ವಾಣಿಜ್ಯ

ಹ್ಯಾಪಿನೆಸ್ ಸೇಲ್ ಮತ್ತೆ ಬಂದಿದೆ!

ಹ್ಯಾಪಿನೆಸ್ ಸೇಲ್ ಮತ್ತೆ ಬಂದಿದೆ!
Published On :

ಹೆಬ್ಬಯಕೆಯ ಶಾಪರ್‌ಗಳು ಈ ಸೀಸನ್‌ನ ಕೊನೆಯಲ್ಲಿ ಸಂಭ್ರಮಾಚರಿಸಲು ಇನ್ನೊಂದು ಕಾರಣ ಸಿಕ್ಕಿದೆ. ನಗರದ ಫ್ಯಾಶನೇಬಲ್ ಮಾರಾಟ 'ದಿ ಸೆಂಟ್ರಲ್ ಹ್ಯಾಪಿನೆಸ್ ಸೇಲ್‌' ಮತ್ತೆ ಬಂದಿದೆ. ಈ ಮಾರಾಟವು ದೇಶಾದ್ಯಂತ ಇರುವ ಸೆಂಟ್ರಲ್ ಮಳಿಗೆಗಳಲ್ಲಿ ಲಭ್ಯವಿರುವ 1000ಕ್ಕೂ ಹೆಚ್ಚು ಬ್ರಾಂಡ್‌ಗಳ ಮೇಲೆ ಶೇ. 51ರಷ್ಟು ರಿಯಾಯ್ತಿ ದರ ನೀಡಲಿದೆ. ಜು.5ರಿಂದ ಆ. 4ರವರೆಗೆ ಮಾರಾಟವಿದೆ. ಈ ಕುರಿತಂತೆ ಸೆಂಟ್ರಲ್ ಆಂಡ್ ಬ್ರಾಂಡ್ ಫಾಕ್ಟರಿಯ ಮಾರ್ಕೆಟಿಂಗ್ ಮುಖ್ಯಸ್ಥರು ಮಾತನಾಡಿ, 'ಹ್ಯಾಪಿನೆಸ್ ಸೇಲ್ ಅತ್ಯಂತ ಫ್ಯಾಶನೇಬಲ್ ವಸ್ತ್ರಭಂಡಾರ ಮತ್ತು ಪರಿಕರಗಳನ್ನು ಹುಡುಕುವ ಶಾಪರ್‌ಗಳಿಗೆ ಅದ್ಬುತ ಅವಕಾಶವಾಗಿದೆ. ಗ್ರಾಹಕರು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬ್ರಾಂಡ್‌ಗಳ ವಿಸ್ತೃತ ಶ್ರೇಣಿಯಿಂದ ತಮಗೆ ಬೇಕಾಗಿದ್ದನ್ನು ಆಯ್ದುಕೊಳ್ಳಬಹುದಾಗಿದೆ. ಸೆಂಟ್ರಲ್‌ನಲ್ಲಿ ಪ್ರತಿಯೊಬ್ಬರಿಗೂ ಕೆಲವೊಂದಿಷ್ಟು ಎನ್ನುವ ಸಲಕರಣೆಗಳಿವೆ' ಎಂದರು.

