ಬ್ರಿಕ್ಸ್ ಬ್ಯಾಂಕ್

ಬ್ರೆಜಿಲ್‌ನ ಪೋರ್ಟಲೇಜಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಸಮ್ಮೇಳನ ಹೊಸತೊಂದು ಆರಂಭಕ್ಕೆ ನಾಂದಿ ಹಾಡಿದೆ. ವಿಶ್ವದ ರಾಷ್ಟ್ರಗಳಿಗೆ ಯಾವುದೇ ಬಹುಕೋಟಿ ಯೋಜನೆಗೆ ಸಾಲ ಬೇಕಾಗಿದ್ದರೆ ಸರ್ಕಾರಗಳು ಕೈಚಾಚುತ್ತಾ ಇದ್ದದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ಗಳಿಗೆ.
ಹೇಳಿ ಕೇಳಿ ಈ ಎರಡು ಸಂಸ್ಥೆಗಳು ಅಮೆರಿಕದ ಹಿತಾಸಕ್ತಿಯನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳಲು ಸಾಧ್ಯ ಇದೆಯೋ ಅಷ್ಟರ ಮಟ್ಟಿಗೆ ಕಾಪಾಡಿಕೊಳ್ಳುವಲ್ಲಿ ಅತ್ಯಂತ ಯಶಸ್ವಿಯಾಗುತ್ತವೆ. ಆದರೆ ಕಳೆದವಾರ ಮುಕ್ತಾಯವಾದ ಬ್ರಿಕ್ಸ್ ಸಮ್ಮೇಳನ ಹೊಸತಾಗಿ ಹೊಸ ಅಭಿವೃದ್ಧಿ ಬ್ಯಾಂಕ್ (ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್) ಅನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಹೆಸರೇ ಹೇಳುವಂತೆ ಆರಂಭದಲ್ಲಿ ಆಶಾವಾದ ಸೃಷ್ಟಿಸಿದೆ. ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ಇಂಡಿಯಾ, ಚೀನಾ, ರಷ್ಯಾ ಮತ್ತು ದಕ್ಷಿಣ ಆಫ್ರಿಕಗಳಿಗೆ ಅನುಕೂಲವಾಗಲಿದೆ. ಅಂದ ಹಾಗೆ ಹೊಸ ಅಭಿವೃದ್ಧಿ ಬ್ಯಾಂಕ್ ಎಂಬ ಹೆಸರನ್ನೇ ಸೂಚಿಸಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿ.
ಯಾಕೆ ಈ ಬ್ಯಾಂಕ್?
ಸದ್ಯ ವಿಶ್ವದ ಯಾವುದೇ ಅಭಿವೃದ್ಧಿ ವಿಶೇಷವಾಗಿ ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಆಗಬೇಕಾಗಿದ್ದರೆ ಐಎಂಎಫ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ವಿಶ್ವಬ್ಯಾಂಕ್‌ಗಳತ್ತ ನೋಡಬೇಕಾಗುತ್ತದೆ.
ಈ ಬ್ಯಾಂಕ್‌ಗಳು ನೀಡುವ ಸಾಲದ ಬಗ್ಗೆ ಮತ್ತು ಅವುಗಳ ಕಾರ್ಯಶೈಲಿ ಬಗ್ಗೆ ನಮ್ಮ ದೇಶ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಪಸ್ವರ ಈಗಾಗಲೇ ಎದ್ದಿದೆ. ಹೀಗಾಗಿ ಸಮಾನ ಸುಖಿಗಳು ಮತ್ತು ದುಃಖಿಗಳು ಸೇರಿ ಈ ಬ್ಯಾಂಕ್ ರಚಿಸಿಕೊಂಡಿದ್ದಾರೆ.
= ಐದು ರಾಷ್ಟ್ರಗಳಲ್ಲಿ ಕೈಗೊಳ್ಳಲಾಗುವ ಎಲ್ಲ ಮೂಲ ಸೌಕರ್ಯ ಯೋಜನೆಗೆ ಈ ಬ್ಯಾಂಕ್‌ನಿಂದಲೇ ಒದಗಿಸಿಕೊಳ್ಳುವಂಥ ಉತ್ತಮ ಆಲೋಚನೆ.
= ಪಾಶ್ಚಿಮಾತ್ಯ ಹಣಕಾಸು ವ್ಯವಸ್ಥೆಯನ್ನು ನಿಧಾನವಾಗಿ ನಿಲ್ಲಿಸಿ ಸ್ವಾವಲಂಬಿಯಾಗುವತ್ತ ದೃಢ ಹೆಜ್ಜೆ.
