ಕಾರ್ಪ್ ಬ್ಯಾಂಕ್ 1,234.67 ಕೋಟಿ ನಿವ್ವಳ ಲಾಭ
ಕಾರ್ಪೊರೇಷನ್ ಬ್ಯಾಂಕ್ 2012-13ನೇ ಸಾಲಿನಲ್ಲಿ 1,234.67 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಹೇಳಿದ್ದಾರೆ.
ಕ.ಪ್ರ.ವಾರ್ತೆ ಮಂಗಳೂರು ಮೇ 9
ಕಾರ್ಪೊರೇಷನ್ ಬ್ಯಾಂಕ್ 2012-13ನೇ ಸಾಲಿನಲ್ಲಿ 1,234.67 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಹೇಳಿದ್ದಾರೆ.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 4ನೇ ತ್ರೈಮಾಸಿಕ ಮತ್ತು ವಾರ್ಷಿಕ ಫಲಿತಾಂಶ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಾ.31ಕ್ಕೆ 3,037 ಕೋಟಿ ನಿರ್ವಹಣಾ ಲಾಭ ಗಳಿಸಿದೆ. ಕಳೆದ ವರ್ಷಕ್ಕಿಂತ 181.03 ಕೋಟಿ ಅಧಿಕ ಲಾಭ ಗಳಿಸಿದಂತಾಗಿದೆ. ಬ್ಯಾಂಕಿನ ಒಟ್ಟು ವ್ಯವಹಾರ 2,84,722 ಕೋಟಿಗೆ ಏರಿಕೆಯಾಗಿದ್ದು, ಶೇ.20.33 ಪ್ರಗತಿ ದಾಖಲಿಸಿದೆ. ಒಟ್ಟು ವ್ಯವಹಾರದಲ್ಲಿ 48,111 ಕೋಟಿ ಹೆಚ್ಚಳವಾಗಿದ್ದು, ಠೇವಣಿ 1,66,005 ಏರಿಕೆಯಾಗಿದ್ದು ಶೇ.21.94 ಪ್ರಗತಿ ಸಾಧಿಸಿದೆ.
ಕಳೆದ ಸಾಲಿನಲ್ಲಿ ಒಟ್ಟು ವ್ಯವಹಾರ 1,36,142. ಮುಂಗಡ 1,18,717 ಆಗಿದ್ದು, ಶೇ.18.16 ಪ್ರಗತಿ ಸಾಧನೆಯಾಗಿದೆ. 2012 ಮಾರ್ಚ್ 31ಕ್ಕೆ ಮುಂಗಡ 1,00,469 ಆಗಿದೆ. ಬಡ್ಡಿ ಆದಾಯ ಕಳೆದ ಸಾಲಿಗೆ ಹೋಲಿಸಿದರೆ 2,316.30 ಕೋಟಿ ಹೆಚ್ಚಳವಾಗಿ ಶೇ.17.79 ಪ್ರಗತಿ ಕಂಡಿದೆ. ಕಳೆದ ಸಾಲಿನಲ್ಲಿ 13,017 ಕೋಟಿ ಆದಾಯ ಗಳಿಸಿದ್ದರೆ ಈ ಸಾಲಿನಲ್ಲಿ ಇದು 15,334.08 ಕೋಟಿಗೆ ಏರಿಕೆಯಾಗಿದೆ.
ತಲಾ ಶಾಖಾ ವ್ಯವಹಾರ 166.80 ಕೋಟಿ ಮತ್ತು ತಲಾ ಸಿಬ್ಬಂದಿ ವ್ಯವಹಾರ 19.21 ಕೋಟಿಗೆ ಹೆಚ್ಚಳವಾಗಿದೆ.
ಬ್ಯಾಂಕಿನ ಶಾಖೆಗಳ ಸಂಖ್ಯೆ 1707 ಆಗಿದ್ದು, ಎಟಿಎಂ ಸಂಖ್ಯೆ 1425ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ 3545 ಶಾಖಾ ರಹಿತ ಬ್ಯಾಂಕ್ಗಳಿದ್ದು, ಕಳೆದ ಸಾಲಿನಲ್ಲಿ 207 ಶಾಖೆಗಳನ್ನು ಶುರು ಮಾಡಲಾಗಿದೆ. ಮೊನ್ನೆ ಮಾರ್ಚ್ ಅಂತ್ಯಕ್ಕೆ 4ನೇ ತ್ರೈಮಾಸಿಕದಲ್ಲಿ 355.53 ಕೋಟಿ ನಿವ್ವಳ ಲಾಭ ಪಡೆದಿದ್ದು, ಇದೇ ಅವಧಿಯಲ್ಲಿ ಕಳೆದ ಬಾರಿ 351.26 ಕೋಟಿ ಲಾಭ ಗಳಿಸಿತ್ತು. ಪ್ರಸ್ತುತ ಸಾಲಿನಲ್ಲಿ 54 ಶಾಖೆಗಳನ್ನು ಶುರು ಮಾಡಿದ್ದು, ಇಂಡಿಯನ್ ಬೆಸ್ಟ್ ಬ್ಯಾಂಕ್ ಅವಾರ್ಡ್, ಗ್ರೇಟೆಸ್ಟ್ ಕಾರ್ಪರೇಟ್ ಲೀಡರ್ಸ್ ಅವಾರ್ಡ್ ದಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

