ವಾಣಿಜ್ಯ

ಅಂಚೆ ಮಿಂಚು

ಅಂಚೆ ಮಿಂಚು
Published On :

ಸಣ್ಣ ಉಳಿತಾಯದಲ್ಲಿ ಬಹಳ ಹಿಂದಿನಿಂದಲೂ ಭಾರತೀಯ ಅರ್ಥ ವ್ಯವಸ್ಥೆಗೆ ತನ್ನದೇ ಕಾಣಿಕೆಯನ್ನು ಅಂಚೆ ಇಲಾಖೆ ನೀಡುತ್ತಿದೆ. ಆಧುನಿಕ ಯುಗದ ಪೈಪೋಟಿಯ ಭರಾಟೆಯಲ್ಲಿ ಗ್ರಾಹಕರು ಅಂಚೆ ಇಲಾಖೆಗಿಂತ ಷೇರು, ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಕೆಲವರು ಆಧಿಕ ಬಡ್ಡಿ ಪಡೆಯಲು ಹೋಗಿ ಮೋಸ ಹೋಗಿದ್ದಾರೆ. ಅಂಚೆ ಇಲಾಖೆಯಲ್ಲಿಯೇ ತುಸು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದಲ್ಲಿ ಅಧಿಕ ಬಡ್ಡಿ ಪಡೆಯಬಹುದು. ಅಂಚೆ ಇಲಾಖೆಯ ಮಂತ್ಲಿ ಇನ್‌ಕಂ ಸ್ಕೀಮ್ ಹಾಗೂ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಇವುಗಳ ಮೂಲಕ ಆಧಿಕ ಬಡ್ಡಿ ಗಳಿಸಬಹುದು.
ಮಂತ್ಲಿ ಇನ್‌ಕಂ ಸ್ಕೀಮ್
ಈ ಖಾತೆಯು ಐದು ವರ್ಷಗಳ ಅವಧಿಯದ್ದಾಗಿರುತ್ತದೆ. ಪ್ರಸ್ತುತ ಇದರ ಬಡ್ಡಿ ದರ ಶೇ.8.4. ಒಬ್ಬರು ಕನಿಷ್ಠ 1, 500- ಗರಿಷ್ಠ 4,50,000 ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದಲ್ಲಿ 9,00,000 ದವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯಿಂದ ನೀವು ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಬಡ್ಡಿ ಪಡೆಯುವಿರಿ. ಅದನ್ನು ನೀವು ಪಡೆಯದೆ, ಅದರ ಮೊತ್ತದಷ್ಟೇ 5 ವರ್ಷದ ಆರ್.ಡಿ. ಡಿಪಾಸಿಟ್ ಮಾಡಿದಲ್ಲಿ ಶೇ.8.3ರಷ್ಟು ಬಡ್ಡಿ ಪಡೆಯಬಹುದು. ಈ ಎರಡು ಖಾತೆಗಳು ಒಟ್ಟಿಗೆ ಮೆಚ್ಯುರಿಟಿಗೆ ಬರುತ್ತದೆ. ಇವರೆಡು ಖಾತೆಗಳಿಂದ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಸರಾಸರಿ ಶೇ.10.57 ಬಡ್ಡಿ ನಿರೀಕ್ಷಿಸಬಹುದು. ಆರ್. ಡಿ ಖಾತೆಗಾಗಿ ಹಣ ಜಮಾ ಮಾಡಲು ನೀವು ಪ್ರತಿ ತಿಂಗಳು ಅಂಚೆ ಕಚೇರಿಗೆ ಹೋಗಬೇಕಿಲ್ಲ. ಎಂಎಸ್‌ಐ ಬಡ್ಡಿಯನ್ನು ನಿಮ್ಮ ಉಳಿತಾಯ ಖಾತೆಗೆ ಜಮಾ ಮಾಡಿ ಅಲ್ಲಿಂದ ಆರ್.ಡಿ.ಗೆ ಜಮಾ ಮಾಡಲು ಒಂದು ಅರ್ಜಿ ನೀಡಿದರೆ ಸಾಕು. ನಿಮಗೆ ಸಮಯ ದೊರೆತಾಗ ಪಾಸ್‌ಪುಸ್ತಕಕ್ಕೆ ಎಂಟ್ರಿ ಮಾಡಿಸಿಕೊಂಡು ಬರಬಹುದು.

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್
ಈ ಖಾತೆಯನ್ನು ತೆರೆಯುವವರು 70 ವರ್ಷ ಮೇಲ್ಪಟ್ಟವರಾಗಿರಬೇಕು. ಖಾತೆಯ ಅವಧಿ ಐದು ವರ್ಷ. ಪ್ರಸ್ತುತ ಇದರ ಬಡ್ಡಿ ಶೇ.9.2.  ಕನಿಷ್ಠ 1,000 ದಿಂದ ಗರಿಷ್ಠ  15 ಲಕ್ಷ ವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯಿಂದ ನಿಮಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದೊರಕುವುದು. ಅದನ್ನು ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಮೂರು ತಿಂಗಳ ಮೊತ್ತವನ್ನು ಮೂರರಿಂದ ಭಾಗಿಸಿ ಪ್ರತಿ ತಿಂಗಳು ಬರುವ ಮೊತ್ತ ಕಂಡುಕೊಳ್ಳಿ. ಆ ಮೊತ್ತವನ್ನು ಐದು ವರ್ಷ ಆರ್.ಡಿ ಮಾಡಿ. ಎರಡು ಖಾತೆಗಳು ಮೆಚ್ಯುರಿಟಿಗೆ ಬಂದಲ್ಲಿ ನೀವು ಸರಾಸರಿಯಾಗಿ ಶೇ.11.56ರ ಬಡ್ಡಿದರ  ನೀರಿಕ್ಷಿಸಬಹುದು.
ಹಣ ಹೂಡಿಕೆ ಮಾಡಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದವರು ಈ ವಿಧಾನದಿಂದ ಅಧಿಕ ಬಡ್ಡಿ ಪಡೆಯಬಹುದು. ಜೊತೆಗೆ ತಮ್ಮ ಬಂಡವಾಳದ ಬಗ್ಗೆ ಟೆನ್ಷನ್ ಮಾಡಿಕೊಳ್ಳದೆ ನಿಶ್ಚಿಂತೆಯಿಂದ ಜೀವನ ಸಾಗಿಸಬಹುದು. ಹೀಗಿರುವಾಗ ಇನ್ನೇಕೆ ತಡ. ನಿಮ್ಮ ಸಮೀಪದ ಅಂಚೆ ಕಚೇರಿಗೆ ದೌಡಾಯಿಸಿ!

= ರಂಗನಾಥ ಜಿ.ಹಾರೋಗೊಪ್ಪ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.