ಪ್ರಿಪೇಯ್ಡ್ ರೆಮಿಟೆನ್ಸ್ ಕಾರ್ಡ್
ಶ್ರೀಮತಿ ನಾಯರ್‌ಗೆ 65 ವರ್ಷ. ನಿವೃತ್ತ ಶಿಕ್ಷಕಿ. ಕೇರಳದ ಕಾಸರಗೋಡಿನ ಗ್ರಾಮದಲ್ಲಿ ವಾಸ. ಮಗ ದುಬೈನಲ್ಲಿ...

ಶ್ರೀಮತಿ ನಾಯರ್‌ಗೆ 65 ವರ್ಷ. ನಿವೃತ್ತ ಶಿಕ್ಷಕಿ. ಕೇರಳದ ಕಾಸರಗೋಡಿನ ಗ್ರಾಮದಲ್ಲಿ ವಾಸ. ಮಗ ದುಬೈನಲ್ಲಿ ಟೆಕ್ನೀಷಿಯನ್. ಪ್ರತಿ ತಿಂಗಳೂ ಅಮ್ಮನಿಗೆ ಮನಿ ಟ್ರಾನ್ಸ್‌ಫರ್ ಆಯ್ಕೆಯ ಮೂಲಕ ಹಣ ಕಳುಹಿಸುತ್ತಾನೆ. ಆ ಹಣವನ್ನು ಪಡೆಯಲು ವೃದ್ಧೆ ನಾಯರ್ ಮನೆಯಿಂದ 5 ಕಿ.ಮೀ. ನಡೆಯಬೇಕು. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಏಜೆಂಟರು ಇರುತ್ತಾರೆ. ಅಲ್ಲಿ ತಲುಪಲು ಸ್ವಲ್ಪ ಹೆಚ್ಚು ಕಮ್ಮಿಯಾದರೂ ಮತ್ತೆ ಮಾರನೇ ದಿನ ಪಯಣ. ಅಯ್ಯೋ, ಮಗ ಕಳುಹಿಸಿದ ಹಣವನ್ನು ಸುಲಭವಾಗಿ ಪಡೆಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅಂಥ ಬೇರೆ ಆಯ್ಕೆಯೇ ಇಲ್ಲವೇ ಎಂದು ನಾಯರ್ ಕೊರಗುತ್ತಾರೆ.
ಆಯ್ಕೆ ಇದೆ...
ಹೌದು. ಬೇರೆ ಆಯ್ಕೆ ಖಂಡಿತಾ ಇದೆ. ವೇಗವಾಗಿ ಹಣ ಪಡೆಯಲು ಇನ್‌ಸ್ಟೆಂಟ್ ಮನಿ ಟ್ರಾನ್ಸ್‌ಫರ್ ಮೇಲೆ ಹೆಚ್ಚಿನವರು ಅವಲಂಬಿಸಿರುತ್ತಾರೆ. ಆದರೆ ಏಜೆಂಟರಿರುವ ಸ್ಥಳಕ್ಕೆ ಹೋಗುವುದೇ ಕಷ್ಟದ ಕೆಲಸ. ಈ ಸಮಸ್ಯೆ ನಿವಾರಿಸಲೆಂದು ಕೆಲವೊಂದು ಮನಿ ಟ್ರಾನ್ಸ್‌ಫರ್ ಆಪರೇಟರ್‌ಗಳು ನವನವೀನ ಸೌಲಭ್ಯವನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅವುಗಳಲ್ಲಿ ಒಂದು ಪ್ರಿಪೇಯ್ಡ್ ರೆಮಿಟೆನ್ಸ್ ಕಾರ್ಡ್.
ರೆಮಿಟೆನ್ಸ್ ಕಾರ್ಡ್ ಅಂದರೆ...
