ಬ್ಯಾಂಕುಗಳ ವಿಲೀನ
ಬಹಳ ಸಮಯದಿಂದ ಕೇಳಿಬರುತ್ತಿರುವ ಮಾತೆಂದರೆ, ಬ್ಯಾಂಕುಗಳ ಸುಧಾರಣೆ ಮತ್ತು ವಿಲೀನ ಪ್ರಕ್ರಿಯೆ....

ಎಸ್‌ಬಿಐ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಪ್ರಮುಖವಾದುದು. ಈ ಬ್ಯಾಂಕಿಗೆ 157 ವಿದೇಶಿ ಕಚೇರಿಗಳಿವೆ. ಒಟ್ಟಾರೆ ದೇಶಾದ್ಯಂತ 15,000ಕ್ಕೂ ಅಧಿಕ ಶಾಖೆಗಳನ್ನು ಇದು ಹೊಂದಿರುವುದು ಹೆಗ್ಗಳಿಕೆಯೇ ಸರಿ.
ಬಹಳ ಸಮಯದಿಂದ ಕೇಳಿಬರುತ್ತಿರುವ ಮಾತೆಂದರೆ, ಬ್ಯಾಂಕುಗಳ ಸುಧಾರಣೆ ಮತ್ತು ವಿಲೀನ ಪ್ರಕ್ರಿಯೆ. ಜನರಿಗೆ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದ ಹೆಚ್ಚಿನ ಲಾಭ ದೊರಕದೇ ಇರಬಹುದು. ಆದರೆ, ಸುಧಾರಣೆಯಿಂದ ನಿಜಕ್ಕೂ ಅನುಕೂಲವಿದೆ. 1991ರ ನಂತರ ಸುಧಾರಣೆಯ ಗಾಳಿ ಬಂದಿದ್ದರೂ ಈಗಲೂ ನಮ್ಮ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳದ್ದೇ ಪಾರಮ್ಯ. ಅಂದರೆ ಶೇ.70 ವಹಿವಾಟು ಅವುಗಳದ್ದೇ. ಈ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮೊದಲ ಸ್ಥಾನದಲ್ಲಿದ್ದರೂ ವಿಶ್ವಮಟ್ಟದ 20 ಬ್ಯಾಂಕುಗಳ ಪಟ್ಟಿಯಲ್ಲಿ ಅದರ ಹೆಸರೇ ಇಲ್ಲ.
ವಿಲೀನ ಪ್ರಕ್ರಿಯೆ
ಅಂದಹಾಗೆ, ಎಸ್‌ಬಿಐ ಸಮೂಹಕ್ಕೆ ವಿಲೀನ ಪ್ರಕ್ರಿಯೆ ಹೊಸತೇನೂ ಅಲ್ಲ. ಸ್ಟೇಟ್ ಬ್ಯಾಂಕ್ ಸೌರಾಷ್ಟ್ರ (1998ರ ಆ.13) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂದೋರ್ (2009 ಜು.19) ಅನ್ನು ಎಸ್‌ಬಿಐನಲ್ಲಿ ವಿಲೀನಗೊಳಿಸಲು ಒಪ್ಪಿಕೊಂಡು, ನಿರ್ಧರಿಸಲಾಗಿತ್ತು.
ಎಷ್ಟು ಸಹವರ್ತಿ ಬ್ಯಾಂಕುಗಳಿವೆ?
ಸದ್ಯ ಸ್ಟೇಟ್ ಬ್ಯಾಂಕ್ ಸಮೂಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಪಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಇವೆ.
ಯಾವುದೆಲ್ಲ ವಿಲೀನ?
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ಗಳನ್ನು ವಿಲೀನಗೊಳಿಸುವುದು ಕೇಂದ್ರ ಸರ್ಕಾರದ ಮುಂದಿರುವ ಯೋಜನೆ. ಈ ರೀತಿ ಆದಾಗ ಎಸ್‌ಬಿಐ ಜಗತ್ತಿನ ಹತ್ತು ಬಲಿಷ್ಠ ಬ್ಯಾಂಕುಗಳ ಸಾಲಿಗೆ ಸೇರುತ್ತದೆ.
ಏನಾಗುತ್ತದೆ?
