ವಾಣಿಜ್ಯ

ಮೊಬೈಲ್ ಬ್ಯಾಂಕಿಂಗ್

ಅತ್ಯಂತ ಕಡಿಮೆ ಸಮಯ, ವೆಚ್ಚ ಹಾಗೂ ಒತ್ತಡವಿಲ್ಲದೆ ದೈನಂದಿನ ಬ್ಯಾಂಕಿಂಗ್ ವ್ಯವಹಾರವನ್ನು ಕುಳಿತಲ್ಲಿಯೇ...

ಮೊಬೈಲ್ ಬ್ಯಾಂಕಿಂಗ್
Published On :

ಅತ್ಯಂತ ಕಡಿಮೆ ಸಮಯ, ವೆಚ್ಚ ಹಾಗೂ ಒತ್ತಡವಿಲ್ಲದೆ ದೈನಂದಿನ ಬ್ಯಾಂಕಿಂಗ್ ವ್ಯವಹಾರವನ್ನು ಕುಳಿತಲ್ಲಿಯೇ ನಿರ್ವಹಿಸಲು ಕಂಡುಕೊಂಡಿರುವ ಉತ್ತಮ ಮಾರ್ಗ ಮೊಬೈಲ್ ಬ್ಯಾಂಕಿಂಗ್. ಇದು ಬ್ಯಾಂಕಿಂಗ್ ವಲಯದಲ್ಲಿ ತೀವ್ರಗತಿಯಲ್ಲಿ ದಾಪುಗಾಲು ಹಾಕುತ್ತಿದೆ. ಆದರೆ, ಇನ್ನೂ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಹಾರದಷ್ಟು ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಆರ್‌ಬಿಐ ಹೇಳಿರುವ ಅಂಕಿ-ಅಂಶಗಳ ಪ್ರಕಾರ, 2012ರ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಮೊಬೈಲ್ ಟ್ರ್ಯಾನ್‌ಸ್ಯಾಕ್ಷನ್ (ವ್ಯವಹಾರ) ಶೇ.64ಕ್ಕೆ ಏರಿಕೆಯಾಗಿದೆ. ಡೆಲೋಯಿಟ್- ಅಸೋಚಾಮ್ ಅಧ್ಯಯನ ವರದಿ ಪ್ರಕಾರ, 2011ರ ಒಟ್ಟಾರೆ ಬ್ಯಾಂಕಿಂಗ್ ನಿರ್ವಹಣೆಯಲ್ಲಿ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಹಾರವೇ ಶೇ.67ರಷ್ಟಾಗಿದೆ. ಆದ್ದರಿಂದ ಮೊಬೈಲ್ ಬ್ಯಾಂಕಿಂಗ್ ಕ್ಷೇತ್ರ ಕ್ಷಿಪ್ರಗತಿಯ ಬೆಳವಣಿಗೆ ಕಂಡಿಲ್ಲ.
ಏನು ಕಾರಣ?
ಒಟ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಮೊಬೈಲ್ ಬ್ಯಾಂಕಿಂಗ್ ಶೇ.100 ಪ್ರಗತಿ ಕಾಣದಿರಲು ಪ್ರಮುಖ ಕಾರಣ ಮೊಬೈಲ್ ನೆಟ್‌ವರ್ಕ್‌ನ ಅತ್ಯಂತ ನಿಧಾನಗತಿ. ಅಲ್ಲದೆ ತಂತ್ರಜ್ಞಾನದಲ್ಲಿ ದೇಶ ಎಷ್ಟೇ ಪ್ರಗತಿ ಹೊಂದಿದ್ದರೂ ಇಂದಿಗೂ ಹಲವರು ಸಾಮಾನ್ಯ, ಸ್ಮಾರ್ಟ್‌ಫೋನ್ ಬಳಸುತ್ತಿರುವುದು ಹಾಗೂ ಬ್ಯಾಂಕ್‌ಗಳ ವಿವಿಧ ಪ್ರಕ್ರಿಯೆ ಗ್ರಾಹಕರಿಗೆ ಅಷ್ಟೊಂದು ಸುಲಭವಾಗಿಲ್ಲ.
ಅಲ್ಲದೆ, ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಪ್ರೊಟೋಕಾಲ್ ನೆಟ್‌ವರ್ಕ್ ನಿಧಾನವಾಗಿರುವುದರಿಂದ ಪ್ರಕ್ರಿಯೆಯಲ್ಲಿ ತೊಂದರೆಯಾಗುತ್ತಿದೆ. ಕೆಲವೇಳೆ ಇದ್ದಕ್ಕಿದ್ದಂತೆ ಅಂತರ್ಜಾಲ ಸೇವೆ ಕಡಿತಗೊಳ್ಳುವುದು, ಇಲ್ಲವೆ ಬ್ಯಾಂಕಿಂಗ್ ಸರ್ವರ್ ಕ್ಷೀಣಿಸುವಿಕೆಯಿಂದ ಪ್ರಕ್ರಿಯೆ ನಿಂತುಹೋಗಿ ಬಳಕೆದಾರ ಗಲಿಬಿಲಿಗೊಳ್ಳುತ್ತಿದ್ದಾನೆ. ಇದರಿಂದ ಮೊಬೈಲ್ ಬ್ಯಾಂಕಿಂಗ್ ವ್ಯವಹಾರವೇ ಬೇಡ ಎಂಬ ನಿರ್ಧಾರಕ್ಕೆ ಬರುವುದೂ ಉಂಟು.