ಮಜುಂದಾರ್ ಶಾ ಕ್ಯಾನ್ಸರ್ ಚಿಕಿತ್ಸಾ ಘಟಕದಲ್ಲಿ ರೇಡಿಯೋಥೆರಪಿ ಸೇವೆ

ಬೆಂಗಳೂರು ನಗರದ ಎನ್.ಎಚ್. ಹೆಲ್ತ್‌ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ಚಿಕಿತ್ಸಾ ಘಟಕ, ವಿಕಿರಣ ಸಮವೇದಿ ಕ್ಯಾನ್ಸರ್ ಜಾಗತಿಕ ಮಟ್ಟದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನದ ಹೈ ಪ್ರಿಸಿಶನ್ ರೇಡಿಯೋಥೆರಪಿ ಸಾಧನ ಅಳವಡಿಸಿಕೊಂಡಿದೆ. ವಿಕಿರಣ ಸಂವೇದಿ ಹಾಗೂ ಧೈರಾಯ್ಡ್ ಕ್ಯಾನ್ಸರ್, ರಕ್ತ ಸಂಬಂಧಿ ರೋಗ ಚಿಕಿತ್ಸೆಗೆಈ ಸಾಧನ ಪ್ರಯೋಜನಕಾರಿಯಾಗಿದೆ. ಈ ಕುರಿತು ಮಾತನಾಡಿದ ಶಾ ಕ್ಯಾನ್ಸರ್ ಆಸ್ಪತ್ರೆಯ ರೇಡಿಯೇಶನ್ ಆಂಕಾಲಜಿಸ್ಟ್ ಡಾ.ಸಂದೀಪ್ ಜೈನ್, ರೇಡಿಯೋ ಥೆರಪಿ ಬಳಕೆಯ ಸುರಕ್ಷತೆ ಬಗ್ಗೆ ಹಿಂದಿನಿಂದಲೂ ಜನರ ಮನಸ್ಸಿನಲ್ಲಿ ಸಂದೇಹವೇ ತುಂಬಿದೆ. ಇದು ಭೀತಿಗೆ ಕಾರಣವಾಗಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದೆ ಚಿಕಿತ್ಸೆಗೆ ಸಹಕಾರ ಸಿಗುವುದಿಲ್ಲ. ಪ್ರಸ್ತುತ ಲಭ್ಯವಿರುವ, ಅಡ್ಡಪರಿಣಾಮವಿಲ್ಲದ ಈ ಉನ್ನತ ತಂತ್ರಜ್ಞಾನದ ರೇಡಿಯೋಥೆರಪಿ ಬಗ್ಗೆ ಈ ಭಯ ಅಗತ್ಯವಿಲ್ಲ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದರು.

ಆ್ಯರೆಟೆಕ್‌ನಿಂದ ವಿದ್ಯುತ್ ಕಡಿತ ತಪ್ಪಿಸಲು ಸೌರಪರಿಹಾರ
ಸೌರವಿದ್ಯುತ್ ಸೇವಾ ಕ್ಷೇತ್ರ ಆ್ಯರೆಟೆಕ್ ಟೆಕ್ನಾಲಜಿ ಪ್ರೈ.ಲಿ. ಕೇವಲ ಭಾರತದಲ್ಲಿ ಮಾತ್ರವಲ್ಲ ನೆರೆ ದೇಶಗಳಾದ ಅಪಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನಗಳಲ್ಲಿ ಲಕ್ಷಾಂತರ ಜನರ ವಿದ್ಯುತ್ ಸಮಸ್ಯೆ ಪರಿಹರಿಸುತ್ತಿದೆ. ಆ್ಯರೆಟೆಕ್‌ನ ಸೌರಬಂಧು ಸರಣಿ ಮತ್ತು ಸ್ಮಾರ್ಟ್ ಗ್ರಿಡ್ ಸಿಸ್ಟಮ್ಸ್ ಉತ್ಪನ್ನಗಳು ದಕ್ಷಿಣ ಭಾರತದ ಕೈಗಾರಿಕೆ ಮತ್ತು ಮನೆಗಳು ಎದುರಿಸುತ್ತಿರುವ ವಿದ್ಯುತ್ ಅಭಾವವನ್ನು ನೀಗಲಿದೆ ಎಂದು ಸಂಸ್ಥೆ ಹೇಳಿದೆ. ಭಾರತ ಅಧಿಕ ಸೂರ್ಯನ ಬೆಳಕಿನ ವರ ಪಡೆದಿದೆ. ಇದರಿಂದ ಭಾರತದ ಇಂಧನ ಪೆಟ್ಟಿಗೆಗೆ ಸೂಕ್ತ ಕೊಡುಗೆ ನೀಡಬಹುದು. ಇದರಲ್ಲಿ ನಾವು ವೈಯಕ್ತಿಕ ಹಾಗೂ ವಾಣಿಜ್ಯ ಷೇರುದಾರರನ್ನು ಭಾಗಿಯಾಗಿಸಬೇಕಿದೆ ಎಂದು ಆ್ಯರೆಟೆಕ್ ಸಂಸ್ಥೆ ಸಿಇಒ ರತನ್‌ದೀಪ್ ಭಟ್ಟಾಚಾರ್ಯಜಿ ಹೇಳಿದ್ದಾರೆ.

