ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಚೀನಾದ 'ಫಿಕಾಂ' ಸ್ಮಾರ್ಟ್‌ಫೋನ್
ಚೀನಾ ದೇಶದ ಪ್ರಮುಖವಾದ, ದೂರಸಂಪರ್ಕ ಸಾಧನಗಳು, ಟರ್ಮಿನಲ್‍ಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ‘ಫಿಕಾಂ’, ತನ್ನ ಮುಂಚೂಣಿ ಎಲ್‍ಟಿಇ ಆಂಡ್ರಾಯ್ಡ್...

ಚೀನಾ ದೇಶದ ಪ್ರಮುಖವಾದ, ದೂರಸಂಪರ್ಕ ಸಾಧನಗಳು, ಟರ್ಮಿನಲ್‍ಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ‘ಫಿಕಾಂ’, ತನ್ನ ಮುಂಚೂಣಿ ಎಲ್‍ಟಿಇ ಆಂಡ್ರಾಯ್ಡ್ ಸ್ಮಾರ್ಟ್‍ಫೋನ್ ಫಿಕಾಂ ಪ್ಯಾಷನ್ 660 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವಿಭಿನ್ನ ಹಾಗೂ ಬಳಸಲು ಸುಲಭವಾದ ಸ್ಮಾರ್ಟ್‍ಫೋನ್, ಕ್ವಾಲ್‍ಕಾಂ ಟೆಕ್ನಾಲಜೀಸ್ ಇಂಕ್ (ಕ್ಯೂಟಿಐ)ನ ಕ್ವಾಲ್‍ಕಾಂ ರೆಫರೆನ್ಸ್ ವಿನ್ಯಾಸದೊಂದಿಗೆ, 1920 x 1080 ಪಿಕ್ಸಲ್ಸ್ ರೆಸಲ್ಯೂಷನ್ (ಎಫ್‍ಹೆಚ್‍ಡಿ) ವೈಶಿಷ್ಟ್ಯತೆಯೊಂದಿಗೆ 5.0 ಇಂಚುಗಳ ಅಗಲದ ಐಪಿಎಸ್ ಎಲ್‍ಸಿಡಿ ಡಿಸ್‍ಪ್ಲೆ ಹಾಗೂ 4ಜಿ ಎಲ್‍ಟಿಇ ಜೊತೆಗೆ ಕ್ವಾಲ್‍ಕಾಂ ಸ್ನ್ಯಾಪ್‍ಡ್ರಾಗನ್™ 615 ಪ್ರಾಸೆಸರ್‍ಗಳಿಂದ ಕೂಡಿದೆ.
ಕ್ವಾಲ್‍ಕಾಂ ಸ್ನ್ಯಾಪ್‍ಡ್ರಾಗನ್, ಕ್ವಾಲ್‍ಕಾಂ ಇನ್‍ಕಾರ್ಪೊರೇಟೆಡ್‍ನ ಅಂಗ ಸಂಸ್ಥೆಯಾದ ಕ್ವಾಲ್‍ಕಾಂ ಟೆಕ್ನಾಲಜೀಸ್ ಇಂಕ್‍ನ ಉತ್ಪನ್ನವಾಗಿದೆ. ಫಿಕಾಂ ಪ್ಯಾಷನ್ 660, ಎಲ್‍ಇಡಿ ಫ್ಲ್ಯಾಷ್‍ನೊಂದಿಗೆ 13 ಮೆಗಾಪಿಕ್ಸೆಲ್‍ಗಳ ಹಿಂಬದಿ ಕ್ಯಾಮೆರಾ ಹಾಗೂ ಮುಂಬದಿಯಲ್ಲಿ 5 ಮೆಗಾಪಿಕ್ಸೆಲ್‍ಗಳ ಕ್ಯಾಮೆರಾ ಹೊಂದಿದೆ. ಗ್ಲೋಬಲ್ 4ಜಿ ರೋಮಿಂಗ್ ಬೆಂಬಲ ಹಾಗೂ ವಿಶೇಷ ಪೆಡೊಮೀಟರ್‍ಗಳಿಂದ ಕೂಡಿರುವ ಫಿಕಾಂ ಪ್ಯಾಷನ್ 660 ಬಳಕೆದಾರರಿಗೆ, ಅವರ ಮೊಬೈಲ್ ಅನುಭವವನ್ನು ವಿಶೇಷಗೊಳಿಸುವಂತಹ, ಕನಸಿನಂತಹ, ಸುಧಾರಿತ ತಂತ್ರಜ್ಞಾನ ಸಾಧನವಾಗಿದೆ.
ಫಿಕಾಂ ಪ್ಯಾಷನ್ 660 ಬಿಡುಗಡೆ ಮಾಡಿ ಮಾತನಾಡಿದ ಫಿಕಾಂನ ಸಿಇಒ, ಶ್ರೀ ಝೆಂಗ್ ಮಿನ್ ಅವರು, ಫಿಕಾಂ ಪ್ಯಾಷನ್ 660, ಭಾರತೀಯ ಗ್ರಾಹಕರ ವಿಭಿನ್ನವಾದ ಅಗತ್ಯಗಳನ್ನು ಪ್ರತಿಬಿಂಬಿಸುವಂತಹ ಹೊಸ ಶೋಧಿತ ಸ್ಮಾರ್ಟ್‍ಫೋನ್ ಅಗಿದೆ. ಭಾರತೀಯ ಸ್ಮಾರ್ಟ್‍ಫೋನ್ ಮಾರುಕಟ್ಟೆ ನಿರಂತರವಾಗಿ ವಿಕಾಸ ಹೊಂದುತ್ತಿದೆ ಹಾಗೂ ಇಲ್ಲಿನ ಗ್ರಾಹಕರು, ಗರಿಷ್ಠ ಅನುಭವಕ್ಕಾಗಿ, ಸುಧಾರಿತ ವೈಶಿಷ್ಟ್ಯತೆಗಳುಳ್ಳ ಹಾಗೂ ಅತ್ಯುತ್ತಮ ಗುಣಮಟ್ಟಗಳುಳ್ಳ ವಿಶೇಷ ಸ್ಮಾರ್ಟ್‍ಫೋನ್‍ಗಳನ್ನು ಬಯಸುತ್ತಾರೆ. ನಮ್ಮ ಬಲಿಷ್ಠ ಒಳಾಂಗಣ ಸಂಶೋಧನೆ ಹಾಗೂ ಅಭಿವೃದ್ಧಿ ತಂಡ, ವಿಶೇಷವಾಗಿ ಭಾರತೀಯ ಗ್ರಾಹಕರಿಗಾಗಿಯೇ ಈ ವಿಶೇಷ ಸ್ಮಾರ್ಟ್ ಫೋನ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.
ಫಿಕಾಂ ಪ್ಯಾಷನ್ 660, ವಿಶೇಷವಾಗಿ www.amazon.inನಲ್ಲಿ ಮಾರಾಟಕ್ಕೆ ಲಭ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


