ವಾಣಿಜ್ಯ

ಇ-ಬೇನಿಂದ ಮಾರುಕಟ್ಟೆ ವಿಸ್ತರಣೆ

ಇ-ವಾಣಿಜ್ಯ ತಾಣ 'ಇಬೇ ಇಂಡಿಯಾ; (www.eBay.in) ತನ್ನ ಮಾರುಕಟ್ಟೆಯನ್ನು ....

ಇ-ಬೇನಿಂದ ಮಾರುಕಟ್ಟೆ ವಿಸ್ತರಣೆ
Published On :

ಇ-ವಾಣಿಜ್ಯ ತಾಣ 'ಇಬೇ ಇಂಡಿಯಾ; (www.eBay.in) ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದ್ದು, 2 ಲಕ್ಷಕ್ಕೂ ಅಧಿಕ ಫ್ಯಾಷನ್ ಹಾಗೂ ಲೈಫ್‌ಸ್ಟೈಲ್ ಉತ್ಪನ್ನಗಳನ್ನು ಹೊರತಂದಿದೆ. ಮಹಿಳೆ ಹಾಗೂ ಪುರುಷರಿಗಾಗಿ 1 ಸಾವಿರಕ್ಕೂ ಹೆಚ್ಚಿನ ಸ್ಥಳೀಯ ಹಾಗೂ ರಾಷ್ಟ್ರೀಯ ಬ್ರಾಂಡ್‌ಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಹಲವು ವ್ಯಾಪಾರಿ ಸಂಸ್ಥ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆನೆಟನ್, ಬಿಬಾ, ರೆಮನಿಕಾ ಜಲಸ್ 21 ಸೇರಿ ಹಲವು ಬ್ರಾಂಡ್‌ಗಳೊಂದಿಗೆ ಕೈ ಜೋಡಿಸಿರುವ ಇಬೇ ಇಂಡಿಯಾ, ಉತ್ಪನ್ನಗಳ ಲಭ್ಯತೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.
ಬಾತ್ರಾಸ್‌ನಿಂದ ಸಮಗ್ರ ಚಿಕಿತ್ಸಾ ಪದ್ಧತಿ
ಶ್ವಾಸಕೋಶದ ಅಲರ್ಜಿಯನ್ನು ಶೀಘ್ರವಾಗಿ ಪತ್ತೆಹಚ್ಚುವ ಸಮಗ್ರ ಚಿಕಿತ್ಸಾ ಪದ್ಧತಿಯನ್ನು ಡಾ.ಬಾತ್ರಾಸ್ ಆರೋಗ್ಯ ಸೇವಾ ಸಮೂಹ ಪರಿಚಯಿಸಿದೆ. ಸಮಗ್ರ ಅಲರ್ಜಿ ಪತ್ತೆ ವ್ಯವಸ್ಥೆಯು 30 ನಿಮಿಷಗಳಲ್ಲಿ ರೋಗಕ್ಕೆ ಕಾರಣವಾದ ಅಂಶವನ್ನು ಕಂಡುಹಿಡಿಯುತ್ತದೆ. ನಿಖರ ಫಲಿತಾಂಶ ನೀಡುವ ವ್ಯವಸ್ಥೆಯು ರೋಗನಿರ್ಣಯ, ತಡೆಗಟ್ಟುವಿಕೆ, ಸ್ವಯಂ ಸಹಾಯ, ಚಿಕಿತ್ಸೆಯನ್ನು ಒಳಗೊಂಡಿದೆ. ಚಿಕಿತ್ಸೆಗೆ ಬಳಸುವ ಕಿಟ್‌ಗಳನ್ನು ಲಂಡನ್‌ನನಿಂದ ಆಮದು ಮಾಡಿಕೊಂಡಿದ್ದು, ಎಲ್ಲಾ ಬಾತ್ರಾಸ್ ಚಿಕಿತ್ಸಾಲಯಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಢಿಢಿಢಿ.ಜ್ಠಛಿಛಡ್ಠಿಛಡ.್ಛ್ಟಟ ಭೇಟಿ ನೀಡಿ.



