ಬ್ರೇಕ್ ಕೆ ಪೆಹಲೆ

'ಎಷ್ಟೂಂತ ಕೆಲ್ಸ ಮಾಡೋದು? ಎರಡು-ಮೂರು ವರ್ಷ ಬ್ರೇಕ್ ತಗೊಂಡು, ಸ್ಟಡಿ ಮಾಡ್ಕೊಂಡು ಬರ್ಬೇಕು'
- ಇಂಥ ಯೋಚನೆ ವಿಶೇಷವಾಗಿ ಕಾರ್ಪೊರೇಟ್ ವಲಯಗಳಲ್ಲಿ ಕೆಲಸ ಮಾಡುವವರಲ್ಲಿ ಸಾಮಾನ್ಯ. ಕೆಲವೊಂದು ಬಾರಿ ಇದನ್ನು ಪದೋನ್ನತಿ ಪಡೆಯುವ ಮೆಟ್ಟಿಲನ್ನಾಗಿ ಬಳಸಿಕೊಳ್ಳುವುದೂ ಉಂಟು.
ವರ್ಷಗಳ ಹಿಂದೆ ಉನ್ನತ ವ್ಯಾಸಂಗಕ್ಕೆ ತೆರಳಬೇಕೆಂದಿದ್ದರೆ ಇದ್ದ ಕೆಲಸಕ್ಕೆ ರಾಜಿನಾಮೆ ಕೊಟ್ಟು ತೆರಳಬೇಕಾಗಿತ್ತು. ಈಗ ಸ್ಥಿತಿ ಬದಲಾಗಿದೆ. ಈಗ ಕಂಪನಿಗಳು ನಿಷ್ಠಾವಂತ ಮತ್ತು ದೀರ್ಘಕಾಲದಿಂದ ಕೆಲಸದಲ್ಲಿರುವವರನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ವೇತನ ರಹಿತ ರಜೆ ಕೊಡುತ್ತಿವೆ. ಇಂಥ ರಜೆಯ ಅವಧಿಯಲ್ಲಿ ಆದಾಯ ಇಲ್ಲದಿರುವುದರಿಂದ ವೈಯಕ್ತಿಕ ಹಣಕಾಸು ಯೋಜನೆಯ ಬಗ್ಗೆ ಆಲೋಚಿಸುವುದು ಮತ್ತು ಖರ್ಚು ವೆಚ್ಚದ ಪರಿಶೀಲನೆ ಅತ್ಯಂತ ಅವಶ್ಯಕ.
ಖರ್ಚು ಕಡಿತ
ಎಲ್ಲೆಲ್ಲಿ ಖರ್ಚು ಕಡಿತಗೊಳಿಸಬಹುದು ಎಂದು ಸಾವಧಾನವಾಗಿ ಆಲೋಚಿಸಿ. ಸಣ್ಣ ಖರ್ಚಿನ ಕಡಿತ ಕೂಡ ಈ ಸಮಯದಲ್ಲಿ ನೆರವಾಗುತ್ತದೆ. ಅನಾವಶ್ಯಕ ಪ್ರವಾಸ ಮತ್ತು ವೈಭವದ ಜೀವನಕ್ಕೆ ಕಡಿವಾಣ ಹಾಕಿ. ದುಬಾರಿ ಬೆಲೆಯ ಮೊಬೈಲ್ ಫೋನ್ ಖರೀದಿಗೆ ಬೀಳಲಿ ಬ್ರೇಕ್! ನಿಮ್ಮ ಪರಿಚಯದವರೊಂದಿಗೆ ಬಳಕೆಯಲ್ಲಿರಲು ವಾಟ್ಸ್ ಆಪ್, ಜಿ ಟಾಕ್, ವೈಬರ್, ಸ್ಕೈಪ್ ಅನ್ನು ಉಪಯೋಗಿಸುವುದು ಉತ್ತಮ.
ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್
ನಿಮ್ಮ ಆದಾಯ ನಿರಂತರವಾಗಿರದಿದ್ದರೂ ವೆಚ್ಚದ ಬಿಲ್ ಮಾತ್ರ ನಿರಂತವಾಗಿರುತ್ತದೆ. ಹೀಗಾಗಿ ಅವುಗಳಿಗೆ ಮಾತ್ರ ನಿರ್ದಿಷ್ಟ ಮೊತ್ತವನ್ನು ಖಾತೆಯಲ್ಲಿ ಇರಿಸಿಕೊಳ್ಳಿ. ಬಿಲ್ ಪಾವತಿಗಾಗಿ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ ಮಾಡಿಸಿಕೊಳ್ಳಿ. ಇಂಥ ವ್ಯವಸ್ಥೆಯಿಂದ ನಿಗದಿತ ದಿನಾಂಕದಲ್ಲಿ ಬಿಲ್ ಪಾವತಿ ಮಾತ್ರವಲ್ಲದೆ, ವಿಳಂಬವಾದದಕ್ಕೆ ವಿಧಿಸಲಾಗುವ ದಂಡದ ಮೊತ್ತದಿಂದಲೂ ಪಾರಾಗುತ್ತೀರಿ. ಗೃಹ ಸಾಲ ಮತ್ತು ಇತರ ಯಾವುದೇ ಸಾಲಗಳ ಪ್ರತಿ ತಿಂಗಳ ಮಾಸಿಕ ಕಂತು ಪಾವತಿಗೂ ಇದೇ ಪದ್ಧತಿ ಅನುಸರಿಸಿರಿ.