ಬ್ರಿಕ್ ಬ್ಯಾಂಕ್ ವಿಶೇಷತೆ
= ರು. 100 ಶತಕೋಟಿ ನಿಧಿ ಹೊಂದಲಿರುವ ಬ್ಯಾಂಕ್
= ಚೀನಾದ ವಹಿವಾಟು ರಾಜಧಾನಿ ಶಾಂಘೈನಲ್ಲಿ ಅದರ ಪ್ರಧಾನ ಕಚೇರಿ.
ನಮ್ಮ ದೇಶದವರೇ ಅದರ ಪ್ರಥಮ ಅಧ್ಯಕ್ಷರು. ಅಧ್ಯಕ್ಷರ ಅಧಿಕಾರದ ಅವಧಿ ಆರು ವರ್ಷ.
ಇದರ ನಂತರ ಐದು ವರ್ಷಗಳ ಅವಧಿಗೆ ಕ್ರಮವಾಗಿ ಬ್ರೆಜಿಲ್, ರಷ್ಯಾ, ಚೀನಾಗೆ ಅಧಿಕಾರದ ಅವಧಿ ಪ್ರಾಪ್ತವಾಗಲಿದೆ. ಅಂದರೆ ತನ್ನ ದೇಶದಲ್ಲಿ ಕೇಂದ್ರ ಕಚೇರಿ ಇದ್ದರೂ ಚೀನಾಕ್ಕೆ ಬ್ಯಾಂಕ್‌ನ ಅಧ್ಯಕ್ಷ ಸ್ಥಾನ ಸಿಗಬೇಕಿದ್ದರೆ ಕನಿಷ್ಠ 15 ವರ್ಷ ಕಾಯಲೇಬೇಕು!
50 ಮಿಲಿಯ ಡಾಲರ್ ಮೊತ್ತವನ್ನು ಐದು ರಾಷ್ಟ್ರಗಳ ನಡುವೆ ಸಮನಾಗಿ ಹಂಚಲಾಗಿದೆ.
ಈ ವರ್ಷ ಈ ಬ್ಯಾಂಕ್ ಸ್ಥಾಪನೆಯಾದರೂ ಅಧಿಕೃತವಾಗಿ ವಹಿವಾಟು ಆರಂಭವಾಗಲಿರುವುದು 2016ರಿಂದ. ಮಾತ್ರವಲ್ಲ ಇತರ ದೇಶಗಳಿಗೂ ಸದಸ್ಯತ್ವ ನೀಡಲು ಆರಂಭಿಸಲಾಗುತ್ತದೆ.
ಬ್ರಿಕ್ಸ್ ರಾಷ್ಟ್ರಗಳ ಬಂಡವಾಳ ಶೇ.55ಕ್ಕಿಂತ ಕಡಿಮೆ ಆಗುವಂತಿಲ್ಲ.
ಭಾರತಕ್ಕೆ ಲಾಭ ಹೇಗೆ?
ದಕ್ಷಿಣ ಏಷ್ಯಾದಲ್ಲಿ ನಮ್ಮ ದೇಶ ಎಷ್ಟು ಹೇಳಿಕೊಂಡರೂ ಪ್ರಬಲ ಆರ್ಥಿಕ ಶಕ್ತಿ ಚೀನಾವೇ. ಹೀಗಾಗಿ ಅದನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕೈಯ್ಯಲ್ಲಿಯೇ ಎಂಬುದನ್ನು ಮರೆಯುವಂತಿಲ್ಲ. ಇದನ್ನು ಮನಗಂಡ ಪ್ರಧಾನಿ ಮೋದಿ, ಬ್ಯಾಂಕ್ ವ್ಯವಹಾರದಲ್ಲಿ ಸಮಾನ ಹಕ್ಕುಗಳ ಸ್ಥಾಪನೆ ಆಗಬೇಕೆಂಬ ಬಗ್ಗೆ ಪ್ರತಿಪಾದಿಸಿದ್ದರು. ಅದಕ್ಕೆ ಒಪ್ಪಿಗೆ ಕೂಡ ಸಿಕ್ಕಿದೆ. ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು.
ದಕ್ಷಿಣ ಅಮೆರಿಕ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಿಕೊಂಡು ಹೊಸ ಬ್ಯಾಂಕಿನ ಸದಸ್ಯತ್ವವನ್ನು ಅವುಗಳಿಗೂ ನೀಡಬೇಕು. ಈ ಮೂಲಕ ಅಲ್ಲಿನ ಮೂಲ ಸೌಕರ್ಯಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಬಹುದು. ಇಂಥ ಕ್ರಮಗಳಿಂದ ವಿಶೇಷವಾಗಿ ಭಾರತಕ್ಕೆ ಆರ್ಥಿಕವಾಗಿಯೂ, ರಾಜತಾಂತ್ರಿಕ ನೆಲೆಯಲ್ಲೂ ನಾವು ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬಹುದು.