ಜಾಗತಿಕ ಡೆಲಿವರಿ ಕೇಂದ್ರ
ಐರನ್ ಮೌಂಟೆನ್ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆಯು ಬೆಂಗಳೂರಿನಲ್ಲಿ ಜಾಗತಿಕ ಡೆಲಿವರಿ ಕೇಂದ್ರವನ್ನು ವಿಸ್ತರಿಸಿದೆ. ಮಹದೇವಪುರದ ಬಾಗಮನೆ ತಂತ್ರಜ್ಞಾನ ಕೇಂದ್ರದಲ್ಲಿ 450 ಕ್ಕೂ ಅಧಿಕ ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದು, 56,929 ಚ.ಅಡಿ ವಿಸ್ತೀರ್ಣದಲ್ಲಿ ನೂತನ ಸೇವೆಗಳು ಲಭ್ಯವಾಗಲಿದೆ. ಉತ್ತರ ಅಮೆರಿಕ, ಯುರೋಪ್, ಲ್ಯಾಟಿನ್ ಅಮೆರಿಕ ಹಾಗೂ ಏಷ್ಯಾ ಫೆಸಿಫಿಕ್ ರಾಷ್ಟ್ರಗಳಿಗೆ ಸೇವಾ ಸಂಪರ್ಕ ಕಲ್ಪಿಸಿದ್ದು, ತಂತ್ರಾಂಶ ಅಭಿವೃದ್ಧಿ, ಇಸಿಎಂ, ಬಿಸಿನೆಸ್ ಇಂಟೆಲಿಜೆನ್ಸ್ ಸೇರಿದಂತೆ ಹಲವು ಸೇವೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.


ಟಾಟಾನಿಂದ ರೆವೋಟ್ರನ್ ಪ್ರಯೋಗಾಲಯ
ಟಾಟಾ ಮೋಟಾರ್ಸ್ ಅಭಿವೃದ್ಧಿಪಡಿಸಿದ '1.2 ಲೀ.ಎಂಪಿಎಫ್‌ಐ ಟರ್ಬೊಚಾರ್ಜಡ್‌' ಎಂಜಿನ್ ಪ್ರಚಾರಕ್ಕಾಗಿ 15 ದೇಶಗಳಲ್ಲಿ ರೆವೋಟ್ರನ್ ಪ್ರಯೋಗಾಲಯ ಆರಂಭಿಸಲಾಗಿದೆ. ದೆಹಲಿ, ಮುಂಬೈ, ಲೂಧಿಯಾನ, ಹೈದರಾಬಾದ್ ಹಾಗೂ ಬೆಂಗಳೂರಿನ ಕೋರಮಂಗಲದಲ್ಲಿ ರೆವೋಟ್ರನ್ ಪ್ರಯೋಗಾಲಯ ಆರಂಭಿಸಿದ್ದು, ಜು.11 ರಿಂದ 13 ರವರೆಗೆ ಫೀನಿಕ್ಸ್ ಮಾಲ್‌ನಲ್ಲಿ ಪ್ರಯೋಗಾಲಯದ ಮಾದರಿಯನ್ನು ನಿರ್ಮಿಸಲಾಗಿದೆ. ಮಾರುಕಟ್ಟೆಗೆ ಸದ್ಯದಲ್ಲೇ ಬಿಡುಗಡೆಯಾಗಲಿರುವ ಜೆಸ್ಟ್ ಹಾಗೂ ಬೋಲ್ಟ್ ಕಾರುಗಳಿಗೆ ಹೊಸ ಎಂಜಿನ್ ಅಳವಡಿಸಲಾಗಿದೆ. ಎವಿಎಲ್, ಬಾಷ್, ಹನಿವೆಲ್, ಮೆಹಲ್, ಐಎನ್‌ಎ ಸಂಸ್ಥೆಗಳ ತಂತ್ರಜ್ಞರು ಎಂಜಿನ್ ಸಿದ್ಧಪಡಿಸಿದ್ದಾರೆ. ಪ್ರಚಾರದ ಭಾಗವಾಗಿ ರೆವೋಟ್ರನ್ ಚಾಲೆಂಜ್ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು, ವಾಹನ ಪ್ರಿಯರು ಎಂಜಿನ್ ಅನುಭವ ಪಡೆಯಲು ಅವಕಾಶ ನೀಡಲಾಗುತ್ತದೆ.