ನಾಯರ್‌ರಂಥ ಎಷ್ಟೋ ಮಂದಿಗೆ ಈ ಪ್ರಿಪೇಯ್ಡ್ ರೆಮಿಟೆನ್ಸ್ ಕಾರ್ಡ್ ನಿರಾಳತೆ ತರಬಹುದು. ಈ ಕಾರ್ಡ್ ಮೂಲಕ ಎಟಿಎಂನಿಂದ ಹಣ ಪಡೆಯಲು ಸಾಧ್ಯ. ಅಷ್ಟೇ ಅಲ್ಲ, ಮಳಿಗೆ, ಮಾಲ್‌ಗಳಲ್ಲಿ ಸರಕು, ಸೇವೆ ಪಡೆಯುವಾಗಲೂ ಈ ಕಾರ್ಡ್ ಮೂಲಕ ಹಣ ಪಾವತಿಸಬಹುದು. ಇದು ಬಳಕೆದಾರರಿಗೆ ವೇಗ, ಭದ್ರತೆ ಮತ್ತು ಅನುಕೂಲವನ್ನೂ ಮಾಡಿಕೊಡುತ್ತದೆ.
ಬ್ಯಾಂಕ್ ಖಾತೆ ಬೇಕಿಲ್ಲ
ರೆಮಿಟೆನ್ಸ್ ಕಾರ್ಡ್ ಹೊಂದಬೇಕೆಂದರೆ ನಿಮ್ಮಲ್ಲಿ ಕಡ್ಡಾಯವಾಗಿ ಬ್ಯಾಂಕ್ ಖಾತೆ ಇರಬೇಕು ಎಂಬ ನಿಯಮವಿಲ್ಲ. ವಿದೇಶಗಳಲ್ಲಿರುವ ಯಾರೇ ನಿಮಗೆ ಹಣ ಕಳುಹಿಸಿದರೂ ತಕ್ಷಣ ಆಟೋಮ್ಯಾಟಿಕ್ ಆಗಿ ಅದು ಕಾರ್ಡ್‌ನಲ್ಲಿ ಲೋಡ್ ಆಗಿಬಿಡುತ್ತದೆ. ಹಾಗಾಗಿ ನೀವು ಎಷ್ಟೋ ಕಿಲೋಮೀಟರ್ ನಡೆಯಬೇಕಾದ, ಅಲ್ಲಿ ಸರತಿ ಸಾಲಲ್ಲಿ ನಿಂತು ಕಾಯಬೇಕಾದ ಅವಶ್ಯ ಇರದು.
ಸುರಕ್ಷತೆಯಲ್ಲೂ ರಾಜಿ ಇಲ್ಲ...
ನಿಮಗೆ ಅಷ್ಟೊಂದು ಅನುಕೂಲ ಮಾಡಿಕೊಡುವ ರೆಮಿಟೆನ್ಸ್ ಕಾರ್ಡ್ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ನೀವು ಭಾವಿಸಿದರೆ ಅದು ತಪ್ಪು. ಏಕೆಂದರೆ ಇಲ್ಲೂ ಉತ್ಕೃಷ್ಟ ಭದ್ರತೆಯಿದೆ. ಈ ಕಾರ್ಡ್ ಕೂಡ ಪಿನ್ ಆಧಾರಿತ. ಅಗತ್ಯ ಸುರಕ್ಷತೆ ಒದಗಿಸುತ್ತದೆ. ಮಹಿಳೆಯರು, ವೃದ್ಧೆಯರೂ ಯಾವುದೇ ಭಯವಿಲ್ಲದೆ ಕಾರ್ಡ್ ಅನ್ನು ಬಳಸಬಹುದು. ಕಾರ್ಡ್‌ಗೆ ಹಣ ರವಾನಿಸಲು ತಗಲುವ ವೆಚ್ಚ ಕ್ಯಾಷ್ ಟ್ರಾನ್ಸ್‌ಫರ್‌ಗೆ ತಗಲುವ ವೆಚ್ಚದಷ್ಟೇ. ಅಷ್ಟೇ ಅಲ್ಲ, ಇದಕ್ಕೆ ಹೆಚ್ಚುವರಿ ವಾರ್ಷಿಕ ಶುಲ್ಕ, ನಗದು ವಿತ್‌ಡ್ರಾ ಶುಲ್ಕ ಮತ್ತಿತರ ಶುಲ್ಕಗಳೂ ಇರುವುದಿಲ್ಲ.
(ಲೇಖಕರು: ಎಕ್ಸ್‌ಪ್ರೆಸ್ ಮನಿಯ ಉಪಾಧ್ಯಕ್ಷ ಮತ್ತು ವಹಿವಾಟು ಮುಖ್ಯಸ್ಥ)
- ಸುದೇಶ್ ಗಿರಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


