ಕೆನರಾ ಬ್ಯಾಂಕ್‌ಗೆ 2872 ಕೋಟಿ ನಿವ್ವಳ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2012- 13 ಮೇ ಸಾಲಿನ ವಾರ್ಷಿಕ ವರದಿ ಪ್ರಕಟಿಸಿದೆ.
ಕ.ಪ್ರ. ವಾರ್ತೆ ಬೆಂಗಳೂರು ಮೇ 2-
ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2012- 13 ಮೇ ಸಾಲಿನ ವಾರ್ಷಿಕ ವರದಿ ಪ್ರಕಟಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 2872 ಕೋಟಿ ನಿವ್ವಳ ಲಾಭಗಳಿಸಿರುವ ಬ್ಯಾಂಕ್, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆರ್ಥಿಕ ವರ್ಷದ ಲಾಭಾಂಶ 231 ಕೋಟಿ ಕಡಿಮೆಯಾಗಿದೆ. ಆದರೆ ಕೊನೆಯ ತ್ರೈಮಾಸಿಕದಲ್ಲಿ ಸ್ವಲ್ಪ ಚೇತರಿಕೆಯಾಗಿದ್ದು, ಲಾಭವು 725 ಕೋಟಿಗೆ ಏರಿದೆ ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಆರ್.ಕೆ. ದುಬೆ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.
ಬ್ಯಾಂಕಿನ ಒಟ್ಟು ಠೇವಣಿಯು 3.55 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಕಳೆದ ಆರ್ಥಿಕ ವರ್ಷಕ್ಕಿಂತ ಠೇವಣಿಯಲ್ಲಿ ಶೇ.9.8ರಷ್ಟು ಅಧಿಕ ಸಂಗ್ರಹವಾಗಿದೆ. ವಾರ್ಷಿಕ ಲಾಭದಲ್ಲಿ ಇಳಿಕೆಯಾಗಿದ್ದರೂ ಶೇ.130ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 569 ಕೋಟಿ ಮೀಸಲಿರಿಸಲಾಗಿದೆ. ಬ್ಯಾಂಕಿನ ಷೇರುದಾರರ ಹಿತ ಕಾಪಾಡುವ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗೆ 50 ಲಕ್ಷ ನೂತನ ಗ್ರಾಹಕರು ಸೇರಿಕೆಯಾಗಿದ್ದಾರೆ. ಇದರೊಂದಿಗೆ ಬ್ಯಾಂಕ್‌ನ ಒಟ್ಟು ಗ್ರಾಹಕರ ಸಂಖ್ಯೆ 4.70 ಕೋಟಿಗೆ ಏರಿದೆ. ಇದರಲ್ಲಿ 4.17 ಠೇವಣಿ ಖಾತೆ ಹಾಗೂ 53 ಲಕ್ಷ ಸಾಲದ ಖಾತೆಗಳಿವೆ. 202- 13ನೇ ಆರ್ಥಿಕ ವರ್ಷದಲ್ಲಿ 4006 ಕೋಟಿ ಸಾಲ ಮರುಪಾವತಿಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಸಕ್ತ ವರ್ಷ 128 ನೂತನ ಶಾಖೆ ಹಾಗೂ 668 ಎಟಿಎಂ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ಎರಡು ಆರ್ಥಿಕ ವರ್ಷದೊಳಗೆ ಇದನ್ನು ಕ್ರಮವಾಗಿ 5 ಸಾವಿರ ಹಾಗೂ 10 ಸಾವಿರಕ್ಕೆ ಏರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಮತ್ತೊಂದೆಡೆ ಒಟ್ಟು ವ್ಯವಹಾರವನ್ನು 7 ಲಕ್ಷ ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ ಎಂದು ದುಬೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