ಐಎಂಎಫ್, ಎಡಿಬಿ, ವಿಶ್ವಬ್ಯಾಂಕ್ ಸಾಲ ನೀಡುವ ವೇಳೆ ತಮ್ಮ ವಿಶೇಷವಾಗಿ ಅಮೆರಿಕದ ಹಿತಾಸಕ್ತಿಯನ್ನೇ ಗಮನದಲ್ಲಿಟ್ಟುಕೊಂಡು ನೆರವು ನೀಡುತ್ತವೆ. ಜತೆಗೆ ಗುಪ್ತ ಕಾರ್ಯಸೂಚಿಗಳನ್ನೂ ಜಾರಿಗೊಳಿಸುತ್ತಿವೆ. ಹೊಸತಾಗಿ ಆರಂಭವಾಗಿರುವ ಹೊಸ ಅಭಿವೃದ್ಧಿ ಬ್ಯಾಂಕ್ ಇಂಥ ವಿಚಾರಗಳನ್ನು ಬಿಟ್ಟು ಸುಸೂತ್ರವಾಗಿ ವ್ಯವಹಾರ ನಡೆಸಿದರೆ ಭಾರತಕ್ಕೆ ಅನುಕೂಲವಾಗಿ ಪರಿಣಮಿಸಬಹುದು. ಆದರೆ ಅದರ ಪರಿಣಾಮಗಳನ್ನು ನಿರೀಕ್ಷಿಸಲು ಕನಿಷ್ಠ 10-15 ವರ್ಷಗಳು ಬೇಕಾಗಬಹುದು.
ಬ್ರಿಕ್ಸ್ ಬ್ಯಾಂಕಿನ ನಿಧಿ
100 ಶತಕೋಟಿ.
ಭಾರತ, ಬ್ರೆಜಿಲ್ ಮತ್ತು ರಷ್ಯಾ ತಲಾ 18 ಬಿಲಿಯನ್ ಡಾಲರ್ ನೀಡಬೇಕು.
ಚೀನಾ 41 ಮಿಲಿಯನ್ ಡಾಲರ್ ಕೊಡಬೇಕು.
ದಕ್ಷಿಣ ಆಫ್ರಿಕಾ 5 ಬಿಲಿಯನ್ ಡಾಲರ್ ಪಾವತಿ.
ಶೇ.42
ವಿಶ್ವದ ಜನಸಂಖ್ಯೆಯ ಪೈಕಿ ಇಷ್ಟು ಮಂದಿ ಬ್ರಿಕ್ಸ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ.
ಶೇ.17
ಜಗತ್ತಿನ ವ್ಯಾಪಾರ- ವಹಿವಾಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು.
ಶೇ.20
ವಿಶ್ವದ ಜಿಡಿಪಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು.
ಶೇ.11
ಪ್ರಪಂಚದ ಬಂಡವಾಳ ಹೂಡಿಕೆಯಲ್ಲಿ ಈ ರಾಷ್ಟ್ರಗಳ ಪಾಲು.
ವಿಶ್ವದ ಇತರ ಪ್ರಮುಖ ಹಣಕಾಸು ಸಂಸ್ಥೆಗಳು
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)
45 ರಾಷ್ಟ್ರಗಳ ಪ್ರತಿನಿಧಿಗಳು ಸೇರಿಕೊಂಡು 1944ರಲ್ಲಿ ಅಮೆರಿಕದ ಬ್ರೆಂಟನ್‌ವುಡ್ಸ್‌ನಲ್ಲಿ ಆರಂಭ. ಅಂತಾರಾಷ್ಟ್ರೀಯ ಹಣಕಾಸು ಸಹಕಾರಕ್ಕೋಸ್ಕರ ಆರಂಭ.
ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಯ ಹೊಣೆ ಈ ಸಂಸ್ಥೆಗಿದೆ. ಸದಸ್ಯ ರಾಷ್ಟ್ರಗಳ ನಡುವಿನ ಸುಸ್ಥಿರ ಹಣಕಾಸು ಅಭಿವೃದ್ಧಿಯೇ ಆದ್ಯತೆ.
182 ಸದಸ್ಯ ರಾಷ್ಟ್ರಗಳು, 2,300 ಉದ್ಯೋಗಿಗಳು.
ಹಣಕಾಸು ಮೂಲ- ಸದಸ್ಯ ರಾಷ್ಟ್ರಗಳು ನೀಡುವ ಮೀಸಲು ನಿಧಿಯೇ ಆಧಾರ.
316 ಮಿಲಿಯನ್ ಡಾಲರ್ ನಿಧಿಯ ಪ್ರಮಾಣ.
