ವಾಣಿಜ್ಯ

ಬಜಾಜ್‌ನಿಂದ ನೂತನ ಗೃಹ ವಿಮೆ

ದೇಶದ ಪ್ರಮುಖ ಇನ್ಷೂರೆನ್ಸ್ ಕಂಪನಿ ಬಜಾಜ್ ಅಲೈಯನ್ಸ್ ಮಾರುಕಟ್ಟೆಗೆ ನೂತನ ಗೃಹ ವಿಮೆ ಬಿಡುಗಡೆ ಮಾಡಿದೆ...

ಬಜಾಜ್‌ನಿಂದ ನೂತನ ಗೃಹ ವಿಮೆ
Published On :

ದೇಶದ ಪ್ರಮುಖ ಇನ್ಷೂರೆನ್ಸ್ ಕಂಪನಿ ಬಜಾಜ್ ಅಲೈಯನ್ಸ್ ಮಾರುಕಟ್ಟೆಗೆ ನೂತನ ಗೃಹ ವಿಮೆ ಬಿಡುಗಡೆ ಮಾಡಿದೆ. ಇದರ ವಿಶೇಷತೆ ಎಂದರೆ, ನಿಮ್ಮ ಮನೆಯ ಎಲ್ಲ ವಸ್ತುಗಳಿಗೆ ಮೌಲ್ಯದಾಯಕ ಬೆಲೆ ಬರಲಿದೆ. ಮನೆಯ ಉಪಕರಣಗಳು, ಆರ್ಟ್‌ವರ್ಕ್, ಆಭರಣಗಳು ಸೇರಿದಂತೆ ಗೃಹೋಪಯೋಗಿ ಎಲ್ಲ ವಸ್ತುಗಳು ಈ ವಿಮೆಗೊಳಪಡಲಿವೆ ಎನ್ನುತ್ತಾರೆ ಕಂಪನಿಯ ಸಿಇಒ ತಪನ್ ಸಿಂಘೇಲ. ಸದ್ಯ ಚಾಲ್ತಿಯಲ್ಲಿರುವ ಗೃಹ ವಿಮೆಯಲ್ಲಿ ಇಂಥ ಸೌಲಭ್ಯಗಳಿಲ್ಲ.

ಮಾರುಕಟ್ಟೆಗೆ ಡಿ ಮ್ಯಾಕ್ಸ್ ದಾಂಗುಡಿ


ಇಸುಜು ಮೋಟಾರ್ಸ್ ಕೇರಳದ ಮಾರುಕಟ್ಟೆಗೆ ತನ್ನ ಡಿ ಮ್ಯಾಕ್ಸ್ ಪಿಕ್‌ಅಪ್ ಟ್ರಕ್ ಪರಿಚಯಿಸಿದೆ. ಈ ಟ್ರಕ್ ಸದ್ಯ ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿದೆ. ಡಿ ಮ್ಯಾಕ್ಸ್ ಮೂರು ಮಾದರಿಯಲ್ಲಿ ಲಭ್ಯವಿದೆ. ಎರಡು ಕ್ಯಾಬಿನ್ ಮತ್ತು ಡಕ್ ವಿಭಾಗದಲ್ಲಿ ಆಯ್ಕೆ ಸ್ವಾತಂತ್ರ್ಯವಿದೆ. ಸದ್ಯ ಸಿಂಗಲ್ ಕ್ಯಾಬ್ ಟ್ರಕ್ ಬೆಲೆ ರು. 5.99 ಲಕ್ಷ ಇದ್ದರೆ, ಫ್ಲ್ಯಾಟ್ ಡೆಕ್ ಮಾದರಿಯ ಟ್ರಕ್ ನಿಮಗೆ ರು. 7.09 ಲಕ್ಷಕ್ಕೆ ಸಿಗಲಿದೆ (ಕೊಚ್ಚಿ ಶೋರೂಂ ಬೆಲೆ). ಸದ್ಯ ವಾಣಿಜ್ಯೋಪಯೋಗಿ ವಾಹನಗಳ ವಿಭಾಗದಲ್ಲಿ ಪಿಕ್‌ಅಪ್ ಟ್ರಕ್‌ಗಳ ಮಾರಾಟ ಶೇ.35ರಷ್ಟಿದ್ದು, ಈ ಸದಾವಕಾಶವನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತದೆ ಕಂಪನಿ.



