ವಿತ್ತಲೋಕದ ಸುತ್ತಮುತ್ತ
ಡೊಕೊಮೊ 2ಜಿ ಪ್ರಿಪೇಯ್ಡ್ ಹೊಸ ಕೊಡುಗೆ
ಬೆಂಗಳೂರು: ಟಾಟಾ ಟೆಲಿಸರ್ವೀಸಸ್ ಲಿ., ಕಂಪೆನಿಯ ದೂರಸಂಪರ್ಕ ಬ್ರಾಂಡ್ ಸಂಸ್ಥೆ ಟಾಟಾ ಡೊಕೊಮೊ ತನ್ನ 2ಜಿ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದೆ.
'ಕಡಿಮೆ ಹಣ ವೆಚ್ಚ ಮಾಡಿರಿ- ಹೆಚ್ಚು ಸೇವೆ ಪಡೆಯಿರಿ' ಘೋಷಣೆಯೊಂದಿಗೆ ಈ ಹೊಸ ಪ್ರಿಪೇಯ್ಡ್ ಯೋಜನೆ, 2 ಬಗೆಯ 2 ಜಿ ಡೇಟಾ ಸೇವೆಗಳಲ್ಲಿ ಲಭ್ಯವಿದ್ದು, ಏಳು ದಿನಕ್ಕೆ 26 ಮೆಗಾಬೈಟ್‌ವರೆಗೂ ದತ್ತಾಂಶ ಸೇವೆ ಹಾಗೂ 126 ಪಾವತಿಸಿ 30 ದಿನಗಳ ದೀರ್ಘ ಅವಧಿವರೆಗೂ 3 ಗಿಗಾಬೈಟ್ ಡೇಟಾ ಸೌಲಭ್ಯವನ್ನು ಪಡೆಯಬಹುದು.
ಸೇವೆಗಳನ್ನು ಪ್ರಕಟಿಸಿದ ಟಾಟಾ ಡೊಕೊಮೊದ ದಕ್ಷಿಣ ವಲಯದ ಮುಖ್ಯಸ್ಥ ಯತೀಶ್ ಮೆಹ್ರೋತ್ರಾ, ಗ್ರಾಹಕರಿಗೆ ಸದಾಕಾಲ ಸರಳ ಹಾಗೂ ಕಡಿಮೆ ವೆಚ್ಚದ ಯೋಜನೆಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತಿರುತ್ತೇವೆ ಎಂದರು. ಈ ಕೊಡುಗೆ 2013ರ ಮಾ.31ರವರೆಗೂ ಗ್ರಾಹಕರಿಗೆ ಲಭ್ಯವಿದೆ.
'ಇ-ಮಮತಾ'ಗೆ ಗೋಲ್ಡನ್ ಪೀಕಾಕ್ ಹಿರಿಮೆ
'ಇ-ಮಮತಾ' ಕಾರ್ಯಕ್ರಮದ ಕೊಡುಗೆಯನ್ನು ಗುರುತಿಸಿ ಟೆಲಿಕಾಂ ಸೇವೆಯ ಉತ್ಪನ್ನ, ಸೇವೆಯ ವರ್ಗದಲ್ಲಿ ಗೋಲ್ಡನ್ ಪೀಕಾಕ್ ಹಿರಿಮೆಗೆ ಪಾತ್ರವಾಗಿದೆ.
ವೊಡಾಫೋನ್ ಇಂಡಿಯಾದ 'ಇ-ಮಮತಾ', ಗುಜರಾತ್ ಸರ್ಕಾರದ ಸಹಯೋಗದಲ್ಲಿ ತಾಯಿ ಮತ್ತು ಮಗುವಿನ ನೆಲೆ ಗುರುತಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಿಂದಾಗಿ ಈ ರಾಜ್ಯದಲ್ಲಿ ಶಿಶುಹತ್ಯೆ ಪ್ರಮಾಣ 4 ಬೇಸ್ ಪಾಯಿಂಟ್‌ಗಳಷ್ಟು ಇಳಿಮುಖವಾಗಿದ್ದು, ಪಾಯಿಂಟ್‌ಗಳು 48ರಿಂದ 44ಕ್ಕೆ ಇಳಿದಿದೆ. ವೊಡಾಫೋನ್ 42,000 ಸಿಮ್ ಕಾರ್ಡ್‌ಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿದ್ದು, ಇವರು ವೈದ್ಯರು, ಆರೋಗ್ಯ ಸೇವೆ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ಜತೆಗೆ, ನವಜಾತ ಶಿಶುವಿನ ಹೆರಿಗೆ ಸಂದರ್ಭದಲ್ಲಿ ಸಮುದಾಯದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿತು.
