ವಾಣಿಜ್ಯ

ಸ್ಪೈಸ್ ಜೆಟ್ ನಿಂದ ರಿಯಾಯಿತಿ ದರದಲ್ಲಿ ಐದು ಲಕ್ಷ ಟಿಕೆಟ್

ಕಡಿಮೆ ದರದ ವಿಮಾನಯಾನ ಸ್ಪೈಸ್ ಜೆಟ್ ಈಗ 'ಸೂಪರ್ ಸೇಲ್' ಪ್ರಾರಂಭಿಸಿದೆ.

ಸ್ಪೈಸ್ ಜೆಟ್ ನಿಂದ ರಿಯಾಯಿತಿ ದರದಲ್ಲಿ ಐದು ಲಕ್ಷ ಟಿಕೆಟ್
ಸ್ಪೈಸ್ ಜೆಟ್ ವಿಮಾನ
Published On :

ನವದೆಹಲಿ: ಕಡಿಮೆ ದರದ ವಿಮಾನಯಾನ ಸ್ಪೈಸ್ ಜೆಟ್ ಈಗ 'ಸೂಪರ್ ಸೇಲ್' ಪ್ರಾರಂಭಿಸಿದೆ. ೧೪೯೯ ರೂಗಳಿಗೆ ಪ್ರಾರಂಭವಾಗುವ ೫ ಲಕ್ಷ ಟಿಕೆಟ್ ಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲು ಮುಂದಾಗಿದೆ.

ಫೆಬ್ರವರಿ ೧೫ ರಿಂದ ಜೂನ್ ೩೦ ರವರೆಗೆ ಪ್ರವಾಸ ಮಾಡಬಹುದಾದ ರಿಯಾಯಿತಿ ದರದ ಟಿಕೆಟ್ ಗಳನ್ನು ಮುಂಗಡ ಕಾಯ್ದಿರಿಸಲು ಜನವರಿ ೨೮ ರಿಂದ ೩೦ರವರೆಗೆ ಸಮಯ!

ಸಾಮಾನ್ಯವಾಗಿ ಕಡಿಮೆ ಪ್ರವಾಸ ಮಾಡುವ ಸಮಯವಾದ ಜನವರಿಯಿಂದ ಮಾರ್ಚ್ ಸಮಯದಲ್ಲಿ ಈ ಏರ್ ಲೈನ್ಸ್ ನ ಆದಾಯ ಹೆಚ್ಚಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದು ಪಂಡಿತರ ಅಭಿಪ್ರಾಯ.

ಈ ಕೊಡುಗೆಗೆ ಇತರ ಏರ್ಲೈನ್ ಗಳು ಕೂಡ ಸ್ಪರ್ಧೆಯೊಡ್ಡಿವೆ. ಇಂಡಿಗೋ, ಏರ್ ಏಷಿಯಾ   ಮತ್ತು ಗೋ ಏರ್ ಕೂಡ ಟಿಕೆಟ್ ದರಗಳನ್ನು ಇಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.