ವಿಲೀನದ ಬಳಿಕ ಬ್ಯಾಂಕಿಗೆ ಆರ್ಥಿಕ ಮತ್ತು ಕಾರ್ಯಾಕಾರಿ ಶಕ್ತಿ ಬರುತ್ತದೆ. ಅಂದರೆ, ನಷ್ಟದಲ್ಲಿರುವ ಬ್ಯಾಂಕು ಹಣಕಾಸಿನ ವಿಚಾರದಲ್ಲಿ ಮತ್ತಷ್ಟು ಬಲಿಷ್ಠವಾಗುತ್ತದೆ. ಆದರೆ, ಕೆಲವೊಂದು ಶಾಖೆಗಳನ್ನು ರದ್ದು ಮಾಡಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ವಿಲೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುವವರು ಪ್ರಮುಖವಾಗಿ ವ್ಯಕ್ತಪಡಿಸುತ್ತಿರುವ ವಾದ ಏನೆಂದರೆ, 'ಹಲವು ಮಂದಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ' ಎಂಬುದು. ಆದರೆ, ಬಹುತೇಕರಿಗೆ ಇದರಿಂದ ಲಾಭವೇ ಆಗುತ್ತದೆ. ವಿಲೀನದಿಂದಾಗಿ ಹೊಸ ವಿಭಾಗ ಮತ್ತು ಹೊಸ ರೀತಿಯ ಹೊಣೆ ಸೃಷ್ಟಿಯಾಗುತ್ತದೆ. ಜತೆ ಇರುವ ಶಾಖೆಗಳನ್ನು ಮುಚ್ಚುವ ಸಾಧ್ಯತೆಯೂ ಕಡಿಮೆಯೇ.
ಅಪಾಯವೂ ಇದೆ!
ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಾ ಹೋದಂತೆ ಅವುಗಳಿಗೆ ಒಂದು ರೀತಿಯ ಸರ್ವಾಧಿಕಾರ ಬಂದಂತಾಗುತ್ತದೆ. ಸದ್ಯ ಅಂಥ ವ್ಯವಸ್ಥೆ/ ಅನುಭವವನ್ನು ಸರ್ಕಾರಿ ಸ್ವಾಮ್ಯದ ಕೆಲ ಇಲಾಖೆಗಳಲ್ಲಿ ಮತ್ತು ಕೆಲ ದೊಡ್ಡ ಕಂಪನಿಗಳಲ್ಲಿ ಕಾಣುತ್ತೇವೆ. ಗಾತ್ರದ ದೆಸೆಯಿಂದ ಕಾರ್ಯಕ್ಷಮತೆಯ ಬದಲಿಗೆ ಮೈಗಳ್ಳತನ, ನಿರ್ಲಕ್ಷ್ಯ ಎದ್ದು ಕಾಣುತ್ತದೆ.
2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನಲ್ಲಿ ಮುಳುಗಿಹೋದ ಬ್ಯಾಂಕ್‌ಗಳೆಷ್ಟೋ? ಅದಕ್ಕೂ ಮೊದಲು ಜಪಾನ್‌ನಲ್ಲಿ ಮೋಸ ಮಾಡಿ ನಾಪತ್ತೆಯಾದ ಬೃಹತ್ ಬ್ಯಾಂಕ್‌ಗಳೆಷ್ಟೋ? ಒಂದು ಬೃಹತ್ ಬ್ಯಾಂಕ್ ಹಗರಣದಲ್ಲಿ ಸಿಕ್ಕಿ ಮುಳುಗಿ ಹೋದರೆ ದೇಶವೇ ಮುಳುಗಿದಂತೆ. ಹೀಗಾಗಿ, ವಿಲೀನಕ್ಕೂ ಒಂದು ಮಿತಿ ಇರಿಸಿಕೊಂಡರೆ ಅನುಕೂಲ.