ಈ ಬಗ್ಗೆ ಮಾತನಾಡಿದ ವೊಡಾಫೋನ್ ಇಂಡಿಯಾದ ಮುಖ್ಯ ನಿರ್ವಹಣಾಧಿಕಾರಿ ಸುನೀಲ್ ಸೂದ್ ಅವರು ವೊಡಾಫೋನ್ ಸುಸ್ಥಿರ ಕಾರ್ಯಕ್ರಮಗಳಿಗೆ ಒತ್ತು ನೀಡಲಿದ್ದು, ಎಂದಿಗೂ ಅಂತಹ ಕಾರ್ಯಕ್ರಮಗಳನ್ನು ಅನುಸರಿಸಲಿದೆ.
2010ರಲ್ಲಿ 'ಇ-ಮಮತಾ' ಜಾರಿಯಾದ ಮೇಲೆ 15ಕೋಟಿ ನಿಮಿಷಗಳು ಬಳಕೆಯಾಗಿವೆ ಎಂದರು.
ಏಥೋಸ್ ಸ್ವಿಸ್‌ನಿಂದ 4 ಮಹಿಳಾ ವಾಚ್
ಏಥೋಸ್ ಸ್ವಿಸ್ ವಾಚ್ ಸ್ಟುಡಿಯೋಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ 4 ಬಗೆಯ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಲೂಯಿಸ್ ಹೆರರ್ಡ್ ಅಟ್ ಎಥೋಸ್- ಇದು 3 ಡಯಾಮೀಟರ್‌ಗಳನ್ನು ಒಳಗೊಂಡಿದ್ದು, ಸಂಖ್ಯೆಗಳ ಸೂಚಕದಲ್ಲಿ ಎಲಿಗೆಂಟ್ ಡೈಮಂಡ್‌ಗಳನ್ನು ಒಳಗೊಂಡಿದೆ. ಬೆಲೆ.57,800.
ಬಾಮೆ, ಮರ್ಸಿಯರ್ ಅಟ್ ಎಥೋಸ್- ಇದರ ಸುತ್ತಳತೆ 33 ಎಂ.ಎಂ ಇದ್ದು, ಪುರುಷರ ವಾಚ್ ಮಾದರಿಯಲ್ಲೇ 3 ವೃತ್ತಾಕಾರದ ಒಳಾಂಗಣ ಸಂಖ್ಯೆಗಳನ್ನು ಒಳಗೊಂಡಿದೆ. ಬೆಲೆ- 1,69,625.
ಎಡೋಕ್ಸ್- ಡೈಮಂಡ್ ಅರಳುಗಳಿಂದ ಸಂಖ್ಯೆಗಳು ಬಿಂಬವಾಗಿದ್ದು, 34 ಎಂಎಂ ವಿಸ್ತ್ರೀರ್ಣದಲ್ಲಿ ರಬ್ಬರ್ ಬೆಲ್ಟ್ ಹೊಂದಿದೆ. ಬೆಲೆ- ಮಾರುಕಟ್ಟೆ ಆಧಾರದಲ್ಲಿ ಘೋಷಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಲೂಯಿಸ್ ಹೆರರ್ಡ್- 9 ಡೈಮಂಡ್ ಅರಳುಗಳನ್ನು ಹೊಂದಿದೆ. ಕ್ರೋಕೋ ಇಮಿಟೇಷನ್, ಸಾಟಿನ್, ವಾರ್ನಿಷ್ಡ್, ಮೆಟಲ್, ಕ್ರೋಕೋ ಸ್ಟ್ರಾಪ್ ಮತ್ತು ಮೆಕಾನಿಕ್ ಆಗಿ ರೂಪುಗೊಂಡಿದೆ. ಬೆಲೆ- 1,01, 200.