ಲ್ಯಾಂಬೋರ್ಡ್‌ನಿಂದ ಸೂಟಿಂಗ್ಸ್, ಶರ್ಟೀಂಗ್ಸ್, ಸಿದ್ಧ ಉಡುಪುಗಳ ಭಾರಿ ಸಂಗ್ರಹ ಬಿಡುಗಡೆ
ಭಾರತದ ಪ್ರಮುಖ ಫಾರ್ಮಲ್ಸ್ ಪುರುಷರ ಉಡುಪುಗಳ ಬ್ರ್ಯಾಂಡ್ ಆಗಿರುವ ಪ್ಯೂಚರ್ ಸಮೂಹದ ಲ್ಯಾಂಬೋರ್ಡ್ ಈಗ ಫ್ಯಾಬ್ರಿಕ್ ವಲಯವನ್ನು ಪ್ರವೇಶಿಸಿದ್ದು, ಸೂಟಿಂಗ್ಸ್, ಶರ್ಟೀಂಗ್ಸ್, ಸಿದ್ಧ ಉಡುಪುಗಳ ಭಾರಿ ಸಂಗ್ರಹವನ್ನು  ಬಿಡುಗಡೆಗೊಳಿಸಿದೆ. ಲ್ಯಾಂಬೊರ್ಡ್ ಮಹತ್ವಾಕಾಂಕ್ಷೆಯ ಬೆಳವಣಿಗೆಯ ಮುಂದಿನ 5 ವರ್ಷಗಳಲ್ಲಿ 500ಕೋಟಿ ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ. ಕಂಪನಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು 750 ಎಂಬಿಒ ಮತ್ತು 50ಇಬಿಒ ಮೂಲಕ ಬಿಡುಗಡೆಗೆ ಯೋಜನೆ ರೂಪಿಸಿದೆ ಎಂದು ಹೇಳಿಕೊಂಡಿದೆ. ಪುರುಷರ ಉಡುಪುಗಳ ವಲಯದಲ್ಲಿ ಅಗ್ರಸ್ಥಾನ ಗಳಿಸುವ ಗುರಿ ಹೊಂದಿದ್ದೇವೆ. 20,000 ಕೋಟಿ ಮೌಲ್ಯದ ಭಾರತೀಯ ಪುರುಷರ ಉಡುಪುಗಳ ಮಾರುಕಟ್ಟೆಯಲ್ಲೂ ಪ್ರಮುಖ ಪಾಲು ಹೊಂದುವ ಸಾಧ್ಯತೆಗಳನ್ನು ಒಳಗೊಂಡಿದ್ದೇವೆ ಎನ್ನುತ್ತಾರೆ ಲ್ಯಾಂಬೋರ್ಡ್ ಅಧ್ಯಕ್ಷ ಅಶ್ವಿನಿ ಮಿಶ್ರಾ.

ನೊಕಿಯಾ 301 ಹ್ಯಾಂಡ್‌ಸೆಟ್  ಮಾರುಕಟ್ಟೆಗೆ
ಅಪರಿಮಿತ ಇಂಟರ್ನೆಟ್ ಅನುಭವಕ್ಕಾಗಿ ನೊಕಿಯಾ ಸಂಸ್ಥೆ 3.5ಜಿ ಸಾಮರ್ಥ್ಯದ ನೊಕಿಯಾ 301 ಹ್ಯಾಂಡ್‌ಸೆಟ್‌ಅನ್ನು  ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹೊಸ ಹ್ಯಾಂಡ್‌ಸೆಟ್‌ನ ವಿಶೇಷತೆಯೆಂದರೆ, ಕ್ಯಾಂಡಿ ಬಾರ್‌ನಂತಿರುವ ಇದರ ವಿನ್ಯಾಸ. ಇದರೊಂದಿಗೆ 3.5ಜಿ ಇಂಟರ್‌ನೆಟ್ ವೇಗ ಮತ್ತು ಸ್ಮಾರ್ಟ್ ಕ್ಯಾಮೆರಾ. ಈ ಕುರಿತಂತೆ ಭಾರತೀಯ ನೊಕಿಯಾ ಮಾರ್ಕೆಂಟಿಗ್ ನಿರ್ದೇಶಕರು ಮಾತನಾಡಿ, ಹೊಸ ದರದ ಮಾನದಂಡದಲ್ಲಿ ನೊಕಿಯಾ ಅತ್ಯುತ್ತಮ ಶ್ರೇಣಿಯ ಫೋನ್‌ಗಳನ್ನು ಆವಿಷ್ಕರಿಸಿದೆ. ಕಿರಿಯರಿಂದ ಹಿರಿಯವರೆಗೂ ನಗರ, ಗ್ರಾಮೀಣ ಪ್ರದೇಶದ ಜನರು ಕೂಡ ಬಳಸಲು ಇದು ಯೋಗ್ಯವಾಗಿದೆ ಎಂದರು. ಸಿಯಾನ್, ಹಳದಿ, ಮೆಜೆಂಟಾ, ಕಪ್ಪು ಮತ್ತು ಶ್ವೇತ ಬಣ್ಣಗಳಲ್ಲಿ ಲಭ್ಯವಿದ್ದು, ನೊಕಿಯಾ 301 ಹ್ಯಾಂಡ್‌ಸೆಟ್‌ನ ಮಾರುಕಟ್ಟೆ ಬೆಲೆ 5,349 ಆಗಿದೆ.

