ಸೆಲ್‌ಫೋನ್ ದರ ಹೆಚ್ಚುವ ಸಂಭವ

ದೇಶದಲ್ಲಿನ ಪ್ರಮುಖ ಸೆಲ್‌ಫೋನ್ ಕಂಪನಿಗಳ ಮೇಲೆ, ಕರೆಗಳ ದರ ಏರಿಕೆ ಅನಿವಾರ್ಯವೆನ್ನುವ ರೀತಿಯಲ್ಲಿ ಒತ್ತಡ ಬೀಳುತ್ತಿದೆ. ಇದೇನೂ ರಾಜಕೀಯ ಒತ್ತಡವಲ್ಲ. ಲಾಭ-ನಷ್ಟದ ವ್ಯಾವಹಾರಿಕ ಒತ್ತಡ.
ರಿಲೈಯನ್ಸ್ ಕಂಪೆನಿ ಈಗ ಕರೆದರಗಳನ್ನು ಏರಿಸದೇ ಹೋದರೂ, ಇದುವರೆಗೆ ವಿನಾಯಿತಿಗಳನ್ನು ರದ್ದುಪಡಿಸುವ ಚಿಂತನೆಯನ್ನು ಪ್ರಕಟಿಸಿದೆ.
ರಿಲೈಯನ್ಸ್ ಕಂಪೆನಿ ಈಗ ಕರೆದರಗಳನ್ನು ಏರಿಸದೇ ಹೋದರೂ, ಇದುವರೆಗೆ ಅದು ಕೊಡುತ್ತಿದ್ದ ಸೋಡಿ, ರಿಯಾಯಿತಿ- ವಿನಾಯಿತಿಗಳನ್ನು ರದ್ದುಪಡಿಸುವ ಚಿಂತನೆಯನ್ನು ಪ್ರಕಟಿಸಿದೆ. ರಿಲೈಯನ್ಸ್ ಕಳೆದ ವರ್ಷದಲ್ಲೇ ಇಂಥ ಕ್ರಮ ಕೈಗೊಂಡಾಗ, ಗ್ರಾಹಕರು ದೂರಿದರೂ ಕಂಪನಿಯನ್ನು ಬಿಟ್ಟು ಹೋಗಲಿಲ್ಲ. ಆಗ ವ್ಯವಹಾರದ ಪ್ರಮಾಣ ಬೀಳಲಿಲ್ಲ. ಈಗ ರಿಲೈಯನ್ಸ್ ಒಂದೇ ಅಲ್ಲ, ಹೆಚ್ಚೂಕಡಿಮೆ ಎಲ್ಲ ಕಂಪನಿಗಳೂ ದರಗಳನ್ನು ಏರಿಸುವ ಅಗತ್ಯವಿದೆ ಎಂದು ಭಾವಿಸಿದ್ದರೂ ಯಾರೂ ಆ ವಿಚಾರದಲ್ಲಿ ಪ್ರಕಟಣೆ ನೀಡಿಲ್ಲ. ಅವರು ಮೊದಲು ಮಾಡಲಿ ಎಂದು ಇವರು, ಇವರೇ ಮೊದಲ ಮಾತು ಹೇಳಲಿ ಎಂದು ಅವರು ಕಾಯುತ್ತಿರುವಂತಿದೆ. ಇಂಥ ವ್ಯವಹಾರ ಬಹುಕಾಲ ಹೀಗೇ ಮುಂದುವರಿಯುವುದು ಸಾಧ್ಯವಿಲ್ಲ. ದರಗಳ ಏರಿಕೆಯಂತೂ ಖಚಿತ. ಶೇ.20-30ರಷ್ಟು ಹೆಚ್ಚಾಗಬಹುದೆಂಬುದು ಪಂಡಿತರ ಲೆಕ್ಕಾಚಾರ. ಅದಕ್ಕಿಂತ ಹೆಚ್ಚಿನ ವಿವರಗಳು ಸಿಕ್ಕಿಲ್ಲ, ಆರ್‌ಕಾಮ್ ಕಂಪನಿಗೇ ಹನ್ನೊಂದು ಕೋಟಿ ಗ್ರಾಹಕರಿದ್ದಾರಂತೆ.