ಮೊಬೈಲ್ ಬ್ಯಾಂಕಿಂಗ್‌ನಲ್ಲೇನಿದೆ?
ಇದು ಎಸ್‌ಎಂಎಸ್ ಮೂಲಕ ಮತ್ತು ಸೆಲ್‌ಫೋನ್ ಅಥವಾ ಆ್ಯಪ್ಸ್‌ನಲ್ಲಿ ಇಂಟರ್‌ನೆಟ್ ಬ್ರೌಸ್ ಮಾಡಿ ಬ್ಯಾಂಕಿಂಗ್ ವ್ಯವಹಾರ ನಿರ್ವಹಿಸಬೇಕಾಗುತ್ತದೆ. ಗ್ರಾಹಕರಿಗೆ ಬ್ಯಾಂಕ್‌ಗಳು ಪ್ರತ್ಯೇಕ ಕೋಡ್ ನಂಬರ್ ನೀಡುತ್ತವೆ. ಅದಕ್ಕೆಂದೇ ಕರಾರುವಕ್ಕಾಗಿರುವ ಗೌಪ್ಯ ನಂಬರ್ ನೀಡುತ್ತದೆ. ಅದರ ಮೂಲಕ ನಿಮ್ಮ ಬ್ಯಾಂಕಿಂಗ್ ವ್ಯವಹಾರ ಮಾಡಬೇಕು. ಅಂತರ್‌ಬ್ಯಾಂಕ್‌ಗಳ ಖಾತೆಗೆ ಹಣ ವರ್ಗಾವಣೆ, ಸ್ಟೇಟ್‌ಮೆಂಟ್ ಪಡೆಯುವಿಕೆ, ಮೊಬೈಲ್ ಟಾಪ್-ಅಪ್ಸ್, ಏರ್ ಟಿಕೆಟ್, ಸಿನಿಮಾ, ರೇಲ್ವೆ ಮತ್ತು ಬಸ್ ಟಿಕೆಟ್ ಬುಕ್ಕಿಂಗ್ ಅಲ್ಲದೆ ಸೆಲ್‌ಫೋನ್, ಟೆಲಿಫೋನ್, ಕ್ರೆಡಿಟ್ ಕಾರ್ಡ್ ಮತ್ತು ಎಲೆಕ್ಟ್ರಿಸಿಟಿ ಬಿಲ್ ಕೂಡ ಪಾವತಿಸಬಹುದು.
ನಿರೀಕ್ಷೆ ಏನು?
ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಸಂಘದ ಪ್ರಕಾರ, ದೇಶದಲ್ಲಿ 2012ರ ಡಿಸೆಂಬರ್ ವೇಳೆಗೆ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರ ಸಂಖ್ಯೆ 8.71 ಕೋಟಿ ಇದ್ದು, 2012ರ ಆರ್ಥಿಕ ವರ್ಷ ಮುಗಿಯುವ ವೇಳೆಗೆ 9.10 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ.
ಭಯ ಬೇಡ
ನಿಮ್ಮ ಕಂಪ್ಯೂಟರ್ ಅಥವಾ ಸೆಲ್‌ಫೋನ್‌ನಲ್ಲಿ ಇಂಟರ್‌ನೆಟ್ ಸೌಕರ್ಯವಿದ್ದರೆ ಸಾಕು. ಬ್ಯಾಂಕ್‌ನ ವೆಬ್‌ಸೈಟ್ ಮೂಲಕ ನಿರ್ವಹಣೆ ಮಾಡಬಹುದು. ಪ್ರತಿಯೊಂದು ಅಕೌಂಟ್‌ಗೆ ಪ್ರತ್ಯೇಕ ಕೋಡ್ ಹಾಗೂ ಗೌಪ್ಯ ನಂಬರ್ ಹಾಗೂ ಭದ್ರತೆ ಇರುತ್ತದೆ. ಬೇರೆಯವರು ಅದನ್ನು ಉಪಯೋಗಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಖಾತೆಯನ್ನು ತೆರೆದರೆ ತಕ್ಷಣ ನಿಮ್ಮ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಆಗ ನಿಮ್ಮ ಬ್ಯಾಂಕಿನ ನಿರ್ವಹಣೆಗಾರರಿಗೆ ತಿಳಿಸಿ ಕ್ರಮಕ್ಕೆ ಮುಂದಾಗಬಹುದು. ವ್ಯವಹಾರದ ಪ್ರತಿ ದಾಖಲೆಯೂ ಬ್ಯಾಂಕ್‌ನಲ್ಲಿ ಅಡಕವಾಗಿರುತ್ತದೆ.
ಒಂದು ಸೆಲ್‌ಫೋನ್ ಕಳೆದುಹೋಗಲೂಬಹುದು. ಅದರಲ್ಲಿ ಮೊಬೈಲ್, ಇಂಟರ್‌ನೆಟ್ ಬ್ಯಾಂಕಿಂಗ್ ಅಕೌಂಟ್ ನಂಬರ್ ಹಾಗೂ ಕೋಡ್ ನಂಬರ್ ಇದ್ದರೆ ಅದು ಬೇರೆಯವರಿಗೆ ಸಿಗದಂತೆ ಪಾಸ್‌ವರ್ಡ್ ಕೊಟ್ಟು ಗೌಪ್ಯವಾಗಿಡುವುದು ಒಳಿತು.