ವೆಸ್ಟರ್ನ್ ಯೂನಿಯನ್ ಸೇವೆ ವಿಸ್ತರಣೆ

ವೆಸ್ಟರ್ನ್ ಯೂನಿಯನ್ ಕಂಪನಿ ಜಾಗತಿಕ ಪಾವತಿಗಳ ಸೇವೆಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಅದು ಯುಎಸ್ ಮತ್ತು ಯುಕೆಗಳಿಂದ ಭಾರತದಲ್ಲಿರುವ ಬಹುತೇಕ ಬ್ಯಾಂಕು ಖಾತೆಗಳಿಗೆ ಅಂತಾರಾಷ್ಟ್ರೀಯ ಹಣ ವರ್ಗಾವಣೆ ಮಾಡುವ ಸೇವೆಯನ್ನು ಇನ್ನಷ್ಟು ವ್ಯಾಪಕಗೊಳಿಸಿದೆ. ಯುಎಸ್ ಮತ್ತು ಯುಕೆಗಳಲ್ಲಿರುವ ಕಂಪನಿಯ ಗ್ರಾಹಕರು ಈಗ ಕಂಪನಿಯ ವ್ಯಾವಹಾರಿಕ ಜಾಲತಾಣಗಳನ್ನು ಮತ್ತು ಯುಎಸ್‌ನಲ್ಲಿ ಅದರ ಸ್ಮಾರ್ಟ್ ಫೋನ್ ಅನ್ವಯಿಕಗಳನ್ನು ಬಳಸಿ ಅಥವಾ ಭಾಗವಹಿಸುತ್ತಿರುವ ಸಾವಿರಾರು ಏಜೆಂಟರ ಸ್ಥಳಗಳಿಗೆ ಹೋಗಿ ಆನ್‌ಲೈನ್ ಮುಖಾಂತರ ಭಾರತದಲ್ಲಿರುವ ಬಹುತೇಕ ಬ್ಯಾಂಕುಗಳಿಗೆ ನೇರವಾಗಿ ವ್ಯವಹಾರಗಳನ್ನು ಕಳುಹಿಸಬಹುದು. ಹೆಚ್ಚುವರಿಯಾಗಿ, ಭಾರತದಲ್ಲಿ ಅನಿವಾಸಿ ಬ್ಯಾಂಕ್ ಖಾತೆ ಹೊಂದಿರುವ ಯುಎಸ್ ಮತ್ತು ಯುಕೆ ಗ್ರಾಹಕರು ಈ ಖಾತೆಗಳಿಗೆ ನೇರವಾಗಿ ಹಣ ಕಳುಹಿಸಬಹುದು.
ಈ ಕುರಿತು ವೆಸ್ಟರ್ನ್ ಯೂನಿಯನ್ ಕಂಪನಿ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಹಿಕ್ಮಿತ್ ಇಯರ್ಶೆಕ್ ಮಾತನಾಡಿ, ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ನಮ್ಮ ಗ್ರಾಹಕರಿಗೆ ಸೇವೆ ಒದಗಿಸುವುದೇ ಸಂಸ್ಥೆಯ ಗುರಿ. ಇದನ್ನು ಸಾಧಿಸಲು ನಾವು ಒಂದು ಬಹು-ಉತ್ಪನ್ನ, ಬಹು-ವಾಹಿನಿಗಳ ಮಾರ್ಗೋಪಾಯವನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದರು.