ಆರ್‌ಬಿಐ- ಇನ್‌ಪ್ಲೇಷನ್
ಕಳೆದವಾರ ರಿಸರ್ವ್ ಬ್ಯಾಂಕಿನ ವರ್ಷದ ಮೊದಲ ತ್ರೈಮಾಸಿಕ ಅವಧಿಯ ಹಣ ನೀತಿ ಪ್ರಕಟವಾಯಿತು. ರಿಸರ್ವ್ ಬ್ಯಾಂಕಿನ ಮುಂದೆ ಇದ್ದ ಪ್ರಶ್ನೆ ಹಣದ ಅತಿಪ್ರಸರಣದ ವೇಗ ಕಡಿಮೆಯಾಗದೇ ಬ್ಯಾಂಕ್ ಬಡ್ಡಿದರ ಇಳಿತ ಸಾಧ್ಯವಿಲ್ಲವೇ? ಎನ್ನುವುದೇ.
ಈಗ ಹಲವಾರು ಕಾರಣಗಳಿಂದ ಹಣದ ಅತಿಪ್ರಸರಣದ ವೇಗ ಸ್ವಲ್ಪ ಕಡಿಮೆಯಾಗಿದೆ. ಬಡ್ಡಿ ದರವನ್ನು ತುಂಬಾ ಇಳಿಸುವ ಪರಿಸ್ಥಿತಿಯಲ್ಲಿ ಬ್ಯಾಂಕ್ ಇಲ್ಲ. ಆದರೂ ಪರೋಕ್ಷವಾಗಿ ಸರ್ಕಾರ, ಉದ್ಯಮ ರಂಗದ ಒತ್ತಡಕ್ಕೆ ಮಣಿದು, ಪ್ರಗತಿಯ ಹೆಚ್ಚಳದ ಉದ್ದೇಶದಿಂದ ಬಡ್ಡಿ ದರವನ್ನು ಶೇ.0.25 ರಷ್ಟು ಇಳಿಸಲಾಗಿದೆ. ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕಿನಲ್ಲಿ ಇಡಲೇಬೇಕಾದ ಕನಿಷ್ಠ ಠೇವಣಿಯ ಪ್ರಮಾಣವನ್ನು ಇಳಿಸಿದ್ದರಿಂದ ಪೇಟೆಯಲ್ಲಿ ಸುಮಾರು 18000 ಕೋಟಿ ರು. ಅಧಿಕ ಹಣದ ಬಿಡುಗಡೆ ಆದಂತೆ ಆಯಿತು. ಈ ಬೆಳವಣಿಗೆಯಿಂದಲೇ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದು ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕ 2000ರ ಗಡಿಯನ್ನು ಮುಟ್ಟಿತ್ತು. ಆದರೆ ಈ ಆಶಾವಾದದ ಬುನಾದಿ ಏನು? ಯಾರಿಗೂ ಗೊತ್ತಿಲ್ಲ, ರಿಸರ್ವ್ ಬ್ಯಾಂಕ್ ಬಡ್ಡಿದರ ಇಳಿಸಬೇಕು, ಆದರೆ ಬಂಡವಾಳ ಹೂಡಿಕೆಗೆ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕೆಲಸ. ಸರ್ಕಾರ ಯಾವ ಸೂಚನೆಯನ್ನೂ ನೀಡಿಲ್ಲ.
ಕೊನೆ ಮಾತು
ಸರ್ಕಾರ ಆಂತರಿಕ ಬಂಡವಾಳ ಹೂಡಿಕೆಗಿಂತ, ವಿದೇಶಿ ಬಂಡವಾಳವನ್ನು ಆಕರ್ಷಿಸಲು ಹೆಚ್ಚು ಉತ್ಸಾಹದಿಂದಿರುವಂತಿದೆ.
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