ಡಾ ಮಿಲಾನೋ ಮಳಿಗೆಯಲ್ಲಿ ನೂತನ ಬ್ಯಾಗ್
ಬೆಂಗಳೂರಿನ 1ಎಮ್‌ಜಿ ರೋಡ್ ಮಾಲ್‌ನಲ್ಲಿ ಡಾ ಮಿಲಾನೋ ಮಳಿಗೆಯು ತನ್ನ ಸ್ಪ್ರಿಂಗ್ ಸಮ್ಮರ್ 2013 ಎಂಬ ಹೆಸರಿನಲ್ಲಿ ವಿನೂತನ ಶೈಲಿಯ ಬ್ಯಾಗ್‌ಗಳನ್ನು ಅನಾವರಣಗೊಳಿಸಿದೆ. ಡಾ ಮಿಲಾನೋದ ಈ ಬ್ಯಾಗ್ ಸಂಗ್ರಹಗಳು ತರಹೇವಾರಿ ವರ್ಣಗಳಲ್ಲಿ ಲಭ್ಯವಿದೆ. ವಿಶೇಷ ಲೆದರ್ ಬ್ಯಾಗ್‌ಗಳಲ್ಲಿ ಪ್ಯಾಚ್ ವರ್ಕ್, ರೆಪ್ಟೈಲ್ ಪ್ರಿಟ್ ಮತ್ತು ಟೆಕ್ಚ್ಷರ್ ಬ್ಲಾಕಿಂಗ್‌ಗಳು ಮುಖ್ಯವಾಗಿವೆ. ಈ ಬ್ಯಾಗ್‌ಗಳು ಬಿಳಿ, ಕೋನಿಯಾಕ್, ಕಪ್ಪು, ಕಡು ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
ಈ ಬ್ಯಾಗ್‌ಗಳ ಸರಣಿಯು 9999ರಿಂದ ಆರಂಭವಾಗುತ್ತದೆ. 1ಎಮ್‌ಜಿ ರೋಡ್‌ನ ಡಾ.ಮಿಲಾನೋ ಬೊಟಿಕ್‌ನಲ್ಲಿ ಮಾತ್ರ ಈ ವಿಶೇಷ ಬ್ಯಾಗ್‌ಗಳು ಲಭ್ಯವಿದೆ.
ಟೈಟಾನ್ ಐ ಪ್ಲಸ್ ಹೊಸ ಸನ್‌ಗ್ಲಾಸ್
ದೇಶದ ಕನ್ನಡಕ ವಹಿವಾಟು ಸಂಸ್ಥೆ ಟೈಟಾನ್ ಐ ಪ್ಲಸ್ ಬೇಸಿಗೆಗಾಗಿ ಹೊಸ ಸರಣಿಯ ಸನ್‌ಗ್ಲಾಸ್‌ಗಳನ್ನು ಪರಿಚಯಿಸುತ್ತಿದೆ. ಟೈಟಾನ್ ಐ ಪ್ಲಸ್ ಓಕ್ಲೆ ಸನ್‌ಗ್ಲಾಸ್ ಮತ್ತು ಕನ್ನಡಕದ ಫ್ರೇಂ ಖರೀದಿಸುವ ಮೂಲಕ ಉಚಿತವಾಗಿ 12ಲಕ್ಷ ಮೌಲ್ಯದ ಫೈರ್‌ಬಾಕ್ಸ್ ಬೈಕ್ ಗೆಲ್ಲುವ ಅವಕಾಶ ಪಡೆಯಬಹುದು. ಈ ಕೊಡುಗೆ ಟೈಟಾನ್ ಐ ಪ್ಲಸ್‌ನ 25 ಮಳಿಗೆಯಲ್ಲಿ ಮಾತ್ರ ಲಭ್ಯವಿದೆ. ಇದಲ್ಲದೇ ಮಾ.14ರಿಂದ ಏ.5ರವರೆಗೆ ಗ್ರಾಹಕರು ಓಕ್ಲೆ ಸನ್‌ಗ್ಲಾಸ್ ಕೊಳ್ಳುವ ಮೂಲಕ ಓಕ್ಲೆ ಟೀ ಶರ್ಟ್ ಉಚಿತವಾಗಿ ಪಡೆಯಬಹುದು. ಈ ಕುರಿತು ಪ್ರತಿಕ್ರಿಯಿಸಿದ ಟೈಟಾನ್ ಐವೇರ್ ವಿಭಾಗದ ಸಿಇಓ ರವಿಕಾಂತ್, ಟೈಟಾನ್ ಕನ್ನಡಕಗಳು ಪರಿಪೂರ್ಣ ಶೈಲಿ ಹಾಗೂ ಈಗಿನ ಟ್ರೆಂಡ್‌ಗೆ ತಕ್ಕಂತೆ ನವೀನ ವಿನ್ಯಾಸ ಹೊಂದಿದ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಕನ್ನಡಕಗಳು ಭಾರತದ ಮಾರುಕಟ್ಟೆಗಳಲ್ಲಿ ದೊರೆಯಲಿದೆ. ಬೇಸಿಗೆಗಾಗಿ ಕನ್ನಡಕದ ಉತ್ಪನ್ನಗಳ ಓಕ್ಲೆ ಶ್ರೇಣಿಯ ಖರೀದಿಯ ಮೇಲೆ ಫೈರ್‌ಬಾಕ್ಸ್ ಬೈಕ್ ಉಚಿತವಾಗಿ ಗ್ರಾಹಕರು ಪಡೆಯಬಹುದಾಗಿದೆ ಎಂದರು. ಗ್ರಾಹಕರು ಹೆಚ್ಚಿನ ಮಾಹಿತಿಗೆ: ಡಿಡಿಠ://ಢಿಢಿಢಿ.