'ಆರೋಗ್ಯವಾಣಿ' ಉದ್ಘಾಟನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಹೆಲ್ತ್ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್ ಇನ್ಸ್‌ಟಿಟ್ಯೂಟ್ ತನ್ನ 'ಆರೋಗ್ಯವಾಣಿ' ಯೋಜನೆಯನ್ನು ಹುಬ್ಬಳ್ಳಿ ನಗರದಲ್ಲಿ ಉದ್ಘಾಟಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಯು.ಟಿ. ಖಾದರ್ ಹೆಲ್ತ್ ಹೆಲ್ಪ್‌ಲೈನ್ ಸಂಖ್ಯೆ 104ಕ್ಕೆಕರೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾರ್ತಾ ಸಚಿವರಾದ ಸಂತೋಷ್ ಲಾಡ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಬಿ. ಪಾಟೀಲ್, ಹೆಲ್ತ್ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್ ಇನ್ಸ್‌ಟಿಟ್ಯೂಟ್ ನ ಡಾ.ಬಾಲಾಜಿ ಉತ್ಲಾ ಹಾಗೂ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎಂ.ಮದನ್‌ಗೋಪಾಲ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ  ಯೋಜನೆ ವರ್ಷದ 365ದಿನಗಳ ಕಾಲವೂ ಮಾಹಿತಿ ರವಾನೆ, ಅರಿವು, ಮತ್ತು ಮಾರ್ಗದರ್ಶನವನ್ನು ನೀಡುವುದಾಗಿದೆ.

ಇನ್‌ಮಾರ್ಕ್‌ನಿಂದ ಶೇ. 50ರಷ್ಟು ರಿಯಾಯಿತಿ
ಇನ್‌ಮಾರ್ಕ್ ಇತ್ತೀಚಿನ ಟ್ರೆಂಡ್‌ಗಳ ಮತ್ತು ಸೀಸನ್ ಸೇಲ್‌ನ ಅಂತ್ಯವನ್ನು ಘೋಷಿಸಿದೆ. ಶಾಪರ್ಸ್‌ಗೆ ಅವರ ವಾರ್ಡ್‌ರೋಬನ್ನು ಅಲಂಕರಿಸಲು ಶೇ. 50ರ ತನಕ ದರ ಕಡಿತವನ್ನೂ ತನ್ನ ಉತ್ಪನ್ನಗಳಿಗೆ ಒದಗಿಸುತ್ತದೆ. ಇನ್‌ಮಾರ್ಕ್ ಮಳಿಗೆಯಲ್ಲಿ ಗ್ರಾಹಕರು ಇಷ್ಟದ ಫ್ಯಾಶನ್ ಉಡುಪುಗಳನ್ನು ಖರೀದಿಸಿ ಶೇ.50ರ ದರ ಕಡಿತ ಸೌಲಭ್ಯವನ್ನೂ ಪಡೆಯಬಹುದು. ಹೆಚ್ಚುವರಿ ಶೇ. 10ರ ಕಡಿತ ಕೂಡ ತಮ್ಮದಾಗಿಸುವ ಅವಕಾಶವಿದ್ದು, 2499 ಮತ್ತು ಹೆಚ್ಚು ಮೊತ್ತದ ಖರೀದಿಗೆ ಇದು ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗೆ www.inmarkeretail.com or http://www.facebook.com/INMARKRETAIL ಗೆ ಭೇಟಿ ನೀಡಿ.

