ಹಯತ್ ಪ್ಯಾಲೇಸ್

ಬೇಸಿಗೆ ಮುಕ್ತಾಯವಾಗುತ್ತಿದೆ, ಮಕ್ಕಳಿಗೂ ಶಾಲಾಕಾಲೇಜು ಆರಂಭವಾಗುತ್ತಿದೆ, ಇನ್ನು ವಿಧಾನಸಭಾ ಚುನಾವಣೆ ಈ ವರ್ಷದಲ್ಲಿ ಬಂದ ಕಾರಣ ನೌಕರರು ಪ್ರವಾಸದ ಅನುಭವದಿಂದ ದೂರವಾಗಬೇಕಾದ ಸ್ಥಿತಿ ಎದುರಾಗಿ ಸ್ವಲ್ಪ ಬೇಜಾರಾಗಿದೆ ಅಲ್ಲವೆ? ಹಾಗಾದರೆ, ತಾಳಿ...
ವಿಶ್ವವಿಖ್ಯಾತ ಹಂಪಿಯನ್ನು ನೀವು ನಿಮ್ಮ ಮಕ್ಕಳಿಗೆ ತೋರಿಸಲೇಬೇಕು. ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಸಾರುವ ಹಂಪಿ ಒಂದು ದಿನದಲ್ಲಿ ನೋಡಿ ಮುಗಿಸುವ ತಾಣವಲ್ಲ. ಇಲ್ಲಿ ತಂಗಲು ಉತ್ತಮ ವ್ಯವಸ್ಥೆ ಇಲ್ಲವಲ್ಲ ಎಂದು ಕೊರಗುವ ಪ್ರವಾಸಿಗರಿಗೆ ವರದಾನವೆಂಬಂತೆ ನಿರ್ಮಿಸಲಾಗಿದೆ 'ಹಯತ್ ಪ್ಲೇಸ್ ಹಂಪಿ' ಹೋಟೆಲ್ ಬಳಗ.
ಹಂಪಿಯಿಂದ ಕೇವಲ 27 ಕಿ.ಮೀ. ದೂರದಲ್ಲಿರುವ ತೋರಣಗಲ್ ಸಮೀಪದಲ್ಲಿ 'ಹಯತ್ ಪ್ಲೇಸ್ ಹಂಪಿ' ಹೋಟೆಲ್ ನಿರ್ಮಿಸಲಾಗಿದೆ. ವಿಶಾಲವಾದ ಜಾಗದಲ್ಲಿ ಅತ್ಯುತ್ತಮ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಇದು ರೆಸಾರ್ಟ್ ಮಾದರಿಯಲ್ಲಿದೆ. ಇಲ್ಲಿಂದ ಹಂಪಿ ಮಾತ್ರವಲ್ಲ, ಬಾದಾಮಿ ಐಹೊಳೆ ಮತ್ತು ಪಟ್ಟದಕಲ್ಲು ಮುಂತಾದ ಪ್ರವಾಸಿ ತಾಣಗಳನ್ನು ಸುಲಭವಾಗಿ ಸೇರಬಹುದು.
ಕೈಗೆಟಕುವ ದರದಲ್ಲಿ ಹೋಟೆಲ್ ರೂಂ ಗಳಿದ್ದು, ಅತ್ಯಾಧುನಿಕ ಜಿಮ್, ಈಜುಕೊಳ ಮುಂತಾದ ಆಧುನಿಕ ಸೌಲಭ್ಯಗಳು ಇಲ್ಲಿವೆ. ಊಟವೂ ಫಸ್ಟ್‌ಕ್ಲಾಸ್. ದೇಶದ ಯಾವುದೇ ಮೂಲೆಯ ಅಡುಗೆ ರುಚಿಯನ್ನು ಬೇಕಾದರೂ ಇಲ್ಲಿ ಕೆಲವೇ ಕ್ಷಣಗಳಲ್ಲಿ ಸವಿಯಬಹುದು. ಪ್ರವಾಸಿ ತಾಣಗಳಿಗೆ ಹೋಗಿಬರಲು ವಾಹನ ವ್ಯವಸ್ಥೆ ಇಲ್ಲದವರಿಗೂ ಸಮಸ್ಯೆ ಇಲ್ಲ. ಅದನ್ನು ಹೋಟೆಲ್‌ನವರೇ ವ್ಯವಸ್ಥೆ ಮಾಡಿಕೊಟ್ಟು ಸುಲಭ ದರ ಪಡೆಯುತ್ತಾರೆ.
ಜೊತೆಗೆ ಪ್ರವಾಸಿ ತಾಣಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲು ಅಗತ್ಯವಿರುವ ಗೈಡ್‌ನ ವ್ಯವಸ್ಥೆಯನ್ನು ಹೋಟೆಲ್‌ನವರೇ ಮಾಡುತ್ತಾರೆ. ಆದರೆ ಅದಕ್ಕೆ ಹಣ ಪಾವತಿಸಬೇಕಾಗುತ್ತದೆ. ಎಲ್ಲದಕ್ಕೂ ಹಣ ನೀಡಬೇಕು, ಹಾಗಾದರೆ ಇದು ತುಂಬಾ ದುಬಾರಿಯೇನೋ ಎಂದು ಭಾವಿಸುವ ಅಗತ್ಯವಿಲ್ಲ. ಎಲ್ಲ ಸೌಲಭ್ಯಗಳಿರುವ ಕೊಠಡಿಗೆ ದಿನಕ್ಕೆ 4,500 ರುಪಾಯಿ ಮಾತ್ರ. ಇದರಲ್ಲೇ ತಿಂಡಿ, ಕಾಫಿ ಉಚಿತ. ಊಟ ಮತ್ತು ಡ್ರಿಂಕ್ಸ್‌ಗೆ ಪ್ರತ್ಯೇಕ ಬಿಲ್ ಅಷ್ಟೆ.
ಅತ್ಯಾಧುನಿಕ ಮಾದರಿಯ ಕಿಚನ್, ಡೈನಿಂಗ್ ಹಾಲ್, ಬಾರ್ ಸೌಲಭ್ಯಗಳು ಇಲ್ಲಿ ಲಭ್ಯವಿರುವುದರ ಜೊತೆಗೆ ವಿಶಾಲದ ಕೋಣೆ, ಪ್ರತಿ ಕೋಣೆಯಲ್ಲಿ 40 ಇಂಚು ಎಲ್‌ಇಡಿ ಟಿವಿ ಸೌಲಭವಿದೆ. ಬೆಳಗಿನಿಂದ ಸಂಜೆಯ ವರೆಗೆ ಪ್ರವಾಸಿ ತಾಣಗಳ ವೀಕ್ಷಣೆ, ರಾತ್ರಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲು ಉತ್ತಮ ವ್ಯವಸ್ಥೆಯಿದೆ. ದೇಶದ ಪ್ರಮುಖ ನಗರಗಳಲ್ಲಿ 'ಹಯತ್ ಪ್ಲೇಸ್ ಹಂಪಿ' ಹೋಟೆಲ್‌ಗಳಿವೆ. ಹಂಪಿ ಸಮೀಪದಲ್ಲಿಯೂ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ಹೋಟೆಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ hyattplace.com ಸಂಪರ್ಕಿಸಬಹುದು.
-ಅಶ್ವತ್ಥನಾರಾಯಣ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