ಮೊಬೈಲ್ ಬ್ಯಾಂಕಿಂಗ್ ಪ್ರಗತಿ ನೋಟ
ಟ್ರ್ಯಾನ್‌ಸ್ಯಾಕ್ಷನ್ ಪಟ್ಟಿ(2012ರಲ್ಲಿ)



    ಏಪ್ರಿಲ್    31,78,405
    ಮೇ    03,23,743
    ಜೂನ್    33,47,074
    ಜುಲೈ    7,05,690
    ಆಗಸ್ಟ್    9,68,226
    ಸೆಪ್ಟೆಂಬರ್    38,97,614
    ಅಕ್ಟೋಬರ್    44,37,205
    ನವೆಂಬರ್    47,20,871
    ಡಿಸೆಂಬರ್    52,21,007
ಟ್ರ್ಯಾನ್‌ಸ್ಯಾಕ್ಷನ್ ಹಣ(2012ರಲ್ಲಿ)


ತಿಂಗಳು    ಹಣ(ಕೋಟಿ ಗಳಲ್ಲಿ )    ಸರಾಸರಿ
ಏಪ್ರಿಲ್    234.57    738.00
ಮೇ    286.55    856.19
ಜೂನ್    306.71    892.36
ಜುಲೈ    337.97    912.03
ಆಗಸ್ಟ್    354.86    894.26
ಸೆಪ್ಟೆಂಬರ್    410.45    1,053.09
ಅಕ್ಟೋಬರ್    497.45    1,121.53
ನವೆಂಬರ್    538.95    1,141.64
ಡಿಸೆಂಬರ್    598.14    1,145.64


ವೀರೇಶ ಜಿ. ಮಠ
mathvg@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.