ಜೀವ ಮತ್ತು ಆರೋಗ್ಯ ವಿಮೆ
ಸಾಕಷ್ಟು ಜೀವ ಮತ್ತು ಆರೋಗ್ಯ ವಿಮೆಗಳನ್ನು ಮಾಡಿಸಿ. ರಜೆಯ ಅವಧಿಯಲ್ಲಿ ಸಾಮಾನ್ಯ ವಿಮೆ ಮತ್ತು ಪ್ರಯಾಣ ವಿಮೆಗಳು ನಂತರದ ಪ್ರಾಮುಖ್ಯತೆ ಪಡೆಯುತ್ತವೆ. ಆನ್‌ಲೈನ್‌ನಲ್ಲಿ ವಿಮೆ ಖರೀದಿಸುವ ಮೂಲಕ ದಲ್ಲಾಳಿ ವೆಚ್ಚ ಉಳಿಸಬಹುದು.
ಬಾಡಿಗೆ ವೆಚ್ಚದ ಕಡಿತ
ರಜೆಯ ಅವಧಿಯಲ್ಲಿ ಕಡಿಮೆ ಬಾಡಿಗೆಯಿರುವ ಮನೆಗೆ ಬದಲಾಯಿಸುವುದನ್ನು ಪರಿಗಣಿಸಿ. ಹೊರ ದೇಶಕ್ಕೆ ಪ್ರಯಾಣಿಸುತ್ತಿದ್ದರೆ ದುಬಾರಿ ಬೆಲೆಯ ಹೊಟೇಲ್ ಬದಲು ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ ಅಥವಾ ಇದಕ್ಕಾಗಿಯೇ ಇರುವ airbnb.comಯಂತಹ ಪ್ರಯಾಣ ಏಜೆನ್ಸಿಗಳನ್ನು ಸಂಪರ್ಕಿಸುವುದು ವಿಹಿತ. ದೀರ್ಘಕಾಲಿಕ ವಸತಿ ಪಡೆಯುವುದ್ಕೂ ಅವು ಸಹಕಾರಿಯಾಗಿವೆ.
ಉದ್ಯೋಗ ಭದ್ರತೆ
ರಜೆ ಪಡೆಯುವುದಕ್ಕೆ ಮುನ್ನ ಉದ್ಯೋಗದಾತರು ನಿಮ್ಮ ಉದ್ಯೋಗದ ಭದ್ರತೆಯ ಬಗ್ಗೆ ಲಿಖಿತವಾಗಿ ಯಾವುದೇ ಪತ್ರವನ್ನು ಕೊಡದೆ ಇದ್ದರೆ ನಿಮ್ಮ ಸಂಪರ್ಕದಲ್ಲಿರುವವರಿಗೆ ಇದರ ಬಗ್ಗೆ ತಿಳಿಸಿ. ನೀವು ರಜೆಯಿಂದ ವಾಪಸಾದ ನಂತರದ ಯೋಜನೆಗಳನ್ನು ರೂಪಿಸಿಕೊಳ್ಳಿ. ಇದು ಮತ್ತೊಂದು ಉದ್ಯೋಗವನ್ನು ಕಂಡುಕೊಳ್ಳಲು ಉಪಕಾರವಾಗುತ್ತದೆ.
ಇಷ್ಟೆಲ್ಲಾ ಅಂಶಗಳನ್ನು ಗಮನಿಸಿ ಯೋಜನೆಗಳನ್ನು ರೂಪಿಸಿ ನಿರ್ಧಾರ ಕೈಗೊಂಡಲ್ಲಿ ನಿಮ್ಮ ಪ್ರಯಾಣ, ಅಧ್ಯಯನ ಸಫಲತೆಯತ್ತ ಮುಖ ಮಾಡುವುದರಲ್ಲಿ ಎರಡು ಮಾತಿಲ್ಲ.
-ಜಯಗೌರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


