ಒಂದು ಮತ್ತಿನ ಕಥೆ
ಭಾರತದ ವೈನ್ ಉದ್ದಿಮೆಯಲ್ಲಿ ನಮ್ಮ ರಾಜ್ಯದ್ದೂ ಪ್ರಮುಖ ಭಾಗೀದಾರಿಕೆ ಇದೆ. ದೇಶದ ಒಟ್ಟು ಉತ್ಪಾದನೆ ಪೈಕಿ...

ಭಾರತದ ವೈನ್ ಉದ್ದಿಮೆಯಲ್ಲಿ ನಮ್ಮ ರಾಜ್ಯದ್ದೂ ಪ್ರಮುಖ ಭಾಗೀದಾರಿಕೆ ಇದೆ. ದೇಶದ ಒಟ್ಟು ಉತ್ಪಾದನೆ ಪೈಕಿ ವಾರ್ಷಿಕವಾಗಿ 60 ಲಕ್ಷ ಲೀಟರ್ ದ್ರಾಕ್ಷಾರಸ ಕರ್ನಾಟಕದ್ದು...
ದ್ರಾಕ್ಷಾರಸ ಅಥವಾ ವೈನ್ ಇಂದು ಎಲ್ಲೆಡೆ ಜನಪ್ರಿಯ. ಭಾರತದ ವೈನ್ ಉದ್ದಿಮೆಯಲ್ಲಿ ನಮ್ಮ ರಾಜ್ಯದ್ದೂ ಪ್ರಮುಖ ಭಾಗೀದಾರಿಕೆ ಇದೆ. ದೇಶದ ಒಟ್ಟು ಉತ್ಪಾದನೆ ಪೈಕಿ ವಾರ್ಷಿಕವಾಗಿ 60 ಲಕ್ಷ ಲೀಟರ್ ದ್ರಾಕ್ಷಾರಸ ಕರ್ನಾಟಕದ್ದು. ಅಂದಹಾಗೆ, ದೇಶದಲ್ಲಿ ಉತ್ಪಾದನೆಯಾಗುವ ವೈನ್ 1.5 ಕೋಟಿ ಲೀಟರ್!
ವೈನ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದರಿಂದಾಗಿ ದ್ರಾಕ್ಷಿ ಬೆಳೆಗಾರರಿಗೂ ಅನುಕೂಲವಾಗಿದೆ. ದ್ರಾಕ್ಷಿ ಬೆಳೆಗಾರರ ಜತೆಗೂಡಿ ವೈನ್ ಉದ್ದಿಮೆಯಲ್ಲಿ ಹೊಸತನ ಸಾಧಿಸುವ ತುಡಿತ ಕರ್ನಾಟಕ ದ್ರಾಕ್ಷಾರಸ ಮಂಡಳಿಯದ್ದು. ದೇಶದಲ್ಲಿ ಇದರ ಬಳಕೆ ಪ್ರಮಾಣ ಪ್ರತಿ ವರ್ಷ ಶೇ.25-ಶೇ.30ರಷ್ಟು ಹೆಚ್ಚುತ್ತಿದೆ. ಮಾತ್ರವಲ್ಲ 4 ಸಾವಿರ ಮಂದಿ ನೇರವಾಗಿ ಮತ್ತು ಪರೋಕ್ಷವಾಗಿ ಈ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಈ ಕ್ಷೇತ್ರದ ಮೇಲೆ ಹೂಡಿಕೆಯಾಗಿರುವ ಮೊತ್ತ ರು. 100 ಕೋಟಿ.
ವೈನ್ ಉತ್ಸವ
ರಾಜ್ಯದಲ್ಲಿ ದ್ರಾಕ್ಷಾರಸ ಸೇವನೆಯನ್ನು ಜನಪ್ರಿಯಗೊಳಿಸಲು ಮಂಡಳಿ ಹಲವು ಯೋಜನೆ ರೂಪಿಸಿದೆ. ಈ ಪೈಕಿ ವೈನ್ ಮೇಳ ಆಯೋಜನೆಯೂ ಸೇರಿದೆ. ಇತ್ತೀಚೆಗೆ ಮಂಡಳಿ ಮೈಸೂರಿನಲ್ಲಿ ಆಯೋಜಿಸಿದ್ದ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಮುಂದಿನ ದಿನಗಳಲ್ಲಿ ಮಂಗಳೂರು, ಬೆಳಗಾವಿಗಳಲ್ಲಿ ವೈನ್ ಉತ್ಸವ ಹಾಗೂ ಆಹಾರ ಮೇಳ ಆಯೋಜಿಸಲಿದೆ. ನ.24 ಮತ್ತು 25ರಂದು ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿವಿ ಆಯೋಜಿಸಲಿರುವ 'ತೋಟಗಾರಿಕೆ ಮೇಳ'ದಲ್ಲೂ ಮಂಡಳಿ ವೈನ್ ಜನಪ್ರಿಯಗೊಳಿಸಲು ಸ್ಟಾಲ್‌ಗಳನ್ನು ಹಾಕಲಿದೆ. ಈ ವರ್ಷದ ಡಿಸೆಂಬರ್ ಅಥವಾ 2014ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಮಂಡಳಿ ವೈನ್ ಮೇಳ/ ಆಹಾರೋತ್ಸವ ಆಯೋಜಿಸಲಿದೆ.