ಜಿಛ್ಛಜಛ್ಟ್ಟ್ಞಿ.್ಛ್ಟಟ/್ಟಟಜ.ಝಠ!/ಡ್ಝಿಡಿಛಟಿಜಣಜಠಟ್ಡಡ?ಜ್ಠಿಜಜಿಡಿಝಡಿಡಿಠ://ಢಿಢಿಢಿ.ಜಿಛ್ಛಜಛ್ಟ್ಟ್ಞಿ.್ಛ್ಟಟ/್ಟಟಜ.ಝಠ
ತೊಶಿಬಾ 73.6 ಎಲ್‌ಇಡಿ ಹೊಸ ಶ್ರೇಣಿ
ತೊಶಿಬಾ ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ವಿನ್ಯಾಸಪಡಿಸಲಾದ 73.6 ಸೆಂ.ಮೀ ಎಲ್‌ಇಡಿ ಟಿವಿಯ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ತೊಶಿಬಾ ಇಂಡಿಯಾ- ಡಿಎಸ್ ವಿಭಾಗದ ಕಂಟ್ರಿ ಹೆಡ್ ಸಂಜಯ್ ವಾರ್ಕೆ, ವೇಗವಾಗಿ ಮತ್ತು ಭರವಸೆದಾಯಕವಾಗಿ ಬೆಳೆಯುತ್ತಿರುವ ಎಲ್‌ಇಡಿ ಟಿವಿ ಮಾರುಕಟ್ಟೆಗಳ ಪೈಕಿ ಭಾರತ ಪ್ರಮುಖವಾಗಿದೆ. ಇಲ್ಲಿನ ಗ್ರಾಹಕರು ಅಭಿವೃದ್ಧಿಯಾಗುತ್ತಿರುವ ತಮ್ಮ ಜೀವನಶೈಲಿಗೆ ಅನುಗುಣವಾಗಿ ತಾಂತ್ರಿಕವಾಗಿ ಮುಂದುವರಿದ ಉತ್ಪನ್ನಗಳ ಬಗ್ಗೆ ಉತ್ತಮ ಅಭಿರುಚಿ ಹೊಂದಿದ್ದಾರೆ ಎಂದರು. ಈ ಹೊಸ ಸರಣಿಯು ಸಿಆರ್ ಟಿ.ವಿಗಿಂತ ಅತ್ಯಾಧುನಿಕ ಲಕ್ಷಣಗಳಿಂದ ಕೂಡಿರುವುದರ ಜತೆಗೆ ಗುಣಮಟ್ಟ, ಕಾರ್ಯಕ್ಷಮತೆ, ಸ್ಟೈಲ್, ಸೌಂಡ್ ವಿಷಯಗಳಲ್ಲಿ ಶ್ರೇಷ್ಟವಾಗಿದ್ದು, ವಿದ್ಯುಚ್ಛಕ್ತಿ ಉಳಿಸುತ್ತದೆ. 29ಕಿಇ200 ಮತ್ತು 29ಕ್ಖಿ200 ಮಾದರಿಗಳು ಭಾರತದಲ್ಲಿ ಎಲ್ಲಾ ಕಡೆ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 22, 290 ಮತ್ತು 23,990.
ಏರ್‌ಟೆಲ್‌ನಿಂದ ತುರ್ತು ಎಚ್ಚರಿಕೆ ಸೇವೆ
ಭಾರತದ ಪ್ರಮುಖ ಟೆಲಿಕಾಂ ಏರ್‌ಟೆಲ್, ಮಹಿಳೆಯರ ಸುರಕ್ಷತೆ ಅಗತ್ಯಗಳನ್ನು ಪೂರೈಸಲೆಂದೇ ವಿಶಿಷ್ಟವಾದ ಸೇವೆಯೊಂದನ್ನು ಜಾರಿಗೊಳಿಸಿದೆ.
