ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ
ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಇರಲಿ ಎಚ್ಚರ. 'ವಿದೇಶಕ್ಕೆ ತೆರಳುತ್ತಿದ್ದೇನೆ. ನನ್ನಲ್ಲಿ ಇಂಟರ್‌ನ್ಯಾಷನಲ್ ಕ್ರೆಡಿಟ್ ಕಾರ್ಡ್ ಇದೆ. ಯಾವ ಭಯವೂ ಇಲ್ಲ'...

'ವಿದೇಶಕ್ಕೆ ತೆರಳುತ್ತಿದ್ದೇನೆ. ನನ್ನಲ್ಲಿ ಇಂಟರ್‌ನ್ಯಾಷನಲ್ ಕ್ರೆಡಿಟ್ ಕಾರ್ಡ್ ಇದೆ. ಯಾವ ಭಯವೂ ಇಲ್ಲ' ಎದು ಭಾವಿಸುವವರು ಅನೇಕರು. ಆದರೆ, ಕಾರ್ಡ್ ಅನ್ನು ಭಾರತದಲ್ಲಿ ಸ್ವೈಪ್ ಮಾಡುವುದಕ್ಕಿಂತ ವಿದೇಶದಲ್ಲಿ ಮಾಡಿದರೆ ಹೆಚ್ಚಿನ ರಿಸ್ಕ್ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಎದುರಾಗುವ ಸಮಸ್ಯೆಗಳಾವುವು ಎಂಬ ಮಾಹಿತಿ ಇಲ್ಲಿದೆ.
ಸ್ಕಿಮ್ಮಿಂಗ್ ಭೀತಿ
ಅಂತಾರಾಷ್ಟ್ರೀಯ ಯಂತ್ರದಲ್ಲಿ ನೀವು ಕಾರ್ಡ್ ಸ್ವೈಪ್ ಮಾಡಿದಾಗ ಕಾರ್ಡ್‌ನಲ್ಲಿನ ಎಲ್ಲ ದತ್ತಾಂಶ, ಮಾಹಿತಿಗಳು ಮತ್ತೊಂದು ಹಳೆಯ ಕಾರ್ಡ್‌ನಲ್ಲಿ ನಕಲು ಆಗುವ ಸಾಧ್ಯತೆ ಇದೆ. ಸಾಧನವೊಂದನ್ನು ಬಳಸಿ ಈ ರೀತಿ ಪ್ರತಿ ತೆಗೆಯುವುದನ್ನು 'ಸ್ಕಿಮ್ಮಿಂಗ್' ಎನ್ನುತ್ತಾರೆ. ನಂತರ ವಂಚಕನು ಅದನ್ನು ಬಳಸಿ ಆತನಿಗೆ ಬೇಕಾದಂತೆ ವಸ್ತುಗಳ ಖರೀದಿ ಮಾಡಬಹುದು. ಶ್ರೀಲಂಕಾ, ಮಲೇಷ್ಯಾ, ಥಾಯ್ಲೆಂಡ್‌ನಂತಹ ರಾಷ್ಟ್ರಗಳಲ್ಲಿ ಇಂತಹ ವಂಚನೆ ಹೆಚ್ಚಾಗಿ ನಡೆಯುತ್ತದೆ.
ಹೊಸ ಕಾರ್ಡ್: ಇಂತಹ ವಂಚನೆ ನಡೆಯುವ ಪ್ರದೇಶದಲ್ಲಿ ಗ್ರಾಹಕರು ಕಾರ್ಡ್ ಸ್ವೈಪ್ ಮಾಡಿದ್ದರೆ ಎಚ್‌ಡಿಎಫ್‌ಸಿ, ಎಚ್‌ಎಸ್‌ಬಿಸಿ, ಐಸಿಐಸಿಐ ಮತ್ತಿತರ ಬ್ಯಾಂಕುಗಳು ಹೊಸ ಕಾರ್ಡ್ ನೀಡುವ ವ್ಯವಸ್ಥೆ ಹೊಂದಿವೆ. ಹೊಸ ಕಾರ್ಡ್‌ಗಾಗಿ ಕಾಲ್‌ಸೆಂಟರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಿ ಎಂಬ ಸಂದೇಶವನ್ನು ಬ್ಯಾಂಕುಗಳು ನಿಮ್ಮ ಇ-ಮೇಲ್‌ಗೆ ಕಳುಹಿಸುತ್ತವೆ. ಅದರಂತೆ ನೀವು ಪ್ರತಿಕ್ರಿಯಿಸಿದರೆ ನಿಮಗೆ ಹೊಸ ಕಾರ್ಡ್ ದೊರೆಯುತ್ತದೆ. ಒಂದು ವೇಳೆ ಹಳೆಯ ಕಾರ್ಡ್ ಬ್ಲಾಕ್ ಮಾಡಲು ನೀವು ಒಪ್ಪದಿದ್ದರೆ ಮಾತ್ರ, ಆಗುವ ಎಲ್ಲ ನಷ್ಟಗಳಿಗೂ ನೀವೇ ಹೊಣೆಗಾರರಾಗುತ್ತೀರಿ.