ರಾಜ್ಯದಲ್ಲಿ ಪರಿಸ್ಥಿತಿ
2007ರಲ್ಲಿ ದ್ರಾಕ್ಷಾರಸ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ದ್ರಾಕ್ಷಿ ಬೆಳೆಯುವ ಪ್ರದೇಶಗಳೂ ಹೆಚ್ಚಾಗಿವೆ. ಆರಂಭದಲ್ಲಿ ಕೇವಲ 500 ಹೆಕ್ಟೇರ್ ಇದ್ದದ್ದು ಈಗ 9,700 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ ಎನ್ನುತ್ತಾರೆ ರಾಜ್ಯ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಕೃಷ್ಣ.
ಮೂರು ಪ್ರದೇಶಗಳು
ರಾಜ್ಯದಲ್ಲಿ ದ್ರಾಕ್ಷಿ ಬೆಳೆಯುವ ಪ್ರದೇಶಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಕೃಷ್ಣಾ, ನಂದಿ ಮತ್ತು ಕಾವೇರಿ ಕಣಿವೆ. ಕೃಷ್ಣಾ ಕಣಿವೆಯಲ್ಲಿ ಬಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬೆಳಗಾವಿ, ರಾಯಚೂರು ಮತ್ತು ಬೀದರ್; ನಂದಿ ಕಣಿವೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು; ಕಾವೇರಿ ಕಣಿವೆಯಲ್ಲಿ ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಬರುತ್ತವೆ. ದೇಶದಲ್ಲಿ ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದ ಆಯ್ದ ಭಾಗಗಳಲ್ಲಿ ವೈನ್ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತದೆ.
ಆರೋಗ್ಯ ಲಾಭ
ವೈನ್ ಕ್ಯಾನ್ಸರ್, ಹೃದಯ, ಡಯಾಬಿಟಿಸ್ ಬಾರದಂತೆ ತಡೆಯುತ್ತದೆ.
ಅಲ್ಜೈಮರ್, ಪಾರ್ಕಿನ್‌ಸನ್‌ಗಳಿಂದ ರಕ್ಷಿಸುತ್ತದೆ.
ಊಟದ ಜತೆ ಸೇವಿಸಿದಾಗ ಪಚನಕ್ರಿಯೆ ಉತ್ತಮಗೊಳ್ಳುತ್ತದೆ.
ವೈನ್ ಬೋಟಿಕ್ ಮತ್ತು ಟಾಮರಿಂಡ್
ರಾಜ್ಯದಲ್ಲಿ ವೈನ್ ಮಾರಾಟ ಹೆಚ್ಚಿಸಲು ಮಂಡಳಿ ವೈನ್ ಬೋಟಿಕ್ ಮತ್ತು ಟಾಮರಿಂಡ್ ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ಮುಂದಾಗಿದೆ. ಬೆಂಗಳೂರು ಒಂದರಲ್ಲೇ 39 ವೈನ್ ಬೋಟಿಕ್‌ಗಳು ಇವೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ವೈನ್ ಟಾಮರಿಂಡ್‌ಗಳಿವೆ. ಹಾಪ್‌ಕಾಮ್ಸ್‌ಗಳಲ್ಲೂ ವೈನ್ ಬೋಟಿಕ್‌ಗಳನ್ನು ತೆರೆಯಲು ಮಂಡಳಿ ಮುಂದಾಗಿದೆ.
2007ರಲ್ಲಿ ರಾಜ್ಯದಲ್ಲಿ ದ್ರಾಕ್ಷಾರಸ ಮಂಡಳಿ ಸ್ಥಾಪನೆಯಾಯಿತು. ಇದರ ನಂತರ ದ್ರಾಕ್ಷಿ ಬೆಳೆಯುವ ಜಾಗದ ಪ್ರಮಾಣ ಹೆಚ್ಚಿದೆ. ವೈನ್ ಅನ್ನು ಜನಪ್ರಿಯಗೊಳಿಸಲು ಮಂಡಳಿ ಆಹಾರ ಮೇಳ, ವೈನ್ ಉತ್ಸವಗಳನ್ನು ಆಯೋಜಿಸುತ್ತಿದೆ. ಇತ್ತೀಚೆಗೆ ಮೈಸೂರಲ್ಲಿ ಆಯೋಜಿಸಲಾಗಿದ್ದ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
- ಡಾ.ಬಿ. ಕೃಷ್ಣ, ರಾಜ್ಯ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ
ವೈನ್ ಉದ್ದಿಮೆ ಘಟಕಗಳು
ಕರ್ನಾಟಕ 13
ಮಹಾರಾಷ್ಟ್ರ80
ದೇಶದಲ್ಲಿ 100
- 9 ಮಿಲಿ ಲೀಟರ್ ದೇಶದಲ್ಲಿ ಪ್ರತಿ ತಲೆಗೆ ವೈನ್ ಸೇವನೆ
- 9700 ರಾಜ್ಯದ ಇಷ್ಟು ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ.
- 45 000ವೈನ್ ಉದ್ದಿಮೆಯಲ್ಲಿ ನಿರತ ಭಾರತೀಯರ ಸಂಖ್ಯೆ
- 1.5 ಕೋಟಿ ಲೀಟರ್ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವೈನ್
- 200 ಕೋಟಿ ವೈನ್ ಕ್ಷೇತ್ರದಲ್ಲಿ ಮಾಡಲಾಗಿರುವ ಹೂಡಿಕೆ (ದೇಶಾದ್ಯಂತ)
- 500 ಕೋಟಿ ಕಳೆದ ಹಣ ಕಾಸು ವರ್ಷದಲ್ಲಿ ವೈನ್ ಉದ್ದಿಮೆಗೆ ಆದ ನೇರ ಲಾಭ
- 1000 ಕೋಟಿ ಪರೋಕ್ಷ ಲಾಭ
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


