ಸೌತ್ ಇಂಡಿಯನ್ ಬ್ಯಾಂಕ್‌ಗೆ 502.27 ಕೋಟಿ ನಿವ್ವಳ ಆದಾಯ
ಸೌತ್ ಇಂಡಿಯನ್ ಬ್ಯಾಂಕ್ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 502.27 ಕೋಟಿ ನಿವ್ವಳ ಆದಾಯ ಗಳಿಸಿದ್ದು, ಈ ಸಾಲಿನಲ್ಲಿ ಶೇ.25.05 ಪ್ರಗತಿ ಕಂಡಿದೆ.
ಬೆಂಗಳೂರು: ಸೌತ್ ಇಂಡಿಯನ್ ಬ್ಯಾಂಕ್ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 502.27 ಕೋಟಿ ನಿವ್ವಳ ಆದಾಯ ಗಳಿಸಿದ್ದು, ಈ ಸಾಲಿನಲ್ಲಿ ಶೇ.25.05 ಪ್ರಗತಿ ಕಂಡಿದೆ.
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎ. ಜೋಸೆಫ್ ಅವರು ನಗರದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 401.65 ಕೋಟಿ ಲಾಭ ಗಳಿಸಿದ್ದು, ಈ ಬಾರಿ ಶೇ.25.05 ಪ್ರಗತಿ ಕಾಣುವ ಮೂಲಕ 502.27 ಕೋಟಿ ಆದಾಯ ಗಳಿಸಿದೆ. ಅಲ್ಲದೆ ಈ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ 153.83 ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿನ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಆದಾಯ 121.95 ಕೋಟಿ ಇದ್ದುದು ಈ ಬಾರಿ ಶೇ.26.13 ಹೆಚ್ಚಳ ಕಂಡಿದೆ. ಅಲ್ಲದೆ ಈ ಬಾರಿ ಗ್ರಾಹಕರಿಗೆ ಕಳೆದ ಬಾರಿಗಿಂತ 10 ಪೈಸೆ ಅಧಿಕ ಅಂದರೆ 70 ಪೈಸೆ ಲಾಭಾಂಶ ನೀಡಲಾಗಿದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.24.51 ಅಭಿವೃದ್ಧಿ ಕಂಡು 4,769.22 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಬ್ಯಾಂಕ್ 3,830.5 ಕೋಟಿ ಒಟ್ಟಾರೆ ಆದಾಯ ಕಂಡಿತ್ತು. ಅಲ್ಲದೆ ಪ್ರತಿ ಷೇರು ಆದಾಯ ಕಳೆದ ಬಾರಿ 3.55 ಇದ್ದಿದ್ದು, ಈ ಬಾರಿ 4.03 ತಲುಪಿದೆ ಎಂದು ಅವರು ತಿಳಿಸಿದರು. ಅಲ್ಲದೆ ಬ್ಯಾಂಕ್ ವಿಷನ್ ಡಾಕ್ಯುಮೆಂಟ್- 2008ರ ಪ್ರಕಾರ ತನ್ನ ಗುರಿ ತಲುಪಿದ್ದು, 75,000 ಕೋಟಿ ವಹಿವಾಟು, 750 ಶಾಖೆ ಹಾಗೂ 800 ಎಟಿಎಂ ಕೇಂದ್ರಗಳನ್ನು ಹೊಂದಿದೆ. ಬ್ಯಾಂಕ್ 2013- 14ನೇ ಆರ್ಥಿಕ ವರ್ಷಾಂತ್ಯಕ್ಕೆ 92,000 ಕೋಟಿ ವಹಿವಾಟು ನಡೆಸಲುದ್ದೇಶಿಸಿದ್ದು, 50 ಹೊಸ ಶಾಖೆ ಹಾಗೂ 200 ಹೊಸ ಎಟಿಎಂ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

