ವಾಣಿಜ್ಯ

ಬಾಡಿಕ್ರಾಫ್ಟ್ ಶಾಪ್ ಶುರು

Published On :

ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಕ್ರಾಫ್ಟ್‌ನ ವೈಭವೋಪೇತ ಮಳಿಗೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್‌ಗಳಾದ ವೈಡಾಲ್, ಸಸೂನ್, ಸೆಬಾಸ್ಟಿಯನ್ ಪ್ರೊಫೆಷನಲ್ ಮತ್ತು ಎಸ್‌ಪಿ ಅಲ್ಖೆಮಿಗಳ ಸಹಯೋಗದಲ್ಲಿ ವೈಭವೋಪೇತ ಕೇಶ ಶೃಂಗಾರ ಸಾಧನಗಳನ್ನು ಒದಗಿಸುತ್ತದೆ. ವಿವರಕ್ಕೆ ಢಿಢಿಢಿ.ಛ್ಟಿಜಣ್ಛ್ಠಛಜಿಡಿಡಛಟ್ಟಟಿ.್ಛ್ಟಟಗೆ ಲಾಗ್ ಇನ್ ಆಗಿ.

ವಿದ್ಯುತ್ ಉಳಿತಾಯದ ಎಸಿ
ವೋಲ್ಟಾಸ್ ಇತ್ತೀಚೆಗೆ ಹೊಸ ಮಾದರಿಯ ಎಸಿ ವ್ಯವಸ್ಥೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದು ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತದೆ ಎನ್ನುವುದು ಕಂಪನಿಯ ಹೇಳಿಕೆ. 'ವೇರಿಯೆಬಲ್ ರೆಫ್ರೀಜರೆಂಟ್ ಫೋ' ವ್ಯವಸ್ಥೆಯನ್ನು ಅದು ಹೊಂದಿದೆ. ಬೆಂಗಳೂರಿನಲ್ಲಿ ಮಂತ್ರಿ ರಿಯಲ್ ಎಸ್ಟೇಟ್ ಸಂಸ್ಥೆ ನಿರ್ಮಿಸುತ್ತಿರುವ ಮಂತ್ರಿ ಪಿನಾಕಲ್ ವಸತಿ ಸಂಕೀರ್ಣದಲ್ಲಿ ಅದನ್ನು ಬಳಸಲಾಗುತ್ತಿದೆ.

ಕ್ಯಾಂಪಸ್ ನೇಮಕ ಸಕ್ಸಸ್
ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆ ಪ್ರಸಕ್ತ ಸಾಲಿನ ಎರಡನೇ ಕ್ಯಾಂಪಸ್ ಉದ್ಯೋಗ ನೇಮಕ ಪ್ರಕ್ರಿಯೆ ಕೈಗೊಂಡಿತ್ತು. ಒಟ್ಟು 624 ವಿದ್ಯಾರ್ಥಿಗಳಿಗೆ ಇದರಿಂದಾಗಿ ಉದ್ಯೋಗ ದೊರಕಿತು. 103 ಸಂದರ್ಶನ ತಂಡಗಳುಳ್ಳ 58 ಕಂಪನಿಗಳು ಭಾಗವಹಿಸಿದ್ದವು. ಮಾಹಿತಿ ತಂತ್ರಜ್ಞಾನ, ಹಣಕಾಸು, ಸೇವಾ ಸಂಸ್ಥೆಗಳು, ಇಂಧನ, ಬ್ಯಾಂಕಿಂಗ್ ಕ್ಷೇತ್ರಗಳು ಪ್ರಮುಖವಾಗಿದ್ದವು.

ಶೇ.20 ಹೂಡಿಕೆಗೆ ಅವಕಾಶ
ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎ), ಜೀವ ಮತ್ತು ಸಾಮಾನ್ಯ ವಿಮಾ ಕಂಪನಿಗಳು ತಮ್ಮ ಆದಾಯದ ಶೇ.20ರಷ್ಟು ಮೊತ್ತವನ್ನು ಫಂಡ್ ವ್ಯಾಲ್ಯು ಮತ್ತು ಮೂಲಸೌಕರ್ಯ ಸಾಲದ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಿದೆ. ಈ ಹಿಂದೆ ವಿಮಾ ಕಂಪನಿಗಳು ಕೇವಲ ಶೇ.10ರಷ್ಟು ಸೀಲಿಂಗ್ ಇರುವ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆಗೆ ಅವಕಾಶವಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.