ಇ -ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರೇ ಮುಂದು
ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಇ ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಜಾಸ್ತಿ ಎಂದು ಸಮೀಕ್ಷೆಯೊಂದು...

ನವದೆಹಲಿ: ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಇ ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಜಾಸ್ತಿ ಎಂದು ಸಮೀಕ್ಷೆಯೊಂದು ಹೇಳಿದೆ. ಪ್ರತೀ ತಿಂಗಳು ಮಹಿಳೆಯರಿಗಿಂತ ಹೆಚ್ಚು ಸಮಯವನ್ನು ಗಂಡಸರು ಇ-ಕಾಮರ್ಸ್ ಸೈಟ್‌ಗಳಲ್ಲಿ ವಿನಿಯೋಗಿಸುತ್ತಾರಂತೆ. ಹೆಚ್ಚಿನವರು ಸ್ಮಾರ್ಟ್‌ಫೋನ್ ಬಳಸಿಯೇ ಶಾಪಿಂಗ್ ಮಾಡುತ್ತಾರೆ ಎಂಬುದು ವಿಶೇಷ.
ಅಂದಹಾಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸುವ ಮಹಿಳೆಯರಲ್ಲಿ ಕೇವಲ ಶೇ. 20ರಷ್ಟು ಮಹಿಳೆಯರು ಮಾತ್ರ ಡಾಟಾ ಕನೆಕ್ಟಿವಿಟಿ ಬಳಸುತ್ತಿದ್ದಾರೆ. ಆದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಮಾರ್ಟ್‌ಫೋನ್ ಮೂಲಕ ಶಾಪಿಂಗ್ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ದಿನಾ ಶಾಪಿಂಗ್ ನಡೆಸಲು ಪುರುಷರ ವಿನಿಯೋಗಿಸುವ ಸಮಯ ಸರಾಸರಿ 32 ನಿಮಿಷ. ಆದರೆ ಮಹಿಳೆಯರು ಶಾಪಿಂಗ್ ನಡೆಸಲು ವಿನಿಯೋಗಿಸುವ ಸಮಯ 21 ನಿಮಿಷ !
ಏತನ್ಮಧ್ಯೆ, ದಕ್ಷಿಣ ಕೊರಿಯಾದಲ್ಲಿ ಮಹಿಳೆಯರು ದಿನಾ 270 ನಿಮಿಷಗಳನ್ನು ಶಾಪಿಂಗ್ ಗಾಗಿ ವಿನಿಯೋಗಿಸಿದರೆ ಗಂಡಸರು 150 ನಿಮಿಷಗಳನ್ನು ಶಾಪಿಂಗ್‌ಗಾಗಿ ವಿನಿಯೋಗಿಸುತ್ತಾರೆ. ಅಮೆರಿಕದಲ್ಲಿ ಪುರುಷರು 95 ನಿಮಿಷ ಇ ಶಾಪಿಂಗ್ ಮಾಡಿದರೆ ಅಲ್ಲಿನ ಮಹಿಳೆಯರು 180 ನಿಮಿಷಗಳಷ್ಟು ಕಾಲ ಮೊಬೈಲ್ ಫೋನ್ ಬಳಸಿ ಇ ಶಾಪಿಂಗ್ ಮಾಡುತ್ತಾರಂತೆ. ಇನ್ನುಳಿದ ರಾಷ್ಟ್ರಗಳನ್ನು ಹೋಲಿಸಿದರೆ ಇ ಶಾಪಿಂಗ್‌ನಲ್ಲಿ ಕಡಿಮೆ ಸಮಯ ವ್ಯಯಿಸುವವರು ಮಲೇಷ್ಯಾದವರಾಗಿದ್ದಾರೆ. ಮಲೇಷ್ಯಾದ ಮಹಿಳೆಯರು ದಿನವೊಂದರಲ್ಲಿ 6 ನಿಮಿಷಗಳನ್ನು ಮಾತ್ರ ಇ-ಶಾಪಿಂಗ್‌ಗಾಗಿ ವಿನಿಯೋಗಿಸುತ್ತಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