ವಿಶ್ವಬ್ಯಾಂಕ್
ವಿದ್ಯುತ್ ಮತ್ತು ಸಾರಿಗೆ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ 1944ರಲ್ಲಿ ಆರಂಭ. ನಂತರದ ದಶಕಗಳಲ್ಲಿ ವಿಶ್ವದ ಇತರ ಅರ್ಥ ವ್ಯವಸ್ಥೆಯ ಚಟುವಟಿಕೆಗಳಿಗೆ ನೆರವು ನೀಡಲು ಆರಂಭಿಸಿತು.
ವಿಶ್ವದ ಅತ್ಯಂತ ಬಡರಾಷ್ಟ್ರಗಳ ಅಭಿವೃದ್ಧಿ ಯೋಜನೆಗಳಿಗೆ ದೀರ್ಘಾವಧಿಯ ಸಾಲ ಪ್ರಥಮ ಆದ್ಯತೆ.
180 ಸದಸ್ಯ ರಾಷ್ಟ್ರಗಳು, 7,000 ಉದ್ಯೋಗಿಗಳು.
184 ಮಿಲಿಯನ್ ಡಾಲರ್ ನಿಧಿಯ ಪ್ರಮಾಣ. ಸದಸ್ಯ ರಾಷ್ಟ್ರಗಳು ಶೇ.10ರಷ್ಟು ಷೇರು ನೀಡುತ್ತವೆ. ಅಂತಾರಾಷ್ಟ್ರೀಯ ಬಾಂಡ್ ಮಾರುಕಟ್ಟೆಯಿಂದ ಪಡೆದುಕೊಳ್ಳುತ್ತದೆ.
ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಏಡಿಬಿ)
ಏಷ್ಯಾದ ಪ್ರಾದೇಶಿಕ ವಲಯದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ 1960ರಲ್ಲಿ ಆರಂಭ. 31 ಸದಸ್ಯರ ಜತೆ ಅಧಿಕೃತವಾಗಿ ವಹಿವಾಟು ಶುರುಮಾಡಿದ್ದು 1966ರ ಡಿ.31.
ಐದು ಪ್ರಮುಖ ವಲಯದಲ್ಲಿ ಸದಸ್ಯ ರಾಷ್ಟ್ರಗಳಿಗೆ ಸಾಲ ನೀಡುತ್ತದೆ. ಅವುಗಳೆಂದರೆ ಮೂಲಸೌಕರ್ಯ, ಪರಿಸರ,ಪ್ರಾದೇಶಿಕ ಸಹಕಾರ ಮತ್ತು ಏಕೀಕರಣ, ಹಣಕಾಸು ಕ್ಷೇತ್ರದ ಅಭಿವೃದ್ಧಿ, ವಿದ್ಯಾಭ್ಯಾಸ.
67 ಸದಸ್ಯ ರಾಷ್ಟ್ರಗಳು, 3,062 ಉದ್ಯೋಗಿಗಳು.
165 ಮಿಲಿಯನ್ ಡಾಲರ್- ಮಾರುಕಟ್ಟೆಗಳಿಗೆ ಬಾಂಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ, ಸಾಲದ ಮೇಲಿನ ಬಡ್ಡಿಯಿಂದ, ಸದಸ್ಯ ರಾಷ್ಟ್ರಗಳು ನೀಡುವ ಸದಸ್ಯ ಶುಲ್ಕ ಹಣಕಾಸಿನ ಆಧಾರಗಳು.
ಬ್ರಿಕ್ಸ್ ಜನಸಂಖ್ಯೆ
1. ಬ್ರೆಜಿಲ್ 201046886
2. ರಷ್ಯಾ 143541702
3. ಭಾರತ 1210193442
4. ಚೀನಾ 1354040000
5. ದಕ್ಷಿಣ ಆಫ್ರಿಕ 51,770,560
ಗೃಹೋಪಯೋಗಿ ವೆಚ್ಚ
1,266.3
671.6
737.9
1,835.3
173.8
ಸರ್ಕಾರಿ ಖರ್ಚು 846.6
414.4
281.1
2031.0
95.3
ಜಿಡಿಪಿ
13,623
17,708
3,829
9,161
11,375
ರಫ್ತು
256.0
542.5
309.1
2021.0
101.2
ಆಮದು 238.8
358.1
500.3
1,780.0
106.8
ಸಾಕ್ಷರತಾ ಪ್ರಮಾಣ
93.50ರ್
99.60ರ್
74.04 ರ್
92.20 ರ್
86.40 ರ್
ಜೀವಿತಾವಾಧಿ ವರ್ಷಗಳಲ್ಲಿ
74.6 ವರ್ಷ
69.7 ವರ್ಷ
64.2 ವರ್ಷ
72.7 ವರ್ಷ
51.2 ವರ್ಷ
ಮಾನವ ಅಭಿವೃದ್ಧಿ ಸೂಚ್ಯಂಕ
0.730
0.788
0.554
0.699
0.629
= ಸದಾಶಿವ ಕೆ.
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


