ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಹಣ ಶೇ.10 ರಷ್ಟು ಕುಸಿತ!
ಕಪ್ಪು ಹಣ ಎಂದಾಕ್ಷಣ ನೆನಪಿಗೆ ಬರುವ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರಿಟ್ಟಿದ್ದ ಹಣ ಶೇ.10 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಜ್ಯೂರಿಚ್: ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತರಲು ಭಾರತ ಸರ್ಕಾರ ಯತ್ನಿಸುತ್ತಿದ್ದು, ಕಪ್ಪು ಹಣ ಎಂದಾಕ್ಷಣ ನೆನಪಿಗೆ ಬರುವ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರಿಟ್ಟಿದ್ದ ಹಣ ಶೇ.10 ರಷ್ಟು(12,615 ಕೋಟಿಗೆ ಇಳಿಕೆ) ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಶೇ.10 ರಷ್ಟು ಹಣ ಕುಸಿದಿದೆ ಎಂದು ಸ್ವಿಜರ್ಲ್ಯಾಂಡ್ ನ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಸಿದ್ಧ ರಹಸ್ಯ ತಂಡ ಹೇಳಿದೆ. 2014 ರಲ್ಲಿ 1.9 ಬಿಲಿಯನ್ ಯು.ಎಸ್ ಡಾಲರ್ ನಷ್ಟಿದ್ದ ಹಣ ಈಗ 2,030 ಮಿಲಿಯನ್ ಗೆ ಇಳಿಕೆಯಾಗಿದೆ ಎಂದು ಸ್ವಿಸ್ ಬ್ಯಾಕ್ ನ ಕೇಂದ್ರ ಬ್ಯಾಂಕಿಂಗ್ ಪ್ರಾಧಿಕಾರದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಇದು ಭಾರತೀಯರು ಸ್ವಿಸ್ ಬ್ಯಾಂಕ್ ನಲ್ಲಿ ಉಳಿಸಿರುವ ಎರಡನೇ ಕನಿಷ್ಠ ಮೊತ್ತದ ಹಣ ಎಂದು ತಿಳಿದುಬಂದಿದೆ.
ವಿಚಿತ್ರವೆಂದರೆ ಬೇರೆ ದೇಶದವರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿದ್ದ ಠೇವಣಿ 2014 ರಲ್ಲಿ 90 ಲಕ್ಷ ಕೋಟಿಯಿಂದ 1.6 ಟ್ರಿಲಿಯನ್ ನಷ್ಟು ಏರಿಕೆಯಾಗಿದೆ. 2012 ರಲ್ಲಿ ಭಾರತೀಯರ ಕಪ್ಪು ಹಣದ ಮೊತ್ತ ಮೂರನೇ ಒಂದು ಭಾಗದಷ್ಟು ಕುಸಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


