ಮಹಾ ಬಚತ್

ದೇಶದಲ್ಲಿ ಪ್ರತಿ ಕುಟುಂಬವೂ ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ 'ವಿತ್ತೀಯ ಸೇರ್ಪಡೆ' ಎನ್ನುವ ಘೋಷಣೆ ಮಾಡಿದೆ. ಅದರ ಪ್ರಕಾರ 2005ರ ನವೆಂಬರ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಲ್ಲಿ 'ಝೀರೋ ಬ್ಯಾಲೆನ್ಸ್' ಅಥವಾ ಸಣ್ಣಮೊತ್ತದ ಠೇವಣಿಯೊಂದಿಗೆ ಖಾತೆ ಆರಂಭಿಸಲು ಸೂಚನೆ ನೀಡಿತ್ತು. ಈಗ ಅದರಲ್ಲೂ ಗೊಂದಲಗಳನ್ನು ನಿವಾರಿಸಲು ಆರ್‌ಬಿಐ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಏಕರೂಪದ ಖಾತೆ ಆರಂಭಿಸಲು ಅನುವಾಗುವಂತೆ 2012ರ ಏಪ್ರಿಲ್‌ನಲ್ಲಿ 'ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್' ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಾತ್ರವಲ್ಲದೆ ಈಗ ಜಾರಿಯಲ್ಲಿರುವ ಸರಳ ಉಳಿತಾಯ ಯೋಜ ನೆಯೂ (ನೋ ಫ್ರಿಲ್ ಎಸ್‌ಬಿ ಖಾತೆ) ಹೊಸ ಯೋಜನೆಯ ಖಾತೆಯಾಗಿ ಬದಲಾವಣೆಯಾಗಲಿದೆ.
ಲಾಭವೇನು?
- ಈ ಖಾತೆಯನ್ನು ಹೊಂದಿದವರಿಗೆ ಉಳಿದ ಖಾತೆದಾರರಿಗೆ ಇರುವ ಸಾಮಾನ್ಯ ಬ್ಯಾಂಕಿಂಗ್ ಸೇವೆ ಲಭ್ಯ. ಈ ಖಾತೆಯಲ್ಲಿ ಇಂತಿಷ್ಟೇ ಶಿಲ್ಕು ಇರಬೇಕೆಂಬ ನಿಬಂಧನೆಯಿಲ್ಲ. ಖಾತೆ ಆರಂಭಿಸುವಾಗ ಹಣ ಜಮೆ ಮಾಡಬೇಕಾಗಿಲ್ಲ.
- ಉಳಿದ ಖಾತೆಗಳಿಗೆ ಇರುವಂತೆ ಇದಕ್ಕೂ ಸಹ ಹಣ ಜಮೆ ಮಾಡಬಹುದು ಹಾಗೂ ಹಿಂಪಡೆಯಬಹುದು. ಎಟಿಎಂ ಸೌಲಭ್ಯವನ್ನೂ ಹೊಂದಬಹುದು. ಚೆಕ್ ಕಲೆಕ್ಷನ್ ಮಾಡಿಸಿಕೊಳ್ಳಬಹುದು. ಈ ಖಾತೆಗೆ ತಿಂಗಳೊಂದಕ್ಕೆ ಎಷ್ಟು ಬಾರಿಯಾದರೂ ಹಣ ಜಮಾ ಮಾಡಬಹುದು. ಆದರೆ ತಿಂಗಳೊಂದಕ್ಕೆ ನಾಲ್ಕು ಬಾರಿ ಮಾತ್ರ ಈ ಖಾತೆಯಿಂದ ಹಣ ಹಿಂಪಡೆಯಬಹುದು.
- ಎಟಿಎಂ ಸೌಲಭ್ಯ ಹೊಂದಿರುವವರು ಮಾತ್ರ ಅದರಲ್ಲಿ ಹಣ ಹಿಂಪಡೆದರೂ ಎಲ್ಲವೂ ಸೇರಿ ನಾಲ್ಕು ಬಾರಿ ಮಾತ್ರ ಅವಕಾಶ. ಈ ಖಾತೆಯನ್ನು ಹೊಂದಿದವರು ಇದರ ಹೊರತಾಗಿ ಬ್ಯಾಂಕ್‌ನಲ್ಲಿ ಬೇರೊಂದು ಉಳಿತಾಯ ಖಾತೆ ಹೊಂದುವಂತಿಲ್ಲ. ಒಂದೊಮ್ಮೆ ಆ ರೀತಿ ಖಾತೆಯಿದ್ದರೆ 30 ದಿನಗಳ ಒಳಗೆ ಅದನ್ನು ರದ್ದುಪಡಿಸಿಕೊಳ್ಳಬೇಕು. ಈ ಉಳಿತಾಯ ಖಾತೆ ಹೊಂದಿರುವವರು ಇದರ ಹೊರತಾಗಿ ಫಿಕ್ಸೆಡ್ ಡೆಪಾಸಿಟ್, ಆರ್.ಡಿ.ಖಾತೆ ಮತ್ತು ಇತರ ಖಾತೆಗಳನ್ನು ತೆರೆಯಲು ಅವಕಾಶವಿದೆ.
