ಕಾರುಬಾರು

ಕಾರ್ಮಿಕರ ಕೊರತೆಯಿಂದ ಕಂಗಾಲಾಗಿದ್ದ ನಾರಾಯಣ ಭಟ್ಟರಿಗೆ ಹಳೆಯ ಡಾಲ್ಫಿನ್ ಕಾರು ವರದಂತೆ ಸಿಕ್ಕಿದೆ.
ಹಳೆ ಬುಲೆಟ್ ಬೈಕ್, ಹಳೆ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳಿಗೆ ವಾಹನಪ್ರಿಯರಿಂದ ಬೇಡಿಕೆ. ಅವುಗಳ ಸಂಗ್ರಹ, ಸವಾರಿಯ ಹವ್ಯಾಸ ಬೆಳೆಸಿಕೊಂಡವರ ಸಂಖ್ಯೆಯೂ ದೊಡ್ಡದು. ಆದರೆ, ಪುತ್ತೂರು ಸಮೀಪದ ಪ್ರಗತಿಪರ ಕೃಷಿಕರೊಬ್ಬರು 1968ನೇ ಮಾಡೆಲ್‌ನ ಡಾಲ್ಫಿನ್ ಕಾರೊಂದರ ಬಾಡಿಯನ್ನು ಮರು ವಿನ್ಯಾಸಗೊಳಿಸಿ ಯಶಸ್ವಿಯಾಗಿ ಬಳಸುತ್ತಿದ್ದಾರೆ. ಪೇಟೆಗೆ ಹೋಗಲು ಅಲ್ಲ, ತಮ್ಮ ವಿಶಾಲ ಅಡಕೆ ತೋಟದಲ್ಲಿ ಗೊಬ್ಬರ, ಫಸಲು ಸಾಗಿಸಲು...
ಬಹುಪಯೋಗಿ
ಪುತ್ತೂರು ತಾಲೂಕು ಬೆಟ್ಟಂಪಾಡಿ ಸಮೀಪದ ದರ್ಬೆ ನಾರಾಯಣ ಭಟ್ಟರದು ಅಡಕೆ ಕೃಷಿ. ಸುಮಾರು ಒಂದು ಕಿ.ಮೀ ಸುತ್ತಳತೆಯ ವಿಶಾಲ ಸಮತಟ್ಟಾದ ತೋಟದುದ್ದಕ್ಕೂ ಓಡಾಡಲು ಕಚ್ಚಾ ರಸ್ತೆ ನಿರ್ಮಿಸಿರುವುದರಿಂದ, ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಕೊಯ್ದ ಅಡಕೆ, ತೆಂಗಿನಕಾಯಿ, ಕಾಳುಮೆಣಸು, ರಸಗೊಬ್ಬರ ಸಾಗಾಟ, ಹುಲ್ಲು ಕೊಂಡೊಯ್ಯಲು ಸೂಕ್ತ ವಾಹನಕ್ಕೆ ಹುಡುಕಿದಾಗ ಸಿಕ್ಕಿದ್ದು ಹಳೆ ಡಾಲ್ಫಿನ್ ಕಾರು.
20 ಕಿಮೀ ಮೈಲೇಜ್
ಪೆಟ್ರೋಲ್ ಬಳಸಿ ಓಡಾಡುವ ಈ ಕಾರು ಲೀಟರ್‌ಗೆ 20 ಕಿ.ಮೀ ಮೈಲೇಜ್ ಕೊಡುತ್ತದೆ. 4 ಗೇರ್ ಇದ್ದು, ಚಕ್ರಗಳ ಟರ್ನಿಂಗ್ ರೇಡಿಯಸ್ 4.3 ಮೀಟರ್. ಈ ಕಾರಿನ ಬಾಡಿ ಪೂರ್ತಿ ಫೈಬರ್‌ನಿಂದ ನಿರ್ಮಿತವಾಗಿದ್ದರಿಂದ ಕಾರಿನ ಹಿಂಭಾಗ ಕೊರೆದು, ಎದುರಿನ ಸೀಟ್ ಮಾತ್ರ ಉಳಿಸಿ ಹಿಂಭಾಗವನ್ನು ವಸ್ತು ಹೇರಲು ಬಳಸುತ್ತಾರೆ. 10 ವರ್ಷದಿಂದ ಯಶಸ್ವಿಯಾಗಿ ಬಳಸುತ್ತಿದ್ದಾರೆ. ಸ್ಥಳೀಯ ಮೆಕ್ಯಾನಿಕ್ ಒಬ್ಬರು ಭಟ್ಟರಿಗೆ ಈ ಕಾರನ್ನು ಪುನರ್‌ವಿನ್ಯಾಸಗೊಳಿಸಿ ಕೊಟ್ಟಿದ್ದಾರೆ. ಪುನರ್‌ವಿನ್ಯಾಸಕ್ಕೆ ಮಾರುತಿ ಕಾರಿನ ಕೆಲ ಬಿಡಿ ಭಾಗಗಳನ್ನೂ ಬಳಸಲಾಗಿದೆ.
-ಕೃಷ್ಣಮೋಹನ ತಲೆಂಗಳ
- krishnamohan@kannadaprabha.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