ಮೆಸೆಂಜರ್ ಸೇವೆ ಆರಂಭ
ಟೋಕಿಯೊ ಮೂಲದ ಲೈನ್ ಕಾರ್ಪೊರೇಷನ್ ತನ್ನ ಜನಪ್ರಿಯ ಮೆಸೆಂಜರ್ ಸೇವೆಯನ್ನು ಭಾರತದಲ್ಲಿ ಘೋಷಿಸಿದೆ. ಇದು ಉಚಿತ ಕರೆ ಮೆಸೆಂಜರ್ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಲೈನ್ ಬ್ರ್ಯಾಂಡ್ ಮತ್ತು ಮಾರುಕಟ್ಟೆ  ಆಂದೋಲನಕ್ಕೆ ಚಾಲನೆ ನೀಡಿದೆ. ಭಾರತೀಯ ಯುವ ಮನಸ್ಸುಗಳನ್ನು ಗುರಿಯಾಗಿಸಿಕೊಂಡು ಟಿವಿ ಜಾಹೀರಾತು ಸರಣಿಗೆ ಚಾಲನೆ ನೀಡಿದೆ. ಇತರೆ ಮೆಸೆಂಜರ್ ಸೇವೆಗಳಿಗೆ ಹೋಲಿಸಿದರೆ ಲೈನ್  ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಲು ಕಾರಣ ಸ್ಟಿಕರಿಂಗ್ ಸೇವೆ. ಭಾರತೀಯ ಸೇವೆ ಕುರಿತು ಪ್ರತಿಕ್ರಿಯಿಸಿದ ಲೈನ್ ಕಾರ್ಪೋರೇಷನ್ ಸಿಇಒ ಅಕಿರ ಮೊರಿಕವ, ಲೈನ್  ಅಚ್ಚರಿಯ ಬೆಳವಣಿಗೆ ಸಾಧಿಸಿದ್ದು, 23 ತಿಂಗಳಲ್ಲಿ 180ದಶಲಕ್ಷ ಬಳಕೆದಾರರನ್ನು ಗಳಿಸಿದೆ. ಇಂದು ವಿಶ್ವದಾದ್ಯಂತ ಒಂದು ದಿನಕ್ಕೆ 5ಶತಕೋಟಿ ಕರೆ ಮತ್ತು ಸಂದೇಶಗಳನ್ನು ರವಾನಿಸುತ್ತಿದೆ. ಜಾಗತಿಕವಾಗಿ ಲೈನ್‌ಗೆ ಯುವಕರ ಪ್ರತಿಕ್ರಿಯೆ ಅತ್ಯದ್ಬುತವಾಗಿದೆ ಎಂದರು.

ಫೇರ್ ಆ್ಯಂಡ್ ಹ್ಯಾಂಡ್‌ಸಮ್ ಮರು ಅನಾವರಣ
ಬಾಲಿವುಡ್ ನಟ ಶಾರುಖ್‌ನ 'ಜ್ಯಾದಾ' ಭರವಸೆಯೊಂದಿಗೆ ಇಮಾಮಿಯ ಪ್ರತಿಷ್ಠಿತ ಫೇರ್ ಆಂಡ್ ಹ್ಯಾಂಡ್‌ಸಮ್ ಮರು ಅನಾವರಣಗೊಳಿಸಿದೆ. ಶಾರುಖ್‌ಖಾನ್ ಅವರಂತೆ ಜನಪ್ರಿಯತೆಯ ಉತ್ತುಂಗದಲ್ಲಿರುವ ಬ್ರಾಂಡ್, 2012-13ನೇ ಹಣಕಾಸು ವರ್ಷದಲ್ಲಿ 329 ಕೋಟಿ ಮೌಲ್ಯದ ಪುರುಷರ ಫೇರ್ನೆಸ್ ಮಾರುಕಟ್ಟೆಯಲ್ಲಿ ಶೇ.58ರಷ್ಟು ಪಾಲನ್ನು  ತನ್ನದಾಗಿಸಿಕೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.  ಇಮಾಮಿ ಲಿಮಿಟೆಡ್‌ನ ನಿರ್ದೇಶಕ ಮೋಹನ್ ಗೋಯೆಂಕ್ ಮಾತನಾಡಿ, ಪುರುಷರಿಗಾಗಿ ಪ್ರತ್ಯೇಕ ಕ್ರೀಮ್ ಅಗತ್ಯವಿದ್ದು, ಕ್ರೀಮ್ ಬಗ್ಗೆ ಪುರುಷರ ನಿರೀಕ್ಷೆಗಳೂ ಬದಲಾಗಿವೆ. ಇದರ ಪರಿಣಾಮವೇ ಹೊಸ ಅವತಾರದಲ್ಲಿ ಫೇರ್ ಆಂಡ್ ಹ್ಯಾಂಡ್‌ಸಮ್ ಮಾರುಕಟ್ಟೆಗೆ ಬಂದಿದೆ. ಈ ಬಾರಿ ಫೇರ್‌ನೆಸ್ ಕ್ರೀಮ್‌ಗಿಂತಲೂ ಅತಿ ಹೆಚ್ಚಿನ 'ಜ್ಯಾದಾ' ಲಾಭಗಳನ್ನು ನೀಡಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಪ್ರಚಂಡ ಪ್ರಗತಿ ಸಾಧಿಸುವ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.