- ಈಗಿರುವ ಜೀರೋ ಬ್ಯಾಲೆನ್ಸ್, ನೋ ಫ್ರಿಲ್ ಖಾತೆಗಳನ್ನು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್‌ಗಳಾಗಿ ಬ್ಯಾಂಕ್‌ಗಳು ಪರಿವರ್ತಿಸುತ್ತವೆ.
- ಒಬ್ಬ ವ್ಯಕ್ತಿ ಒಂದು ಬ್ಯಾಂಕ್‌ನಲ್ಲಿ ಒಂದಕ್ಕಿಂತ ಹೆಚ್ಚು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆ ತೆರೆಯುವಂತಿಲ್ಲ. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್‌ಗಳನ್ನು ಆರ್ಥಿಕವಾಗಿ ಹಿಂದುಳಿದವರು, ದುರ್ಬಲರು ಮಾತ್ರ ತೆರೆಯಬಹುದು ಎಂಬ ಯಾವ ನಿಬಂಧನೆಯೂ ಇಲ್ಲ. ಹೀಗಾಗಿ ಯಾರು ಬೇಕಾದರೂ ಖಾತೆ ತೆರೆಯಬಹುದಾಗಿದೆ.
- ಉಳಿದ ಖಾತೆಗಳನ್ನು ತೆರೆಯುವಾಗ 'ನೋ ಯುವರ್ ಕಸ್ಟಮರ್' (ಕೆವೈಸಿ) ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಆದರೆ ಆ ರೀತಿ ದಾಖಲೆಗಳನ್ನು ನೀಡಲು ಅಸಮರ್ಥರಾದವರೂ ಸಹ, ಇದರಲ್ಲಿ ಸಣ್ಣ ಖಾತೆ ಆರಂಭಿಸಲು ಅವಕಾಶ ಉಂಟು. ಅದಕ್ಕೆ ನರೇಗ ಯೋಜನೆಗೆ ನೀಡುವ ಜಾಬ್ ಕಾರ್ಡ್ ಅಥವಾ ಆಧಾರ ಕಾರ್ಡ್ ನೀಡಿದರೆ ಸಾಕು.
- ಹಣಕಾಸು ವರ್ಷವೊಂದರಲ್ಲಿ ಖಾತೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮೊತ್ತ ಜಮಾ ಮಾಡುವಂತಿಲ್ಲ.
- ಒಂದು ತಿಂಗಳಿಗೆ ಎಲ್ಲ ಬಗೆಯಿಂದ ಒಟ್ಟು 10 ಸಾವಿರಕ್ಕಿಂತ ಹೆಚ್ಚು ಹಣ ಹಿಂಪಡೆಯುವಂತಿಲ್ಲ.
- ಯಾವುದೇ ಸಮಯದಲ್ಲಿ ಈ ಖಾತೆಯಲ್ಲಿ ರು. 50 ಸಾವಿರಕ್ಕಿಂತ ಹೆಚ್ಚು ಹಣ ಇರಿಸುವಂತಿಲ್ಲ.
- ವಿದೇಶಗಳಿಂದ ಬಂದ ಹಣವನ್ನು ಈ ಖಾತೆಗೆ ನೇರವಾಗಿ ಜಮಾ ಮಾಡುವಂತಿಲ್ಲ.
- ಎಟಿಎಂ ಕಾರ್ಡ್‌ಗೆ ಬ್ಯಾಂಕ್ ವಾರ್ಷಿಕ ಶುಲ್ಕವನ್ನೂ ಸೇರಿ ಯಾವುದೇ ಶುಲ್ಕ ಪಡೆಯುವಂತಿಲ್ಲ.
- ಎಟಿಎಂ ಕಾರ್ಡ್ ಮೂಲಕ ಬ್ಯಾಲೆನ್ಸ್ ವಿವರಣೆ ಪಡೆಯಬಹುದು. ಅದು ನಾಲ್ಕು ಬಾರಿ ಹಣ ಹಿಂಪಡೆಯುವ ಅವಕಾಶದ ಪರಿಗಣನೆಗೆ ಸೇರುವುದಿಲ್ಲ.
- ಈ ಖಾತೆಗಳಿಗೆ ಚೆಕ್ ಪುಸ್ತಕದ ಸೌಲಭ್ಯವಿಲ್ಲ. ಬ್ಯಾಂಕ್ ಉಚಿತವಾಗಿ ಚೆಕ್ ಪುಸ್ತಕವನ್ನು ಈ ಖಾತೆಗಳಿಗೆ ನೀಡಬಹುದು. ಅದು ಕಡ್ಡಾಯವಲ್ಲ. ಅದಕ್ಕಾಗಿ ಶುಲ್ಕ ಪಡೆದರೆ ಆಗ ಆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್ ಯೋಜನೆಯಿಂದ ಹೊರಬರುತ್ತದೆ.
- ಉಳಿದ ಉಳಿತಾಯ ಯೋಜನೆಗಳಿಗಿರುವಂತೆ ಇದಕ್ಕೂ ಅದೇ ದರದಲ್ಲಿ ಬಡ್ಡಿ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