ವಿಗೋ ಸ್ಕೂಟರ್ ಪರಿಚಯ
ಟಿವಿಎಸ್ ಮೋಟಾರ್ಸ್ 2014 ನೇ ಸಾಲಿನ 'ವೀ ಟೈಮ್‌' ಮಾದರಿ ವೀಗೊ ಸ್ಕೂಟರ್ ಪರಿಚಯಿಸಿದೆ. ನೂತನ ವೀಗೊ ಸ್ಕೂಟರ್‌ನಲ್ಲಿ ಹೊಸ ಸೌಲಭ್ಯಗಳನ್ನು ನೀಡಲಾಗಿದೆ. 110 ಸಿಸಿ ಎಂಜಿನ್ ಸಾಮರ್ಥ್ಯದ ಸ್ಕೂಟರ್ ಪ್ರತಿ ನಿಮಿಷಕ್ಕೆ 7,500 ಸುತ್ತುಗಳ ಲೆಕ್ಕದಲ್ಲಿ 8 ಬಿಎಚ್‌ಪಿ ಶಕ್ತಿ ಹೊರಹಾಕುತ್ತದೆ. 12 ಇಂಚು ಅಗಲದ ಅಲಾಯ್ ಚಕ್ರಗಳು ಟ್ಯೂಬ್ ರಹಿತವಾಗಿದೆ. ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಹಾಗೂ ಗ್ಯಾಸ್ ತುಂಬಿದ ಷಾಕ್ ಅಬ್ಸಾರ್ಬರ್‌ಗಳಿದ್ದು, ಸಂಪೂರ್ಣವಾದ ಡಿಜಿಟಲ್ ಮೀಟರ್ ಅಳವಡಿಸಲಾಗಿದೆ. ಹಲವು ಬಣ್ಣಗಳಲ್ಲಿ ವೀಗೊ ಲಭ್ಯವಿದ್ದು, ಯುವಜನರನ್ನು ಆಕರ್ಷಿಸಲು ಮೋನೊಟೋನ್ ಗ್ರಾಫಿಕ್ಸ್ ಬಳಸಲಾಗಿದೆ.  ಲೀ.ಪೆಟ್ರೋಲ್‌ಗೆ 62 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಎಕ್ಸ್‌ಷೋ ರೂಂನಲ್ಲಿ 46,410 ದರದಲ್ಲಿ ಲಭ್ಯವಿದೆ.



ಮನೆ ಬಾಗಿಲಲ್ಲೇ ದುರಸ್ತಿ
ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಾರ್ಡ್‌ವೇರ್ ಸಮಸ್ಯೆಗಳಾದರೆ ದುರಸ್ಥಿ ಸೇವೆಗಳು ಮನೆ ಬಾಗಿಲಲ್ಲೇ ಲಭ್ಯವಾಗಲಿದೆ. ಈ ವಿನೂತನ ಸೇವೆಯನ್ನು ಯುನಿವರ್‌ಸೆಲ್ ಸಂಸ್ಥೆ ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ಗಳಿಗೆ ನೀರು ಹೋಗುವುದು, ಪರದೆಗೆ ಹಾನಿ, ಮದರ್‌ಬೋರ್ಡ್‌ಬದಲಾವಣೆ ಮೊದಲಾದ ಸೇವೆಪಡೆಯಲು ಮಳಿಗೆಗೆ ತೆರಳಬೇಕಿಲ್ಲ. ನೇರವಾಗಿ ಮನೆಗೆ ಭೇಟಿ ನೀಡುವ ಯುನಿವರ್‌ಸೆಲ್ ಸಿಬ್ಬಂದಿ, ದುರಸ್ಥಿ ಬಳಿಕ ಮತ್ತೆ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿರುಗಿಸುತ್ತಾರೆ. ವಿವಿಧ ದರ ಪ್ಯಾಕೇಜ್‌ಗಳನ್ನು ನಿಗದಿಪಡಿಸಿದೆ. ಆರಂಭಿಕ ಹಂತವಾಗಿ ಉಚಿತ ಸೇವೆ ಲಭ್ಯವಿದೆ.