ವಹಿವಾಟು ದುಬಾರಿ
ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಅನ್ನು ವಿದೇಶಗಳಲ್ಲಿ ಬಳಸಿದರೆ ವಹಿವಾಟು ಮೊತ್ತ ಶೇ.3.5ರಷ್ಟು ದುಬಾರಿಯಾಗಿರುತ್ತದೆ. ಅಂತಾರಾಷ್ಟ್ರೀಯ ವ್ಯವಹಾರಕ್ಕಾಗಿ ಕಾರ್ಡ್ ಬಳಸುವಾಗ ಬ್ಯಾಂಕುಗಳು 'ಕರೆನ್ಸಿ ಮಾರ್ಕ್-ಅಪ್ ಚಾರ್ಜ್' ಎಂಬ ಹೆಚ್ಚುವರಿ ಶುಲ್ಕ ವಿಧಿಸುತ್ತವೆ.
ನೀವೇನು ಮಾಡಬೇಕು?
- ಅಂತಾರಾಷ್ಟ್ರೀಯ ಕಾರ್ಡುಗಳಿಗೆ ಮಿತಿಯಿರಲಿ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್ ಹೊಂದಿರುವುದು ಬೇಡ
- ವಿದೇಶಕ್ಕೆ ತೆರಳುವಾಗ ಬ್ಯಾಂಕುಗಳು ನೀಡುವ ವಿದೇಶಿ ವಿನಿಮಯ ಅಥವಾ ಪ್ರಿಪೇಯ್ಡ್ ಫಾರೆಕ್ಸ್ ಕಾರ್ಡ್‌ಗಳನ್ನು ಒಯ್ಯಿರಿ
- ವಿದೇಶದಿಂದ ಬಂದೊಡನೆ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿ, ಹೊಸ ಕಾರ್ಡ್‌ಗೆ ಅರ್ಜಿ ಹಾಕಿ
- ಮತ್ತೊಂದು ಆಯ್ಕೆಯೆಂದರೆ ಬ್ಯಾಂಕ್‌ನಿಂದ ಇಎಂವಿ ಅಥವಾ ಚಿಪ್ ಆಧಾರಿತ ಕಾರ್ಡ್ ಪಡೆಯಿರಿ. ಇದರಿಂದ ವಂಚನೆ ತಡೆಯಲು ಸಾಧ್ಯ. ಏಕೆಂದರೆ, ಈ ಕಾರ್ಡ್ ಡಿಪ್ ಮಾಡಿದೊಡನೆ ಪಾಸ್‌ವರ್ಡ್ ನೀಡಬೇಕಾಗುತ್ತದೆ.
- ಆಗಾಗ್ಗೆ ವಿದೇಶಕ್ಕೆ ತೆರಳುವವರಾದರೆ, ಸಿಪಿಪಿ(ಕಾರ್ಡ್ ಸುರಕ್ಷತಾ ಕಂಪನಿ)ಯ ಸೇವೆ ಪಡೆದುಕೊಳ್ಳಿ. ಕಾರ್ಡ್‌ನ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ಬಂದೊಡನೆ ಅಥವಾ ಕಾರ್ಡ್ ಕಳೆದುಹೋದೊಡನೆ ಸಿಪಿಪಿಗೆ ಒಂದು ಕರೆ ಮಾಡಿದರೆ ಸಾಕು, ತಕ್ಷಣವೇ ನಿಮ್ಮ ಎಲ್ಲ ರಿಜಿಸ್ಟರ್ಡ್ ಕಾರ್ಡ್‌ಗಳು ಬ್ಲಾಕ್ ಆಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


