ವಾಣಿಜ್ಯ

ವಿಂಡೋ ಶಾಪಿಂಗ್

Published On :

ಎಎಸ್‌ಯುಎಸ್ ಸಂಸ್ಥೆಯು ಝೆನ್‌ಫೋನ್ ಸೀರೀಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿವಿಧ ಬಣ್ಣ ಹಾಗೂ ಅಳತೆಯಲ್ಲಿ ದೊರೆಯುವ ಈ ಡ್ಯುಯೆಲ್ ಸಿಮ್ ಸ್ಮಾರ್ಟ್‌ಫೋನ್‌ಗಳ ಬೆಲೆ ರು. 6000ದಿಂದ 16000ದ ವರೆಗೂ ಇದೆ. ಗ್ಲೌಸ್ ಇಲ್ಲವೇ ಪೆನ್ ಬಳಸಿ ಕೂಡಾ ಈ ಸ್ಕ್ರೀನ್ ಅನ್ನು ಬಳಸಬಹುದಾಗಿದ್ದು, 13 ಎಂಪಿ ಕ್ಯಾಮೆರಾ ಹೊಂದಿವೆ.

ಹ್ಯಾಂಡ್ಸ್ ಕಾರ್ಪೆಟ್
ಭಾರತದ ಕಾರ್ಪೆಟ್ ಮಳಿಗೆ ಹ್ಯಾಂಡ್ಸ್ ತನ್ನ ಹಸ್ತನಿರ್ಮಿತ ಪಾರಂಪರಿಕ ಸಂಗ್ರಹವನ್ನು ಪರಿಚಯಿಸುತ್ತಿದೆ. ಸಾಂಪ್ರದಾಯಿಕ ವಿನ್ಯಾಸಗಳಿಗೆ ಸಮಕಾಲೀನ ಸೌಂದರ್ಯಶಾಸ್ತ್ರ ಸೂಕ್ಷ್ಮತೆಗಳನ್ನು ಬೆರೆಸಿ ವಿನ್ಯಾಸಗೊಳಿಸಲಾಗಿರುವ ಈ ಕಾರ್ಪೆಟ್‌ಗಳನ್ನು ನ್ಯೂಜಿಲೆಂಡ್ ಉಣ್ಣೆ, ವಿಸ್ಕೋಸ್ ಮತ್ತು ಶ್ರೇಷ್ಠ ರೇಶ್ಮೆ ನೂಲಿನಿಂದ ತಯಾರಿಸಲಾಗಿದೆ. ಆಕರ್ಷಕ ವರ್ಣಗಳನ್ನು ಹೊಂದಿರುವ ಈ ಕಾರ್ಪೆಟ್‌ಗಳು ಬೆಂಗಳೂರಿನ ಮಿಷನ್ ರಸ್ತೆಯ ಹ್ಯಾಂಡ್ಸ್ ಎಕ್ಸ್‌ಕ್ಲೂಸಿವ್ ಸ್ಟೋರ್‌ನಲ್ಲಿ ಲಭ್ಯವಿವೆ.

ಅಕ್ವಾಗಾರ್ಡ್ ಮ್ಯಾಗ್ನ
ಅಕ್ವಾಗಾರ್ಡ್‌ನ ಮೂಲ ಕಂಪನಿಯಾದ ಯುರೇಕಾ ಫೋರ್ಬ್ಸ್ ಅಕ್ವಾಗಾರ್ಡ್ ಮ್ಯಾಗ್ನ ಎಂಬ ಹೆಸರಿನಲ್ಲಿ ಶುದ್ಧ ಕುಡಿವ ನೀರಿನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಎಂಎಟಿ (ಮಿನರಲ್ ಅಬ್ಸಂಚಿಷ್ ಟೆಕ್ನಾಲಜಿ) ಯೊಂದಿಗೆ ಲಭ್ಯವಿರುವ ದೇಶದ ಏಕೈಕ ಉತ್ಪನ್ನವಾಗಿ ಇದು ಗ್ರಾಹಕರಿಗೆ ದೊರೆಯಲಿದೆ. ಈ ನೀರು 20 ನಿಮಿಷ ಕುದಿಸಿ ಆರಿಸಿದ ನೀರಿನಂತೆ ಶುದ್ಧವಾಗಿರಲಿದೆ. ಅಕ್ವಾಗಾರ್ಡ್ ಮ್ಯಾಗ್ನದ ಬೆಲೆ ರು. 17,490 ಮಾತ್ರ. ಹೆಚ್ಚಿನ ಮಾಹಿತಿಗೆ 9833163620 ಸಂಪರ್ಕಿಸಬಹುದು.