ಟ್ರಾವೆಲಾಗ್ ಸಂಗ್ರಹ
ಉದ್ಯೋಗಕ್ಕಾಗಿ ಸದಾ ಪ್ರಯಾಣಿಸುವವರಿಗೆ ವ್ಯಾನ್ ಹ್ಯೂಸೆನ್ ಸಂಸ್ಥೆ 'ಟ್ರಾವೆಲಾಗ್ ಸಂಗ್ರಹ' ಬಿಡುಗಡೆ ಮಾಡಿದೆ. ಈ ಸಂಗ್ರಹದಲ್ಲಿನ ಉಡುಪುಗಳು ಸುಕ್ಕು, ಬೆವರಿನ ಕಲೆ, ವಾಸನೆ ಮೊದಲಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಸುಕ್ಕು ತಡೆಯಲು 'ಬೆಸ್ಟ್ ನಾನ್ ಐರನ್‌', ಕಲೆ ತಡೆಗಟ್ಟುವ 'ಎವರ್ ಕ್ಲೀನ್‌', ಬೆವರು ಹೀರಿಕೊಂಡು ಆವಿಯಾಗುವ 'ಎವರ್ ಫ್ರೆಶ್‌', ಬೆವರಿನಿಂದಾಗುವ ಕಲೆ ತಡೆಯುವ 'ಸೂಪರ್ ಡ್ರೈ', ಸೇರಿದಂತೆ ಹಲವು ಉಡುಪುಗಳನ್ನು ಪರಿಚಯಿಸಲಾಗಿದೆ.
ಪಿಜ್ಜಾ ಟ್ವಿಸ್ಟ್
ಗ್ರಾಹಕರ ಬೇಡಿಕೆ ಹೆಚ್ಚಿರುವುರಿಂದ ಪಿಜ್ಜಾ ಕಾರ್ನರ್ ಮತ್ತೊಮ್ಮೆ 'ಪಿಜ್ಜಾ ಟ್ವಿಸ್ಟ್‌' ತಿನಿಸನ್ನು ಗ್ರಾಹಕರ ಕೈಗಿಡಲಿದೆ. ಈ ಹಿಂದೆ ಪಿಜ್ಜಾ ಟ್ವಿಸ್ಟ್‌ಗಳ ತಯಾರಿಕೆಯನ್ನು ಕಾರ್ನರ್ ಸ್ಥಗಿತಗೊಳಿಸಿತ್ತು. ಗ್ರಾಹಕರ ಬೇಡಿಕೆ ಮೇರೆಗೆ ಮತ್ತೊಮ್ಮೆ ಟ್ವಿಸ್ಟ್ ನೀಡಲು ಸಂಸ್ಥೆ ನಿರ್ಧರಿಸಿದೆ. ಸಸ್ಯಾಹಾರ(99), ಮಾಂಸಾಹಾರ (109) ಒಳಗೊಂಡ ಟ್ವಿಸ್ಟ್ ಲಭ್ಯವಿದೆ. ಹತ್ತಿರದ ಪಿಜ್ಜಾ ಕಾರ್ನರ್ ಅಥವಾ 44112233 ದೂ.ಸಂ. ಸಂಪರ್ಕಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.