ಪತ್ತೇದಾರಿ ಪಿಕೆಐ
ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ವ್ಯಾಪಾರ ವಹಿವಾಟು ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಕೈಗೆಟುಕುವ ದರದಲ್ಲಿ ...

ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ವ್ಯಾಪಾರ ವಹಿವಾಟು ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಕೈಗೆಟುಕುವ ದರದಲ್ಲಿ ತಂತ್ರಜ್ಞಾನವೂ ಲಭ್ಯವಿದೆ ಅನ್ನಿ. ಆದರೆ ಏನು ಮಾಡೋಣ ಸ್ವಾಮಿ, ಅಂತರ್ಜಾಲಕ್ಕೂ ಲಗ್ಗೆ ಹಾಕುವ ಕಳ್ಳರು ಇದ್ದಾರೆ. ಹೀಗಾಗಿ ಆನ್‌ಲೈನ್ ಬ್ಯಾಂಕ್ ವಹಿವಾಟು, ವ್ಯಾಪಾರದ ಬಗ್ಗೆ ಎಷ್ಟು ಜಾಗರೂಕತೆ ವಹಿಸಿದರೂ ಸಾಲದು ಎನ್ನುವಂಥ ಪರಿಸ್ಥಿತಿ ಬಂದೇ ಬಿಟ್ಟಿದೆ.
ಅದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಸೈಬರ್ ಕ್ರೈಮ್‌ಗಳನ್ನು ತಡೆಗಟ್ಟಲು ಮತ್ತು ತಗ್ಗಿಸಲು ಹಲವು ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ. ಇತ್ತೀಚೆಗಷ್ಟೇ ಅದು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಅದಕ್ಕಾಗಿ ಅದು ದ್ವಿಪದ್ಧತಿಯ ಪರಿಶೀಲನೆ ಅನುಷ್ಠಾನಕ್ಕೆ ಮುಂದಾಗಿದೆ. ಅದರಲ್ಲೂ ವಿಶೇಷವಾಗಿ ವೆಬ್ ಪಾವತಿಗಳಿಗೆ ಹೊಸ ಪದ್ಧತಿ ಅನುಸರಿಸಲು ಮುಂದಾಗಿದೆ.
ಏನಿದು ಹೊಸ ವ್ಯವಸ್ಥೆ?
ಹೊಸ ಪದ್ಧತಿ ಹೇಗೆ ಇರಲಿದೆ ಎಂದರೆ ವೆಬ್ ಪಾವತಿ ವ್ಯವಸ್ಥೆಗೆ ಎಂದಿನಂತೆ ಪಾಸ್‌ವರ್ಡ್ ಬಳಕೆ ಮತ್ತು ಡಿಜಿಟಲ್ ಸಹಿ ವ್ಯವಸ್ಥೆ ಜಾರಿಗೊಳಿಸಲಿದೆ. ಇದಕ್ಕಾಗಿ ಈ ವ್ಯವಸ್ಥೆಗೆ 'ಪಬ್ಲಿಕ್ ಕೀ ಇನ್ಫ್ರಾಸ್ಟ್ರಕ್ಚರ್' (ಪಿಕೆಐ) ಎಂದು ಹೆಸರಿಡಲಾಗಿದೆ. ಇದೊಂದು ರೀತಿಯ ವಿಶೇಷ ರೀತಿಯ ಸಂಕೇತಾಕ್ಷರಗಳನ್ನು ಬಳಸಿಕೊಂಡು ಉಪಯೋಗಿಸುವ ತಂತ್ರಜ್ಞಾನ (ಕ್ರೈಪ್ಟೋಗ್ರಫಿ ಟೆಕ್ನಾಲಜಿ).
ಬಳಕೆ ಹೇಗೆ?
ಎರಡನೇ ಹಂತದ ಪಾಸ್‌ವರ್ಡ್, ನುಡಿಗಟ್ಟು, ಚಿತ್ರ, ಪ್ರಶ್ನೆಯನ್ನು ಇದಕ್ಕಾಗಿ ಬಳಸಬಹುದು.
ಈ ಮೂಲಕ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.
ಮತ್ತೊಂದು ವಿಧಾನವೆಂದರೆ ಯಾವುದೇ ವಸ್ತುವಿನ ಖರೀದಿಗಾಗಿ ಆಯಾ ಬ್ಯಾಂಕ್ ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ಕಳುಹಿಸುವ ದೃಢೀಕರಣ ಸಂಕೇತ (ವೆರಿಫಿಕೇಶನ್ ಕೋಡ್) ವನ್ನು ನೀಡುವುದು.
ಎಲ್ಲೆಲ್ಲಿ ಜಾರಿ?
ಆರ್‌ಟಿಜಿಎಸ್, ಎನ್‌ಇಎಫ್‌ಟಿ ಮೂಲಕ ವರ್ಗವಾಗುವ ಹಣಕ್ಕೆ.
ವಿದೇಶಿ ವಿನಿಮಯ, ಸರ್ಕಾರಿ ಸೆಕ್ಯುರಿಟಿಗಳ ಕ್ಲಿಯರೆನ್ಸ್.
ಹೊಸ ವ್ಯವಸ್ಥೆ ಜಾರಿಯಿಂದಾಗಿ ಆನ್‌ಲೈನ್ ವಹಿವಾಟಿನಲ್ಲಿ ಉಂಟಾಗುವ ಸಮಸ್ಯೆಗಳಿಗೆ ಅಂತ್ಯ ಕಾಣಲಿದೆ ಎನ್ನುವುದು ನಿರೀಕ್ಷೆ.
ಯಾವುದು? ಎಷ್ಟು?(ಶೇ.ವಾರು)
ರೈಲು-ವಿಮಾನ 71
ವಸ್ತುಗಳು 61
ಬಾಡಿಗೆ 49
ದೂರವಾಣಿ-ಮೊಬೈಲ್ 47
ವೈದ್ಯಕೀಯ ಸಂಸ್ಥೆಗಳು 46
ಬಟ್ಟೆ- ಪಾದರಕ್ಷೆಗಳು 44
ಉಪಾಹಾರ- ಪಾನೀಯ 35
369 ಮಿಲಿಯನ್
ದೇಶದಲ್ಲಿ ಇರಬಹುದಾದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ.
ಶೇ. 10-15
ಇದು ಆನ್‌ಲೈನ್ ವ್ಯವಹಾರಗಳಿಗೆ ಮಾತ್ರ ಬಳಸುವ ಕಾರ್ಡ್‌ಗಳು.
- ಸದಾಶಿವ ಕೆ.
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