ಏರ್‌ಟೆಲ್ ಎಮರ್ಜೆನ್ಸಿ ಅಲರ್ಟ್ಸ್‌ನ ವಿಶೇಷತೆಯೆಂದರೆ, ಸುಲಭ ಹಾಗೂ ತ್ವರಿತ ನೆರವು ಒದಗಿಸುವಂತಹ ಒಂದು ಕರೆ ಮಾಡುವ ಮೂಲಕ, ಈ ಮೊದಲೇ ಆಯ್ಕೆ ಮಾಡಿರುವ 10 ಮಂದಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ತಾವಿರುವ ಪ್ರದೇಶದ ಮಾಹಿತಿ ಜತೆಗೆ ಎಚ್ಚರಿಕೆ ಸಂದೇಶ ಕಳುಹಿಸಬಹುದು. ಅಲ್ಲದೆ ಗ್ರಾಹಕರು ಮನೆಯಿಂದ ದೂರ ಪ್ರಯಾಣ ಮಾಡುತ್ತಿರುವಾಗ, ನೈಸರ್ಗಿಕ ವಿಕೋಪ ಅಥವಾ ಅಪಾಯ ಸಂಭವಿಸಿದರೆ, ಈ ಮೊದಲೇ ಆಯ್ಕೆ ಮಾಡಿದ 10 ಮಂದಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಸುರಕ್ಷಿತ ಎಸ್‌ಎಂಎಸ್ ಕಳುಹಿಸಬಹುದು. ಅದೂ ಕೇವಲ ಒಂದು ಕ್ಲಿಕ್ ಮೂಲಕ.
ಈ ಸೌಲಭ್ಯ ಪಡೆಯಲು ಬೇಸಿಕ್ ಹ್ಯಾಂಡ್‌ಸೆಟ್ ಇದ್ದರೆ ಸಾಕು. ಗ್ರಾಹಕರು, ಏರ್‌ಟೆಲ್ ಮೊಬೈಲ್‌ನಿಂದ 55100(ದರ ರಹಿತ) ಸಂಖ್ಯೆ ಡಯಲ್ ಮಾಡಿದರೆ ಸಾಕು. ನೀವು ಈ ಮೊದಲೇ ಆಯ್ಕೆ ಮಾಡಿರುವ 10 ಮಂದಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಸ್ವಯಂಚಾಲಿತ ಧ್ವನಿ ಸೇವೆ ಮತ್ತು ಎಸ್‌ಎಂಎಸ್ ಮೂಲಕ ನೀವಿರುವ ಪ್ರದೇಶದ ಮಾಹಿತಿಯೊಂದಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.
ಕರ್ಣಾಟಕ ಬ್ಯಾಂಕ್‌ನಿಂದ 26 ಕಡೆ ಸಣ್ಣ ಶಾಖೆ
ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣ ದಿಶೆಯಲ್ಲಿ ಕರ್ಣಾಟಕ ಬ್ಯಾಂಕ್ ದೇಶಾದ್ಯಂತ 26 ಸಣ್ಣ ಪ್ರಮಾಣದ ಶಾಖೆಗಳನ್ನು ತೆರೆಯಲು ಉದ್ದೇಶಿಸಿದೆ. ಮಾರ್ಚ್ ಅಂತ್ಯಕ್ಕೆ 18 ಶಾಖೆಗಳಲ್ಲದೆ, 8ಕ್ಕೂ ಅಧಿಕ ಸಣ್ಣ ಶಾಖೆ ತೆರೆಯಲಿದ್ದು, 2013-14ನೇ ವರ್ಷದಲ್ಲಿ ಇಂಥ 94 ಸಣ್ಣ ಶಾಖೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಮುಂದಿನ ಮಾರ್ಚ್‌ಗೆ ಒಟ್ಟು ಶಾಖೆಗಳ ಸಂಖ್ಯೆ 120 ತಲುಪಲಿದೆ. ಗ್ರಾಮೀಣ ಜನತೆಯ ಅನುಕೂಲಕ್ಕೆ ಧಾರವಾಡದ ಕುಂದಗೋಳದಲ್ಲಿ ಎಫ್‌ಎಲ್‌ಸಿಸಿ (ಫೈನಾನ್ಸಿಯಲ್ ಲಿಟ್ರೆಸಿ ಆ್ಯಂಡ್ ಕ್ರೆಡಿಟ್ ಕೌನ್ಸೆಲಿಂಗ್ ಸೆಂಟರ್) ಕೇಂದ್ರ ತೆರೆಯಲಿದೆ. ಈಗಾಗಲೇ 205 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬ್ಯಾಂಕ್ ಶಾಖೆಗಳಿದ್ದು, ಇದನ್ನು 1002 ಕಡೆಗಳಿಗೆ ವಿಸ್ತರಿಸಲಾಗುವುದು. ಮುಂದಿನ ವರ್ಷ ಬ್ಯಾಂಕ್ 2.10 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