ಒಂದೆರಡು ದೊಡ್ಡ ಬ್ಯಾಂಕ್‌ಗಳ ಬದಲು ಹಲವು ಸ್ಥಳೀಯ ಮಧ್ಯಮ/ ಸಣ್ಣ ಬ್ಯಾಂಕುಗಳನ್ನು ಹೊಂದುವುದು ಉತ್ತಮ. ನಮ್ಮ ದೇಶದಲ್ಲಿ ಎಲ್ಲರಿಗೂ ಸಲ್ಲುವಂಥ ವ್ಯವಸ್ಥೆ ಅನಿವಾರ್ಯ. ಗ್ರಾಮೀಣ, ಕೃಷಿ ಸಂಬಂಧಿ, ಸಣ್ಣ ಹೂಡಿಕೆದಾರರು, ನೌಕರ ವರ್ಗದ ಹಿತದೃಷ್ಟಿಯಿಂದ ಸ್ಥಳೀಯ ಸಣ್ಣ ಬ್ಯಾಂಕುಗಳು ಇರಬೇಕು. ಆದರೆ, ಜಾಗತಿಕ ಮಟ್ಟದ ಬ್ಯಾಂಕುಗಳು ಈ ವರ್ಗವನ್ನು ನಿರ್ಲಕ್ಷಿಸುತ್ತವೆ.
ಅನುಕೂಲಗಳು
- ಗಾತ್ರದಿಂದ ಬರುವಂಥ ಕ್ಷಮತೆ, ಗಾತ್ರದಿಂದ ದೊಡ್ಡದಾದಾಗ ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚುತ್ತದೆ.
- ದೇಶದಲ್ಲಿ ಮೂಲಭೂತ ಅಭಿವೃದ್ಧಿಗೆ ಬೇಕಾದ ಮೊತ್ತವನ್ನು ಸಾಲದ ರೂಪದಲ್ಲಿ ನೀಡುವ ಸಾಮರ್ಥ್ಯ ಬರುತ್ತದೆ.
- ನಷ್ಟದಿಂದ ಸೊರಗಿದ ಬ್ಯಾಂಕುಗಳಿಗೆ ಜೀವದಾನ ಸಿಗುತ್ತದೆ.
- ಜನರ ಅಗತ್ಯಕ್ಕೆ ತಕ್ಕಂತೆ ಹೊಸ ಶಾಖೆಗಳನ್ನು ಆರಂಭಿಸಬಹುದು.
- ಎಲ್ಲ ಪ್ರದೇಶಗಳ ಮಾರುಕಟ್ಟೆ ಪ್ರವೇಶಿಸುವ ಶಕ್ತಿ ಬರುತ್ತದೆ.
- ಅನಾನುಕೂಲಗಳು
- ಸಣ್ಣ ಹೂಡಿಕೆದಾರರನ್ನು, ಕೃಷಿಕರನ್ನು ಕಡೆಗಣಿಸುವ ಸಾಧ್ಯತೆ.
- ಶಾಖೆಗಳ ಮರುಸ್ಥಾಪನೆ ಮತ್ತು ಕಾರ್ಯಗಳ ಪರಿಷ್ಕರಣೆಯಿಂದ ಕೆಲ ಉದ್ಯೋಗ/ ಹುದ್ದೆಗಳು ರದ್ದಾಗಬಹುದು.
- ದೊಡ್ಡ ಬ್ಯಾಂಕುಗಳಲ್ಲಿ ಹಗರಣ ನಡೆದರೆ ಅದರಿಂದ ದೇಶದ ಹಣಕಾಸು ವ್ಯವಸ್ಥೆಗೆ ಧಕ್ಕೆ ಬಂದೀತು.
- ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ ಲಿ.
- ಎಸ್‌ಬಿಐ ಫಂಡ್ ಮ್ಯಾನೇಜ್‌ಮೆಂಟ್ ಪ್ರೈ.ಲಿ.
- ಎಸ್‌ಬಿಐ ಫ್ಯಾಕ್ಟರ್ಸ್ ಆ್ಯಂಡ್ ಕಮರ್ಷಿಯಲ್ ಸರ್ವಿಸಸ್ ಪ್ರೈ.ಲಿ.
- ಎಸ್‌ಬಿಐ ಕಾರ್ಡ್ಸ್ ಆ್ಯಂಡ್ ಪೇಮೆಂಟ್ ಪ್ರೈ.ಲಿ.
- ಎಸ್‌ಬಿಐ ಡಿಎಫ್‌ಎಚ್‌ಐ ಲಿ.
- ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಕಂಪನಿ ಲಿ.
- ಎಸ್‌ಬಿಐ ಜನರಲ್ ಇನ್ಸೂರೆನ್ಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