ಸ್ವಿಸ್‌ನ ಮೂವೆನ್‌ಪಿಕ್ ಕೊಚ್ಚಿಯಲ್ಲಿ..
ಸ್ವಿಜ್ಜರ್ಲೆಂಡ್‌ನ ಹೆಸರಾಂತ ಮೂವೆನ್‌ಪಿಕ್ ಹೋಟೆಲ್ ಮತ್ತು ರೆಸಾರ್ಟ್ ಈ ಡಿಸೆಂಬರ್ ವೇಳೆಗೆ ಕೊಚ್ಚಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಬೆಂಗಳೂರು ಮತ್ತು ಧರ್ಮಶಾಲಾದಲ್ಲಿ ಈ ಹೋಟೆಲ್ಲುಗಳಿವೆ. ಅದೇ ಮಾದರಿಯಲ್ಲಿ ಕೊಚ್ಚಿಯಲ್ಲೂ ರುಚಿವೈವಿಧ್ಯವನ್ನು ಸಾದರಪಡಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ಜೊಮೆರ್ ಪ್ರಾಪರ್ಟಿಸ್ ಮತ್ತು ಇನ್ವೆಸ್ಟ್‌ಮೆಂಟ್ ಜತೆ ಈಗಾಗಲೇ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. <


ಥಾಯ್ಲೆಂಡ್‌ನಲ್ಲಿ ಝೀ ನುಂಗ್
ದೇಶದ ಪ್ರಮುಖ ಮಾಧ್ಯಮ- ಮನರಂಜನಾ ಸಂಸ್ಥೆ ಝೀ ಎಂಟರ್‌ನೈಟ್‌ಮೆಂಟ್ ಎಂಟರ್‌ಪ್ರೈಸಸ್ ಲಿ. ಥಾಯ್ಲೆಂಡ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಥಾಯ್ಲೆಂಡ್‌ನಲ್ಲಿ 'ಝೀ ನುಂಗ್‌' ಹೆಸರಿನ ಚಾನೆಲ್ ಪ್ರಸಾರ ಆರಂಭವಾಗಲಿದೆ. ಇದು ಬಾಲಿವುಡ್ ಚಾನೆಲ್ ಆಗಿದ್ದು, ಥಾಯ್ ಭಾಷೆಯಲ್ಲಿ ಡಬ್ ಮಾಡಿ ಪ್ರಸಾರ ಮಾಡುವುದು ಕಂಪನಿಯ ಉದ್ದೇಶ. ಥಾಯ್ಲೆಂಡ್‌ನ ಸ್ಥಳೀಯ ಕೇಬಲ್ ಥಾಯ್ ಹೋಲ್ಡಿಂಗ್ ಗ್ರೂಪ್ ಜತೆಗೂಡಿ ಝೀ ಈ ಹೊಸ ಚಾನೆಲ್ ಪ್ರಸಾರಕ್ಕೆ ಮುಂದಾಗಿದೆ. ಥಾಯ್ಲೆಂಡ್‌ನಲ್ಲಿ ಪೇ ಚಾನೆಲ್ ಮಾರುಕಟ್ಟೆ ವಿಸ್ತಾರವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಚಾನೆಲ್ ಆರಂಭಿಸುತ್ತಿದ್ದೇವೆ ಎನ್ನುತ್ತಾರೆ ಕಂಪನಿಯ ಅಧ್ಯಕ್ಷ ಸುಭಾಷ್‌ಚಂದ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.