ನೈಟ್ ಫೀಲ್ಡ್ ನೆರವು

ಡೀಸೆಲ್ ಎಂಜಿನ್‌ಗಳು, ಪಂಪ್‌ಸೆಟ್‌ಗಳು ಮತ್ತು ಜನರೇಟರ್‌ಗಳ ಉತ್ಪಾದನೆ ಮತ್ತು ಅವುಗಳ ವಹಿವಾಟನ್ನು ತ್ವರಿತಗತಿಯಲ್ಲಿ ಉತ್ತೇಜಿಸಲು ಮತ್ತು ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಲು ನೈಟ್ ಫೀಲ್ಡ್ ಎಂಜಿನ್ಸ್ ಪ್ರೈ. ಲಿ. ಎಂಬ ನೂತನ ಕಂಪನಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಕೃಷಿ ಮತ್ತು ತೋಟಗಾರಿಕೆ ಆರೈಕೆ ಉಪಕರಣಗಳ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಅನ್ನಪೂರ್ಣ ಗ್ರೂಪ್ಸ್‌ನ ಮತ್ತೊಂದು ವಹಿವಾಟು ಕಂಪನಿ ಇದಾಗಿದೆ.
ಮುಂಬರುವ ಅವಧಿಯಲ್ಲಿ ಭಾರತೀಯ ಕೃಷಿ ಚಟುವಟಿಕೆಗಳ ಜತೆಗೆ ಕೈಗಾರಿಕೆ ಮತ್ತು ವಿವಿಧ ಉದ್ಯಮಗಳಿಗೆ, ನೇರವಾಗಿ ಉಪಯೋಗವಾಗುವ ಡೀಸೆಲ್ ಚಾಲಿತ ವೈವಿಧ್ಯಮಯ ಯಂತ್ರಗಳ ಪೂರೈಕೆ ಮಾಡಲು ನೈಟ್ ಫೀಲ್ಡ್ ಇಂಜೀನ್ಸ್ ಪ್ರೈ. ಲಿ. ಕಂಪನಿ ನೆರವಾಗಲಿದೆ. ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯ ಬಳಿ ನೈಟ್ ಫೀಲ್ಡ್ ಎಂಜಿನ್ಸ್ ಕಂಪನಿ ವಿಧ್ಯುಕ್ತವಾಗಿ ಪ್ರಾರಂಭವಾಗಿದೆ ಎಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಎಸ್.ಎ. ಚಂದ್ರಮೋಹನ್ ತಿಳಿಸಿದ್ದಾರೆ.
ಅನ್ನಪೂರ್ಣ ಗ್ರೂಪ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎ. ವಾಸುದೇವಮೂರ್ತಿ ಅವರು ನೈಟ್ ಫೀಲ್ಡ್ ಎಂಜಿನ್ಸ್ ಕಂಪನಿಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನೈಟ್ ಫೀಲ್ಡ್ ಇಂಜೀನ್ಸ್ ಕಂಪನಿಯ ಉತ್ಪನ್ನಗಳ ಶೋರೂಂ ಮತ್ತು ವಿವಿಧ ಉತ್ಪನ್ನಗಳನ್ನು ಅವರು ಅನಾವರಣಗೊಳಿಸಿದರು.
ಬೆಳೆಗಳಿಗೆ ನೀರುಣಿಸಲು, ಜಲ ನಿರ್ವಹಣೆ, ಸ್ಪ್ರಿಂಕ್ಲರ್, ಹನಿ ನೀರಾವರಿ, ಹೈನುಗಾರಿಕೆ, ವನಾಭಿವೃದ್ಧಿ, ಕಟ್ಟಡ ನಿರ್ಮಾಣ, ಮೀನುಗಾರಿಕೆ, ಎತ್ತರ ಪ್ರದೇಶ ಮತ್ತು ಬಾವಿಗಳಿಂದ ನೀರೆತ್ತಲು ಮುಂತಾದ ಚಟುವಟಿಕೆಗಳನ್ನು ಚುರುಕುಗೊಳಿಸಲು ನೈಟ್ ಫೀಲ್ಡ್ ಎಂಜಿನ್‌ಗಳು ಮತ್ತು ಪಂಪ್‌ಸೆಟ್‌ಗಳು ಸಹಾಯ ಮಾಡಲಿವೆ. ಇದಲ್ಲದೆ, ಜನರೇಟರ್‌ಗಳನ್ನು ತಯಾರಿಸಿ ಪೂರೈಸುತ್ತಲೂ ಕೂಡಾ ನೈಟ್ ಫೀಲ್ಡ್ ಎಂಜಿನ್ಸ್ ಕಂಪನಿ ಮುಂದಾಗಲಿದೆ.
ನೈಟ್ ಫೀಲ್ಡ್ ಎಂಜಿನ್ಸ್ ತನ್ನ ಮಾರುಕಟ್ಟೆಯನ್ನು ದೇಶದಾದ್ಯಂತ ತಲುಪಲು ತನ್ನದೇ ಆದ ಮಾರಾಟ ವಿತರಣಾ ಜಾಲವನ್ನು ರೂಪಿಸಲಿದೆ. ಅಲ್ಲದೇ, ಅಗ್ರಿಮಾರ್ಟ್ ಕೃಷಿಯಂತ್ರ ಮಳಿಗೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿರುವ 126 ಅಗ್ರಿಮಾರ್ಟ್ ಮಳಿಗೆಗಳಲ್ಲಿ ನೈಟ್ ಫೀಲ್ಡ್ ಡಿಸೈಲ್ ಎಂಜಿನ್‌ಗಳು ಲಭ್ಯವಾಗಲಿವೆ ಎಂದು ಕಂಪನಿಯ ಮಾರಾಟ ನಿರ್ದೇಶಕ ಎಸ್.ಸಿ. ಅರುಣ್ ತಿಳಿಸಿದ್ದಾರೆ.
ಮಾಹಿತಿಗೆ ದೂ. 080- 26985206 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


