ವಿಮಾ ಮುನ್ಸೂಚನೆ
ಭಾರತದಲ್ಲಿ ಬಹಳ ಕಾಲದಿಂದ ವಿಮೆಯನ್ನು ಆದಾಯ ತೆರಿಗೆ ಉಳಿಸುವ ವಿಧಾನವೆಂದೇ ಭಾವಿಸಲಾಗಿತ್ತು....

ಭಾರತದಲ್ಲಿ ಬಹಳ ಕಾಲದಿಂದ ವಿಮೆಯನ್ನು ಆದಾಯ ತೆರಿಗೆ ಉಳಿಸುವ ವಿಧಾನವೆಂದೇ ಭಾವಿಸಲಾಗಿತ್ತು. ವರ್ಷದ ಕಡೆಯವರೆಗೂ ಯಾವುದೇ ಹೂಡಿಕೆ ಮಾಡದೆ ಹೂಡಿಕೆ ಪ್ರಮಾಣ ಪತ್ರ ಸಲ್ಲಿಸುವ ಕಡೆಯ ಕೆಲವು ದಿನಗಳಲ್ಲಿ ವಿಮಾ ಪ್ರತಿನಿಧಿಗಳಿಗೆ ಫೋನಿಸಿ, ವಿಮೆ ಖರೀದಿಸುವುದು ಸಾಮಾನ್ಯವಾಗಿತ್ತು.
ಕಡೇ ಗಳಿಗೆಯ ಧಾವಂತದಲ್ಲಿ ಕೊಂಡುಕೊಂಡ ವಿಮೆಯ ಲಾಭಗಳೇನು? ಮೊತ್ತ ಮತ್ತು ವ್ಯಾಪ್ತಿಯ ಬಗ್ಗೆ ಆಲೋಚಿಸುವುದಿಲ್ಲ. ಯಾವುದೋ ವಿಮೆ ಕೊಂಡು ಮನಸ್ಸಿನಲ್ಲೇ ತಾನು ಸುಭದ್ರನೆಂದು ಭಾವಿಸುವುದು ಅಪಾಯಕರ. ನಮ್ಮಲ್ಲಿ ಹೆಚ್ಚಿನವರಿಗೆ ವಿಮೆ ಹೊಂದುವುದೇ ಸುರಕ್ಷೆಯ ಹೆಮ್ಮೆ. ಆದರೆ ನೆನಪಿಡಿ, ಸಾಕಷ್ಟು ಮತ್ತು ಅಸಮರ್ಪಕ ವಿಮೆ ಆಲೋಚನೆಯಿಲ್ಲದೆ ಹೊಂದುವುದು, ವಿಮೆ ಇದ್ದೂ ಇಲ್ಲದಂತೆ.
ವಿಮೆ ಎಂದರೆ ದೀರ್ಘಾವಧಿ ಸುರಕ್ಷೆ ಮತ್ತು ಉಳಿತಾಯ ಯೋಜನೆ. ವಿಮಾ ಒಪ್ಪಂದದ ಮುಖ್ಯ ಉದ್ದೇಶ ವಿಮಾದಾರರ ಕುಟುಂಬವನ್ನು ಭವಿಷ್ಯದಲ್ಲಿ ಆರ್ಥಿಕವಾಗಿ ಸುಭದ್ರಗೊಳಿಸುವುದು. ಉದಾಹರಣೆಗೆ, ಕುಟುಂಬದ ಅಧಾರ ಸ್ಥಂಭವೇ ಕಳಚಿಕೊಂಡಾಗ ವಿಮೆ ಹಣವು ಉಪಯೋಗಕ್ಕೆ ಬರುತ್ತದೆ. ಇದರಿಂದ ಕುಟುಂಬವು ಮನೆಯ ಯಜಮಾನನು ಗತಿಸಿದ ನಂತರವೂ ಉತ್ತಮ ಜೀವನ ನಿರ್ವಹಿಸಲು ಸಹಾಯವಾಗುತ್ತದೆ. ಆದ್ದರಿಂದ ಕುಟುಂಬದಲ್ಲಿ ಆದಾಯ ಗಳಿಸುವ ಪ್ರತೀ ಸದಸ್ಯನೂ ಅವಲಂಬಿತರನ್ನು ಸೇರಿಸಿ ಸಾಕಷ್ಟು ವಿಮೆ ಹೊಂದಬೇಕು. ಭಾರತದಲ್ಲಿ ಇದು ಕಷ್ಟವಾದರೂ ಕನಿಷ್ಠ ಕೆಲವು ಸುರಕ್ಷಾ ಯೋಜನೆಗಳನ್ನು ಹೊಂದಿರಬೇಕು .
