹಾಗೂ ಅಗೌರವ ಪ್ರಗತಿಗೆ ಮಾರಕ. ಅದೇ ರೀತಿ ಅತಿಯಾದ ರಾಜಕೀಯ ದೃಷ್ಟಿಕೋನದಿಂದ ಎಲ್ಲವನ್ನೂ ಸರಿಪಡಿಸುವ ಯತ್ನವೂ ಮಾರಕ ಎಂದು...

ನವದೆಹಲಿ: ಸ್ವೇಚ್ಛೆ ಹಾಗೂ ಅಗೌರವ ಪ್ರಗತಿಗೆ ಹೇಗೆ ಮಾರಕವೋ ಅದೇ ರೀತಿ ಅತಿಯಾದ ರಾಜಕೀಯ ದೃಷ್ಟಿಕೋನದಿಂದ ಎಲ್ಲವನ್ನೂ ಸರಿಪಡಿಸುವ ಯತ್ನವೂ ಮಾರಕ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ದೆಹಲಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 46ನೇ ಘಟಿಕೋತ್ಸವದ ಸಂದರ್ಭದ ಸಹಿಷ್ಣುತೆ ಹಾಗೂ ಗೌರವಯುತ ಚರ್ಚೆ ಕುರಿತು ಮಾತನಾಡಿದ ರಾಜನ್, ಪ್ರತಿಯೊಂದಕ್ಕೂ ನಿಷೇಧ ಸೂಕ್ತ ಪರಿಹಾರ ಅಲ್ಲ. ಸಹನೆ ಮತ್ತು ಪರಸ್ಪರ ಗೌರವದಿಂದ ವಿಚಾರ ವಿನಿಮಯಕ್ಕೆ ಸೂಕ್ತ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಎಲ್ಲಾ ಸಂಪ್ರದಾಯ, ಕಟ್ಟುಪಾಡುಗಳನ್ನು ಪ್ರಶ್ನಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದ ರಾಜನ್, ಪರಸ್ಪರ ಗೌರವ ಹಾಗೂ ಸಹಿಷ್ಣುತೆಯ ವಾತಾವರಣದಲ್ಲಿ ಮುಕ್ತ ಚರ್ಚೆಯ ಅವಕಾಶಕ್ಕಾಗಿ ಹೋರಾಡಿ ಎಂದರು. ಅಲ್ಲದೆ ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಚರ್ಚೆ ಮತ್ತು ಮುಕ್ತ ತನಿಖೆ ನಿರ್ಣಾಯಕ ಪಾತ್ರವಹಿಸುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