ಪೇಪರ್‌ಕ್ರಾಫ್ಟ್ ಮೇಳ

ಜುಲೈ 12ರಿಂದ 27ರವರೆಗೆ ನಗರದ ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ರತನ್ ಜೈಪುರ್ ಸಂಸ್ಥೆಯು ವಿವಿಧ ನಮೂನೆಯ ಪೇಪರ್ ಪ್ರಾಡಕ್ಟ್‌ಗಳ ಪ್ರದರ್ಶನ- ಮಾರಾಟ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗೆ 080- 67266221 ಸಂಪರ್ಕಿಸಬಹುದು.

ಹಿಮಾಲಯ ಬೇಬಿ ಪೌಡರ್

ಬಿಸಿಲಿನ ಬೇಗೆ ಹೋಗಲಾಡಿಸಲು ಹಿಮಾಲಯದಿಂದ ಹೊಸ ಮಾದರಿಯ ಪ್ರಿಕ್ಲಿ ಹೀಟ್ ಬೇಬಿ ಪೌಡರ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಚರ್ಮದಲ್ಲಿ ಯಾವುದೇ ತೆರನಾದ ಕೆರೆತ, ನವೆ ಮುಂತಾದ ಮಕ್ಕಳ ಚರ್ಮದ ತೊಂದರೆಗಳ ನಿವಾರಣೆಗೆ ಈ ಹೊಸ ಪೌಡರ್ ವಿಶೇಷವಾಗಿ ಕಾರ್ಯನಿರ್ವಹಿಸಲಿದೆ. 50 ಗ್ರಾಂನ ಪ್ಯಾಕ್‌ಗೆ ರು. 40 ಮತ್ತು 100 ಗ್ರಾಂನ ಪ್ಯಾಕ್‌ಗೆ ರು. 70 ಹಾಗೂ 200 ಗ್ರಾಂನ ಪ್ಯಾಕ್‌ಗೆ ರು. 125 ದರವಿದ್ದು, ಎಲ್ಲ ಪ್ರಮುಖ ಮಳಿಗೆ ಮತ್ತು ಹಿಮಾಲಯದ ಮಳಿಗೆಗಳಲ್ಲಿ ಈ ಉತ್ಪನ್ನ ಲಭ್ಯವಿದೆ.

ಪ್ರೊಡೆಬ್‌ನಿಂದ ಮೈಕ್ರೋ ಬ್ರ್ಯೂವರಿ ಎಕ್ವಿಪ್‌ಮೆಂಟ್
ಪ್ರೊಡೆಬ್ ಬ್ರ್ಯೂವರಿ ಇಂಡಿಯಾ ಈಗ ಬೆಲ್ಜಿಯಂ ಮೂಲದ ಸಂಸ್ಥೆಯೊಂದಿಗೆ ತಂತ್ರಜ್ಞಾನ ಸಹಭಾಗಿತ್ವದಲ್ಲಿ ನಿರ್ಮಿತ ಮೈಕ್ರೋ ಬ್ರ್ಯೂವರಿ ಎಕ್ವಿಪ್‌ಮೆಂಟ್ ಅನ್ನು ಬಿಡುಗಡೆ ಮಾಡಿದೆ. ಈ ಯಂತ್ರಗಳು ಬ್ರ್ಯೂಪಬ್‌ಗಳಿಗಾಗಿ ಹ್ಯಾಂಡ್‌ಕ್ರಾಫ್ಟೆಡ್ ಬೀರ್ ತಯಾರಿಸುವ ಚಿಕ್ಕ ಸಂಸ್ಥೆಗಳಿಗೆ ಸೂಕ್ತವಾಗಿವೆ. ನಿರ್ಮಾಣ, ವಿನ್ಯಾಸ ಅಲ್ಲದೆ ಮಾನವಚಾಲಿತ, ಅರೆ ಸ್ವಯಂಚಾಲಿತ, ಸ್ವಯಂಚಾಲಿತ ವೈಶಿಷ್ಟ್ಯಗಳನ್ನು ಆಧರಿಸಿ ಈ ಯಂತ್ರಗಳ ಬೆಲೆ ರು. 30 ಲಕ್ಷದಿಂದ ರು. 1 ಕೋಟಿವರೆಗೆ ಇರುತ್ತದೆ. ವಿವರಗಳಿಗೆ 1-800-425-20000 /೤91-94835 25500 ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.