ಸುರಕ್ಷಾ ಯೋಜನೆಗಳನ್ನು ಠೇವಣಿ ಯೋಜನೆಯೆಂದೂ ಹೇಳುತ್ತಾರೆ. ಇದು ಮಾರುಕಟ್ಟೆಯಲ್ಲಿರುವ ಸರಳ, ಕಡಿಮೆ ವೆಚ್ಚದ ವಿಮೆ. ಇದರಲ್ಲಿ ಕಡಿಮೆ ಕಂತುಗಳಲ್ಲೂ ಹೆಚ್ಚಿನ ಹಣ ಪಡೆಯಬಹುದು. ಇದರರ್ಥ ಠೇವಣಿಯ ಅವಧಿ ಮುಗಿಯುವಾಗ ವ್ಯಕ್ತಿ ಜೀವಂತವಾಗಿದ್ದರೆ, ಹಣ ಹಿಂಪಡೆಯಲು ಸಾಧ್ಯವಿಲ್ಲ. ಆದರೆ ವಿಮೆ ಮಾಡಿದ ವ್ಯಕ್ತಿಯ ನಿಧನದ ನಂತರಕ್ಕೆ ಹಿಂಪಡೆಯಬಹುದು.
ಇನ್ನು ವಿಮೆ ಖರೀದಿಸಲು ನಿರ್ಧರಿಸಿದ ನಂತರ ನಮಗೆ ಎಷ್ಟು ವಿಮೆಗಳು ಬೇಕಾಗಬಹುದು ಎನ್ನುವುದು ಊಹಿತ ಪ್ರಶ್ನೆ. ಅನೇಕ ಅಂಶಗಳನ್ನು ಪರಿಗಣಿಸಿ ವಿಮಾ ಪ್ರಮಾಣವನ್ನು ನಿರ್ಧರಿಸಬಹುದು. ವಿಮೆಯನ್ನು ಮಧ್ಯವರ್ತಿಗಳು ಅಥವಾ ನೇರವಾಗಿ ಇಂಟರ್‌ನೆಟ್ ಮೂಲಕ ಖರೀದಿಸಬಹುದು. ಹಲವು ಕಂಪನಿಗಳು ವಿಮಾ ಮೊತ್ತದೊಂದಿಗೆ ವಿವಿಧ ರೀತಿಯ ಉಪ-ಉಡುಗೊರೆಗಳನ್ನು ನೀಡುವುದರಿಂದ ಇಂಟರ್‌ನೆಟ್‌ನಲ್ಲಿ ಖರೀದಿಸುವುದರಿಂದ ಹೆಚ್ಚು ಲಾಭವಿದೆ.
ಒಟ್ಟಿನಲ್ಲಿ ನಿಮ್ಮ ಕುಟುಂಬದ ಅಗತ್ಯತೆಯನ್ನು ಅರಿತು ವ್ಯಾಪ್ತಿಯನ್ನು ನಿರ್ಧರಿಸಿ ಸಾಕಷ್ಟು ವಿಮೆ ಮಾಡಿಸಿಕೊಳ್ಳುವುದು ಒಳಿತು. ಯಾಕೆಂದರೆ ಅಸಮರ್ಪಕ ವಿಮೆಯು ಕುಟ್ಟುಬಕ್ಕೆ ಸಹಾಯವಾಗದಿದ್ದರೆ ವಿಮೆ ಇದ್ದೂ ಇಲ್ಲದಂತೆ. <
(ಲೇಖಕರು ಏಜಾನ್ ರೆಲಿಗೇರ್ ಲೈಫ್ ಇನ್ಷೂರೆನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ)
- ಯತೀಶ್ ಶ್ರೀವಾಸ್ತವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


